1984ರಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಗುಜರಾತ್​ನಲ್ಲಿ ಗಲಭೆ ತಡೆದಿದ್ದ ಪ್ರಧಾನಿ ಮೋದಿ

|

Updated on: Aug 26, 2024 | 11:27 AM

ಅದು 1984ರ ಸಮಯ ಗುಜರಾತ್​ನ ಪ್ರಾಂತಿಜ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿತ್ತು, ಗಲಭೆಗಳು ನಡೆಯುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಉಪಾಯ ಮಾಡಿ ಕೃಷ್ಣ ಜನ್ಮಾಷ್ಟಮಿಯಂದು ಗಲಭೆಯನ್ನು ನಿಲ್ಲಿಸಿ ಎಲ್ಲರೂ ಒಗ್ಗೂಡುವಂತೆ ಮಾಡಿದ್ದರು. ಕೃಷ್ಣ ಜನ್ಮಾಷ್ಟಮಿ ಹಾಗೂ ಮೋದಿಗಿರುವ ಸಂಬಂಧದ ಕುರಿತು ಇಲ್ಲಿದೆ ಮಾಹಿತಿ.

1984ರಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಗುಜರಾತ್​ನಲ್ಲಿ ಗಲಭೆ ತಡೆದಿದ್ದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಇಂದು ದೇಶದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಗುಜರಾತ್​ನ ದ್ವಾರಕಾದ ಶ್ರೀಕೃಷ್ಣನ ನಗರದಲ್ಲಿ ತುಂಬಾ ವಿಶೇಷವಾಗಿ ಕಾರ್ಯಕ್ರಮಗಳು ಜರುಗಲಿವೆ. ಸುದೀರ್ಘ ಕಾಲ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷ್ಣ ಜನ್ಮಾಷ್ಟಮಿಗೆ ಸಂಬಂಧಿಸಿದ ಕುತೂಹಲಕಾರಿ ಕಥೆ ಇದೆ.

1984ರಲ್ಲಿ ಇದೇ ಹಬ್ಬದಂದು ಜನರೆಲ್ಲರನ್ನು ಒಗ್ಗೂಡಿಸಿ ಗಲಭೆಯನ್ನು ನಿಲ್ಲಿಸಿದ್ದರು. ಆಗ ನರೇಂದ್ರ ಮೋದಿಯವರು ಚಿಕ್ಕವರು. ಆರ್​ಎಸ್​ಎಸ್​ನಲ್ಲಿ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. 1984ರಲ್ಲಿ ಗುಜರಾತ್​ನ ಸಬರ್ಕಾಂತ ಜಿಲ್ಲೆಯ ಪ್ರಂತಿಜ್ ಪಟ್ಟಣವು ಕೋಮುಗಲಭೆಯ ಅಂಚಿನಲ್ಲಿತ್ತು. ಉದ್ವಿಗ್ನತೆ ತುಂಬಾ ಹೆಚ್ಚಿತ್ತು. ಹಿಂಸಾತ್ಮಕ ಅಂಶಗಳು ಇಡೀ ಪ್ರದೇಶದಲ್ಲಿ ವಿನಾಶವನ್ನು ಸೃಷ್ಟಿಸುತ್ತಿತ್ತು. ಇದು ಹಿಂದೂ ಸಮಾಜದಲ್ಲಿ ಭಯ ಹುಟ್ಟಿಸಿತ್ತು. ಅನೇಕ ಕುಟುಂಬಗಳು ವಲಸೆ ಹೋಗಬೇಕಾಯಿತು.

ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರಂತಿಜ್​ನ ಕೆಲವು ಕಾರ್ಯಕರ್ತರು ಸುಮಾರು 100 ಕಿಲೋಮೀಟರ್ ಪ್ರಯಾಣಿಸಿ ಅಹಮದಾಬಾದ್​ಗೆ ನರೇಂದ್ರ ಮೋದಿ ಮಾರ್ಗದರ್ಶನ ಪಡೆಯಲು ಬಂದಿದ್ದರು.
ಅವರ ಸಮಸ್ಯೆಗಳನ್ನು ಆಲಿಸಿದ ಮೋದಿ, ನೀವೆಲ್ಲರೂ ಪ್ರಂತಿಜ್​ಗೆ ಮರಳಬೇಕು ಎಂದು ಹೇಳಿದರು, ಈ ಬಿಕ್ಕಟ್ಟನ್ನು ಪರಿಹರಿಸಲು ನಮ್ಮ ಬಳಿ ಉಪಾಯವಿದೆ ಎಂದರು.

ಶೀಘ್ರದಲ್ಲೇ ಮೋದಿ ಪ್ರಂತಿಜ್​ ತಲುಪಿದರು ಅವರು ಎರಡು ಪ್ರಮುಖ ಪ್ರದೇಶಗಳಲ್ಲಿ ಸಭೆಯಗಳನ್ನು ಆಯೋಜಿಸಿದರು. ಆರ್​ಎಸ್​ಎಸ್​ ಕಾರ್ಯಕರ್ತರು, ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳು, ಮುಖಂಡರು, ಆಧ್ಯಾತ್ಮಿಕ ಸಂಘಟನೆಗಳು ಮತ್ತು ಇತರೆ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು.
ಪ್ರಂತಿಜ್​ನಲ್ಲಿ ಕೆಲವು ಆರ್​ಎಸ್​ಎಸ್​ ಕಾರ್ಯಕರ್ತರು, ಶಾಖೆಗಳಿದ್ದವು, ವಿಸ್ತೃತ ಒಕ್ಕೂಟವನ್ನು ಒಗ್ಗೂಡಿಸುವುದೇ ಮೊದಿ ಗುರಿಯಾಗಿತ್ತು.

ಮತ್ತಷ್ಟು ಓದಿ:Krishna Janmashtami: ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ ಹೇಗೆ? ಜನ್ಮಾಷ್ಟಮಿ ಮಂತ್ರವೇನು?

ಹಿಂಸಾಚಾರದಿಂದ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ನರೇಂದ್ರ ಮೋದಿ ಹೇಳಿದ್ದರು. ಹಿಂಸೆ ಅಂತರವನ್ನು ಹೆಚ್ಚಿಸುತ್ತದೆ,ನಿಜವಾದ ಪರಿಹಾರವು ಏಕತೆಯಲ್ಲಿದೆ. ಸಾಮಾಜಿಕ ಕಾರ್ಯಕ್ರಮದ ಮೂಲಕ ಹಿಂದೂ ಸಮಾಜ ಒಂದಾಗಬೇಕು ಎಂದು ಹೇಳಿದ್ದರು.
ನ್ಮಾಷ್ಟಮಿ ಹತ್ತಿರವಿತ್ತು. ಈ ಅವಕಾಶವನ್ನು ಬಳಸಿಕೊಂಡು ಸಮಾಜವನ್ನು ಒಗ್ಗೂಡಿಸಲು ಸಲಹೆ ನೀಡಿದರು.

ಪ್ರಂತಿಜ್​ನ ಜನರು ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಮೆಚ್ಚಿದ್ದರು.ಎಲ್ಲರೂ ಉತ್ಸಾಹದಿಂದ ಸ್ವಾಗತಿಸಿದರು. ಅದ್ಧೂರಿ ಜನ್ಮಾಷ್ಟಮಿ ಮೆರವಣಿಗೆಯನ್ನು ಆಯೋಜಿಸಲು ಮೋದಿ ಕರೆ ನೀಡಿದರು.
ಇದರಿಂದ ವಿವಿಧ ಪಂಗಡಗಳು ಮತ್ತು ಸಮುದಾಯಗಳು ಒಂದಾಗುತ್ತವೆ ಎಂದು ಹೇಳಿದರು. ಭವ್ಯ ಮೆರವಣಿಗೆ ಆಯೋಜಿಸಬೇಕು. ಇದು ಶ್ರೀಕೃಷ್ಣನ ಚಿತ್ರಗಳಿಂದ ಅಲಂಕರಿಸಲ್ಪಟ್ಟ ರಥಗಳನ್ನು ಒಳಗೊಂಡಿರಬೇಕು ಎಂದು ಹೇಳಿದರು.

ಟ್ರ್ಯಾಕ್ಟರ್, ಎತ್ತಿನ ಬಂಡಿ ಸೇರಿದಂತೆ ವಾಹನಗಳನ್ನು ರಥಗಳಾಗಿ ಅಲಂಕರಿಸಲು ಜನರನ್ನು ಉತ್ತೇಜಿಸಲಾಯಿತು. ಅತ್ಯುತ್ತಮವಾಗಿ ಅಲಂಕರಿಸಿದ ರಥಕ್ಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿಯೊಂದು ಪ್ರದೇಶದ ಜನರು ಇದರಲ್ಲಿ ಭಾಗವಹಿಸುವಂತೆ ಕೋರಲಾಯಿತು. ಊಟ, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಯಾವುದೇ ಜಾತಿ, ಪಂಗಡಗಳ ಭೇದವಿಲ್ಲದೆ ಹಿಂದೂ ಸಮಾಜದ ಎಲ್ಲ ವರ್ಗದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶೋಭಾ ಯಾತ್ರೆಯ ದಿನ ಪ್ರಂತಿಜ್​ನಲ್ಲಿ ವಿಭಿನ್ನ ದೃಶ್ಯ ಕಂಡು ಬಂತು. ಸಾವಿರಾರು ಜನರು ಜಮಾಯಿಸಿದ್ದರು, ರಸ್ತೆಗಳು ತುಂಬಾ ಜನಸಂದಣಿಯಿಂದ ಕೂಡಿದ್ದವು, ಕಾಲಿಡಲು ಸ್ಥಳವಿಲ್ಲ. ರಸ್ತೆಗಳು ಅಲಂಕೃತ ರಥಗಳಿಂದ ತುಂಬಿದ್ದವು. ಭಜನೆ, ಸಂಗೀತ ಮತ್ತು ನೃತ್ಯದಿಂದ ವಾತಾವರಣವು ಉತ್ತಮವಾಗಿತ್ತು. ನಗರದಲ್ಲಿ ಹಿಂದೂ ಸಮಾಜದ ಒಗ್ಗಟ್ಟು ಹಿಂಸಾಚಾರವನ್ನು ತಡೆಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ