ಕುರುಕ್ಷೇತ್ರ ವಿಶ್ವ ವಿದ್ಯಾಲಯ ಆನ್​ಲೈನ್​ ಕ್ಲಾಸ್​ ವೇಳೆ ಬ್ಲೂ ಫಿಲಂ​ ಪ್ರಸಾರ; ಬೆಚ್ಚಿಬಿದ್ದ ವಿದ್ಯಾರ್ಥಿನಿಯರು

| Updated By: ಸಾಧು ಶ್ರೀನಾಥ್​

Updated on: Jan 09, 2021 | 6:16 PM

ಕುರೇಕ್ಷೇತ್ರ ವಿಶ್ವವಿದ್ಯಾಲಯದ ಮಾಸ್ಟರ್​ ಆಫ್​ ಸೋಷಿಯಲ್​ ವರ್ಕ್​ನ (ಎಂಎಸ್​ಡಬ್ಲ್ಯು) 40ಕ್ಕೂ ಅಧಿಕ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದರು. ಕ್ಲಾಸ್​ ನಡೆಯುತ್ತಿರುವ ಮಧ್ಯೆಯೇ ಬ್ಲ್ಯೂಫಿಲ್ಮ್​ ಪ್ರಸಾರಗೊಂಡಿದೆ.

ಕುರುಕ್ಷೇತ್ರ ವಿಶ್ವ ವಿದ್ಯಾಲಯ ಆನ್​ಲೈನ್​ ಕ್ಲಾಸ್​ ವೇಳೆ ಬ್ಲೂ ಫಿಲಂ​ ಪ್ರಸಾರ; ಬೆಚ್ಚಿಬಿದ್ದ ವಿದ್ಯಾರ್ಥಿನಿಯರು
Follow us on

ಕುರುಕ್ಷೇತ್ರ: ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಅನೇಕ ಮಂದಿ ಆನ್​ಲೈನ್​ ಮೂಲಕವೇ ವ್ಯವಹಾರ ಮಾಡುತ್ತಿದ್ದಾರೆ. ಶಾಲಾ-ಕಾಲೇಜುಗಳನ್ನು ಆನ್​ಲೈನ್​ ಮೂಲಕ ನಡೆಸಲಾಗುತ್ತಿದೆ. ಐಟಿ ಕಂಪೆನಿಯವರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದು, ವಿಡಿಯೋ ಕಾಲಿಂಗ್​ ಮೂಲಕ ಮೀಟಿಂಗ್ ಅಟೆಂಡ್​  ಮಾಡುತ್ತಿದ್ದಾರೆ. ಈ ವೇಳೆ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಈಗ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲೂ ಶಾಲಾ ಶಿಕ್ಷಕರು ಇರುಸು-ಮುರುಸಿಗೆ ಒಳಗಾಗುವ ಪ್ರಕರಣವೊಂದು ನಡೆದಿದೆ.

ಕುರೇಕ್ಷೇತ್ರ ವಿಶ್ವವಿದ್ಯಾಲಯದ ಮಾಸ್ಟರ್​ ಆಫ್​ ಸೋಷಿಯಲ್​ ವರ್ಕ್​ (ಎಂಎಸ್​ಡಬ್ಲ್ಯು) ವಿಭಾಗದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದರು. ಕ್ಲಾಸ್​ ನಡೆಯುತ್ತಿರುವ ಮಧ್ಯೆಯೇ ಬ್ಲೂ ಫಿಲಂ ಪ್ರಸಾರಗೊಂಡಿದೆ. ಅನಿರೀಕ್ಷಿತ ಘಟನೆಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿಯರು ಕ್ಲಾಸ್​ನಿಂದ ಎಕ್ಸಿಟ್​ ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಕುರುಕ್ಷೇತ್ರ ವಿವಿ ಛಾನ್ಸಲರ್ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.

ಎಂಎಸ್​ಡಬ್ಲ್ಯು ವಿಭಾಗದಲ್ಲಿ ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ಈ ಮೊದಲು ಆನ್​ಲೈನ್​ ಕ್ಲಾಸ್​ ವೇಳೆ ಸಾಂಗ್​ ಹಾಗೂ ಬೈಗುಳಗಳನ್ನು ಪ್ಲೇ ಮಾಡಲಾಗಿತ್ತು.

ಫೀಸ್​ ಕಟ್ಟದ ಮಕ್ಕಳ ಆನ್​ಲೈನ್ ಕ್ಲಾಸ್​ಗೆ ಬ್ರೇಕ್.. ಐಡಿ ಬ್ಲಾಕ್​ ಮಾಡಿದ ಶಾಲಾ ಆಡಳಿತ ಮಂಡಳಿ!