ದುಬೈನಿಂದ ಬರ್ತಾ ಪಾಂಡ್ಯಾ ಅಕ್ರಮವಾಗಿ ಚಿನ್ನ ತಂದ್ರಾ? ಮುಂಬೈ ವಿ. ನಿಲ್ದಾಣದಲ್ಲಿ ವಿಚಾರಣೆ

|

Updated on: Nov 12, 2020 | 9:07 PM

ಮುಂಬೈ: ಕ್ರಿಕೆಟಿಗ ಕೃನಾಲ್ ಪಾಂಡ್ಯಾ ಮೇಲೆ ಅಕ್ರಮ ಚಿನ್ನ ಸಾಗಣೆ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯಾನನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತಡೆಹಿಡಿದು ವಿಚಾರಣೆ ನಡೆಸುತ್ತಿದೆ. ಯುಎಇನಿಂದ ಐಪಿಎಲ್ ಮುಗಿಸಿಕೊಂಡ ಮುಂಬೈಗೆ ಬಂದಿಳಿದಿದ್ದ ಕೃನಾಲ್ ಪಾಂಡ್ಯಾ ಬಳಿ ಇದ್ದ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ಚಿನ್ನ ತಂದ ದಾಖಲೆ ಕೇಳುತ್ತಿರುವುದಾಗಿ ಮಾಹಿತಿ ತಿಳಿದುಬಂದಿದೆ. ಸದ್ಯ ಕೃನಾಲ್ ಪಾಂಡ್ಯಾ, ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್ ಆಗಿದ್ದಾರೆ. ಮುಂಬೈ ತಂಡದಲ್ಲಿ […]

ದುಬೈನಿಂದ ಬರ್ತಾ ಪಾಂಡ್ಯಾ ಅಕ್ರಮವಾಗಿ ಚಿನ್ನ ತಂದ್ರಾ? ಮುಂಬೈ ವಿ. ನಿಲ್ದಾಣದಲ್ಲಿ ವಿಚಾರಣೆ
Follow us on

ಮುಂಬೈ: ಕ್ರಿಕೆಟಿಗ ಕೃನಾಲ್ ಪಾಂಡ್ಯಾ ಮೇಲೆ ಅಕ್ರಮ ಚಿನ್ನ ಸಾಗಣೆ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯಾನನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತಡೆಹಿಡಿದು ವಿಚಾರಣೆ ನಡೆಸುತ್ತಿದೆ.

ಯುಎಇನಿಂದ ಐಪಿಎಲ್ ಮುಗಿಸಿಕೊಂಡ ಮುಂಬೈಗೆ ಬಂದಿಳಿದಿದ್ದ ಕೃನಾಲ್ ಪಾಂಡ್ಯಾ ಬಳಿ ಇದ್ದ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ಚಿನ್ನ ತಂದ ದಾಖಲೆ ಕೇಳುತ್ತಿರುವುದಾಗಿ ಮಾಹಿತಿ ತಿಳಿದುಬಂದಿದೆ. ಸದ್ಯ ಕೃನಾಲ್ ಪಾಂಡ್ಯಾ, ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್ ಆಗಿದ್ದಾರೆ.

ಮುಂಬೈ ತಂಡದಲ್ಲಿ ನಿರ್ಣಾಯಕ ಆಟಗಾರನಾಗಿರುವ ಕ್ರುನಾಲ್ ಪಾಂಡ್ಯ ಈ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. 16 ಪಂದ್ಯಗಳಿಂದ ಕೇವಲ 6 ವಿಕೆಟ್ ಪಡೆದಿರುವ ಪಾಂಡ್ಯ ಬ್ಯಾಟಿಂಗ್​ನಲ್ಲಿ ಒಟ್ಟು 109 ರನ್ ಗಳಿಸಿದರು. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಪರ ಕ್ರುನಾಲ್ ಗೆಲುವಿನ ರನ್ ಗಳಿಸಿದರು.