K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?

|

Updated on: Jul 08, 2021 | 12:45 PM

ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿ ಯುವ ರಾಜಕಾರಣಿಯಾಗಬಲ್ಲರು ಅನ್ನುತ್ತಿದೆ ತಮಿಳುನಾಡು ಬಿಜೆಪಿ ವಲಯ. ಹಾಗಾಗಿ, ಕುತೂಹಲದಿಂದ ನೋಡಬೇಕಿದೆ ಮುಂದಿನ ರಾಜಕೀಯ ಬೆಳವಣಿಗೆಗಳನ್ನು..

K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?
K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?
Follow us on

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ​ಅಳೆದೂ ತೋಗಿ ಸಮತೋಲಿತ ಅರ್ಹ ಸಂಪುಟವನ್ನೇ ಕಟ್ಟಿಕೊಂಡಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನಿನ್ನೆ ಭೂಕಂಪನ ಮಾದರಿ ಸಂಪುಟ ವಿಸ್ತರಣೆ ಆಗಿದ್ದರೆ ಅದರ ಪಶ್ಚಾತ್​​ ಕಂಪನಗಳು ಸದ್ಯದಲ್ಲೇ ರಾಜ್ಯಗಳಲ್ಲಿ ಕಂಡುಬರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಬಿಜೆಪಿ ಪಕ್ಷದ ವತಿಯಿಂದ ಅನೇಕ ರಾಜ್ಯಗಳಲ್ಲಿ ಭಾರೀ ಸ್ಥಿತ್ಯಂತರಗಳು ಕಾಣಬರಲಿವೆ. ಪ್ರಧಾನಿ ಮೋದಿ ಕೆಲ ನಾಯಕರನ್ನು ತಮ್ಮ ಸಂಪುಟಕ್ಕೆ ಸೆಳೆದುಕೊಂಡಿದ್ದರೆ ಅದೇ ಮೂಲಗಳಲ್ಲಿ ಬೇರೆ ನಾಯಕರುಗಳಿಗೆ ಮಣೆ ಹಾಕುವ ಜರೂರತ್ತು ಪಕ್ಷಕ್ಕೆ ಇದೆ.

ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲೊಂದು ರಾಜಕೀಯ ಬದಲಾವಣೆ ಆಗುವ ಅಂದಾಜಿದೆ. 2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ ಬಿಜೆಪಿ ಪಕ್ಷವು ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್​ ಮುರುಗನ್ (Dr. L. Murugan)​ ಅವರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಖಾತೆ ಸಚಿವರನ್ನಾಗಿ (MoS Ministry of Fisheries, Animal Husbandry and Dairying) ಪ್ರಧಾನಿ ಮೋದಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವಾಗುವುದು ಖಚಿತ. ಆ ಸ್ಥಾನಕ್ಕೆ ಕೆ. ಅಣ್ಣಾಮಲೈ ಉಚಿತ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ.

ಸೋಲುಂಡ ಅಣ್ಣಾಮಲೈಗೂ ಬೇಕಿದೆ ಪೊಲಿಟಿಕಲ್​ ಟಾನಿಕ್: 

ಕಳೆದ ವಿಧಾಸನಭೆ ಚುನಾವಣೆಯಲ್ಲಿ ಪಕ್ಷ ಮತ್ತು ವೈಯಕ್ತಿವಾಗಿ ಸೋಲುಂಡ ಅಣ್ಣಾಮಲೈ (K Annamalai) ಒಂದಷ್ಟು ಭ್ರಮನಿರಸಗೊಂಡಿರುವುದಂತೂ ದಿಟ. ಆದರೆ ಅವರೊಬ್ಬ ಸಮರ್ಥ ನಾಯಕ ರೂಪುಗೊಳ್ಳುತ್ತಿದ್ದಾನೆ ಅನ್ನುತ್ತಿದೆ ತಮಿಳುನಾಡು ಬಿಜೆಪಿ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಕಟ್ಟುವಲ್ಲಿ ಕಟ್ಟಾಳಾಗಿ ಅಣ್ಣಾಮಲೈರನ್ನು ತೊಡಗಿಸಬಹುದು ಎಂಬುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ಅನಿವಾರ್ಯವಾಗಿ ಅದು ದಿಲ್ಲಿ ನಾಯಕರ ಅನಿಸಿಕೆಯೂ ಆಗಿರಬಹುದು. ಹಾಗಾಗಿ ಸದ್ಯದಲ್ಲೆ ಮಾಜಿ ಐಪಿಎಸ್​ ಕೆ. ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ (TN BJP) ಒಲಿದು ಬಂದರೆ ಅಚ್ಚರಿಯಿಲ್ಲ.

ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿ ಯುವ ರಾಜಕಾರಣಿಯಾಗಬಲ್ಲರು ಅನ್ನುತ್ತಿದೆ ತಮಿಳುನಾಡು ಬಿಜೆಪಿ ವಲಯ. ಹಾಗಾಗಿ, ಕುತೂಹಲದಿಂದ ನೋಡಬೇಕಿದೆ ಮುಂದಿನ ರಾಜಕೀಯ ಬೆಳವಣಿಗೆಗಳನ್ನು..

ಸೋಲುಗಳು ಜೀವನದ ಒಂದು ಭಾಗ, ಇಂಥ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ ಟ್ವೀಟ್

(L Murugan joins pm modi cabinet former ips K Annamalai may become Tamil Nadu BJP president)

Published On - 12:39 pm, Thu, 8 July 21