Lakhimpur Kheri Violence: ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 06, 2021 | 3:14 PM

Rahul Gandhi: ರಾಹುಲ್ ಗಾಂಧಿ ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್ ಮತ್ತು ಚರಣ್ ಜಿತ್ ಸಿಂಗ್ ಚನ್ನಿ ಅವರು ಲಖನೌಗೆ ತೆರಳಿ ಅಲ್ಲಿಂದ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಹೋಗಲು ಉದ್ದೇಶಿಸಿದ್ದಾರೆ.

Lakhimpur Kheri Violence: ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ
ರಾಹುಲ್ ಗಾಂಧಿ
Follow us on

ಲಖನೌ: ಉತ್ತರ ಪ್ರದೇಶ ಸರ್ಕಾರವು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಮೂವರಿಗೆ ಲಖಿಂಪುರ್ ಖೇರಿಗೆ (Lakhimpur Kheri)ಭೇಟಿ ನೀಡಲು ಅನುಮತಿ ನೀಡಿದೆ. ಉತ್ತರ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಐದು ಜನರ ಗುಂಪುಗಳಾಗಿ ಲಖಿಂಪುರ್ ಖೇರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. “ಯಾರ ಭೇಟಿಯನ್ನೂ ನಿರ್ಬಂಧಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿದ್ದರೂ, ಅವರು ಶಾಂತಿಯನ್ನು ಕಾಪಾಡಿಕೊಳ್ಳಲು ಮಾತ್ರ “ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್ ಮತ್ತು ಚರಣ್ ಜಿತ್ ಸಿಂಗ್ ಚನ್ನಿ ಅವರು ಲಖನೌಗೆ ತೆರಳಿ ಅಲ್ಲಿಂದ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಹೋಗಲು ಉದ್ದೇಶಿಸಿದ್ದಾರೆ. ಹೊರಡುವ ಮುನ್ನ ಗಾಂಧಿ ದೇಶದಲ್ಲಿ ರೈತರ ಮೇಲೆ “ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದರು ಮತ್ತು ಅವರನ್ನು “ಅವಮಾನಿಸಿದ್ದಕ್ಕಾಗಿ” ಸರ್ಕಾರವನ್ನು ಟೀಕಿಸಿದ್ದಾರೆ.


ಅದೇ ವೇಳೆ ರಾಜ್ಯ ಸಚಿವರಾದ ಮಿಶ್ರಾ, ಮಧ್ಯಾಹ್ನದ ನಂತರ ದೆಹಲಿಯ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಬಂದಿದ್ದಾರೆ. ಪಿಟಿಐ ಸುದ್ದಿಸಂಸ್ಥೆಯ ಪ್ರಕಾರ ಮಿಶ್ರಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಮತ್ತು ಭಾನುವಾರದ ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಲಖಿಂಪುರ್ ಖೇರಿಯಲ್ಲಿ ಭಾನುವಾರ ರೈತ ಪ್ರತಿಭಟನಾಕಾರರ ಗುಂಪಿನ ಮೇಲೆ ಹರಿಸಿದ ಮೂರು ಕಾರುಗಳಲ್ಲಿ ಒಂದನ್ನು ಓಡಿಸುತ್ತಿದ್ದ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಬಂಧಿಸಲು ಕೃಷಿ ನಾಯಕರು ಉತ್ತರ ಪ್ರದೇಶ ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶ ನೀಡಿದ್ದಾರೆ. ಘಟನೆಯಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದು, ನಂತರದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.


ಲಖನೌ ಏರ್​​ಪೋರ್ಟ್​ನಲ್ಲೇ ರಾಹುಲ್​ ಗಾಂಧಿ ಧರಣಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌ ಏರ್​​ಪೋರ್ಟ್​ನಲ್ಲೇ ಧರಣಿ  ಕುಳಿತಿದ್ದಾರೆ  ಎಂದು ಮೂಲಗಳು ತಿಳಿಸಿವೆ. ಲಖಿಂಪುರ್ ಖೇರಿಗೆ ಪೊಲೀಸ್ ವಾಹನದಲ್ಲಿ ಮಾತ್ರ ಹೋಗಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ರಾಹುಲ್ ಧರಣಿ ಕುಳಿತಿದ್ದಾರೆ. ನಾವು ನಮ್ಮ ಕಾರಿನಲ್ಲಿ (ಲಖಿಂಪುರ್ ಖೇರಿಗೆ) ಹೋಗಲು ಬಯಸುತ್ತೇವೆ ಆದರೆ ಅವರು (ಪೊಲೀಸರು) ನಮ್ಮನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಲು ಬಯಸುತ್ತಾರೆ. ನನ್ನ ವೈಯಕ್ತಿಕ ವಾಹನದಲ್ಲಿ ನನ್ನನ್ನು ಹೋಗಲು ಬಿಡಿ ಎಂದು ನಾನು ಅವರನ್ನು ಕೇಳಿದೆ. ಅವರು ಏನೇನೋ ಯೋಚನೆ ಮಾಡುತ್ತಿದ್ದಾರೆ . ನಾನು ಇಲ್ಲಿ ಕುಳಿತಿದ್ದೇನೆ “ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಹುಲ್ ಗಾಂಧಿಗೆ ವಿಮಾನ ನಿಲ್ದಾಣದಲ್ಲಿ  ತಡೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಲಕ್ನೋಗೆ ವಿಮಾನ ಹತ್ತದಂತೆ ತಡೆಯಲಾಯಿತು ಎಂದು ಮೂಲಗಳು ವರದಿ ಮಾಡಿವೆ. ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ ಮಾಡಲು ರಾಹುಲ್ ತೆರಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಆಡಳಿತದ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ನಾಲ್ಕು ಸಹೋದ್ಯೋಗಿಗಳ ಬುಕಿಂಗ್ ಗುರುತಿಸುವ ಡಿಜಿಟಲ್ ಐಡಿ ಪಿಎನ್ಆರ್ ರದ್ದಾದ ಕಾರಣ ವಿಮಾನ ಹತ್ತುವ ಮುನ್ನ ವಿಮಾನ ನಿಲ್ದಾಣದಲ್ಲಿ ಅವರಿಗೆ ಕೆಲವು ಕಾಲ ತಡೆಯೊಡ್ಡಲಾಯಿತು.ಆಮೇಲೆ ಅವರಿಗೆ ಅನುಮತಿ ನೀಡಲಾಯಿತು ಎಂದು ಮೂಲಗಳು ಹೇಳಿವೆ. ರಾಹುಲ್ ಜತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ, ಕೆಸಿ ವೇಣುಗೋಪಾಲ್ ಮತ್ತು ಸಚಿನ್ ಪೈಲಟ್ ಇದ್ದರು.
ಲಕ್ನೋಗೆ ಹೋಗುವ ಮುನ್ನ ಗಾಂಧಿ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು “ರೈತರ ಮೇಲೆ ವ್ಯವಸ್ಥಿತ ದಾಳಿ” ಎಂದು ಖಂಡಿಸಿದರು ಮತ್ತು “ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು …” ಎಂದು ಹೇಳಿದರು.

“ಹಿಂದೆ ಪ್ರಜಾಪ್ರಭುತ್ವವಿತ್ತು (ಈಗ) ಭಾರತದಲ್ಲಿ ಸರ್ವಾಧಿಕಾರವಿದೆ. ರಾಜಕಾರಣಿಗಳು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ. ನಾವು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನಿನ್ನೆಯಿಂದ ಹೇಳಲಾಗುತ್ತಿದೆ” ಎಂದು ಅವರು ಹೇಳಿದರು.

“ಹಿಂದುಸ್ತಾನ್ ಕಿ ಆವಾಜ್ ಕೊ ಕುಚ್ಲಾ ಜಾ ರಹಾ ಹೈ (ಹಿಂದುಸ್ತಾನದ ದನಿಯನ್ನು ದಮನಿಸಲಾಗುತ್ತಿದೆ).”
ಇದಕ್ಕೆ ಒಂದು ಮಿತಿಯಿದೆ. ಬೇಗ ಅಥವಾ ನಂತರ ಸ್ಫೋಟ ಉಂಟಾಗುತ್ತದೆ. ನಾವು ಅವರಿಗೆ (ಆಡಳಿತಾರೂಢ ಬಿಜೆಪಿ) ‘ಇದನ್ನು ಮಾಡಬೇಡಿ’ ಎಂದು ಹೇಳಲು ಪ್ರಯತ್ನಿಸುತ್ತಿದ್ದೇವೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಒತ್ತಾಯಿಸುತ್ತಿದ್ದೇವೆ. ಈ ದೇಶದಲ್ಲಿ ನಿಮ್ಮನ್ನು ಒಬ್ಬ ಸಚಿವರ ಮಗನಿಂದ ನಡೆಸಲಾಗುವುದಿಲ್ಲ ಎಂಬ ವಿಶ್ವಾಸ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ “ಎಂದು ಅವರು ಹೇಳಿದರು.

ಇದನ್ನೂ ಓದಿ: Lakhimpur Kheri ಲಖಿಂಪುರ್ ಖೇರಿ ಘಟನೆ: ರೈತ ಮುಖಂಡ ರಾಕೇಶ್ ಟಿಕಾಯತ್ ಸಹಾಯದೊಂದಿಗೆ ಪರಿಸ್ಥಿತಿ ನಿಯಂತ್ರಿಸಿದ್ದು ಹೇಗೆ?

Published On - 2:45 pm, Wed, 6 October 21