ಭಾರತದ ಲಸಿಕೆ ಅತ್ಯಂತ ಸುರಕ್ಷಿತ, ಪರಿಣಾಮಕಾರಿ ಮತ್ತು ಅಗ್ಗ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಮೊದಲ ಕೇಸ್ ಪತ್ತೆಯಾಗಿ ವರ್ಷ ಕಳೆಯುವ ಮುನ್ನವೇ ಲಸಿಕೆ ವಿತರಣೆ ಆರಂಭಿಸಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿ. ಭಾರತವು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಅಗ್ಗದ ಬೆಲೆಯಲ್ಲಿ ನೀಡುತ್ತಿದೆ. ದೇಶಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ಸಿಗುವಂತೆ ಮಾಡಲು ಹೆಜ್ಜೆ ಇಟ್ಟಿದೆ.
ದೆಹಲಿ: ಜನವರಿ 14, 15 ರಂದು ದೇಶದಲ್ಲೆಡೆ ಲೊಹಿರಿ, ಮಕರ ಸಂಕ್ರಾಂತಿ, ಪೊಂಗಲ್, ಮಘು ಬಿಹು ಹಬ್ಬಗಳ ಆಚರಣೆ ಇದೆ. ಹೀಗಾಗಿ ಸಂಕ್ರಮಣದ ಬಳಿಕ, ಜನವರಿ 16ರಿಂದ ಲಸಿಕೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ವರ್ಷ ಕಳೆಯುವ ಮುನ್ನವೇ ಲಸಿಕೆ ವಿತರಣೆ: ಇದು ನಮ್ಮ ಹೆಮ್ಮೆ ಮೊದಲ ಕೇಸ್ ಪತ್ತೆಯಾಗಿ ವರ್ಷ ಕಳೆಯುವ ಮುನ್ನವೇ ಲಸಿಕೆ ವಿತರಣೆ ಆರಂಭಿಸಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿ ಎಂದೂ ಸಚಿವ ಹರ್ಷವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತವು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಅಗ್ಗದ ಬೆಲೆಯಲ್ಲಿ ನೀಡುತ್ತಿದೆ. ದೇಶಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ಸಿಗುವಂತೆ ಮಾಡಲು ಹೆಜ್ಜೆ ಇಟ್ಟಿದೆ. ಭಾರತದಲ್ಲಿ 2020 ರ ಜನವರಿ 30 ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು ಇದೀಗ ನಾವು ವೈರಸ್ ಮಣಿಸಲು ಸಿದ್ಧರಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಮುಹೂರ್ತ ಫಿಕ್ಸ್ ಆಯ್ತು! ಸದ್ಯಕ್ಕೆ 3 ಕೋಟಿ ಲಸಿಕೆ ವಿತರಣೆ