Lakhimpur Kheri ಲಖಿಂಪುರ್ ಖೇರಿ ಘಟನೆ: ರೈತ ಮುಖಂಡ ರಾಕೇಶ್ ಟಿಕಾಯತ್ ಸಹಾಯದೊಂದಿಗೆ ಪರಿಸ್ಥಿತಿ ನಿಯಂತ್ರಿಸಿದ್ದು ಹೇಗೆ?

Rakesh Tikait: ರಾಕೇಶ್ ಟಿಕಾಯತ್ ಲಕ್ನೋದಿಂದ ತನ್ನೊಂದಿಗೆ ಸಮನ್ವಯ ಸಾಧಿಸುವ ಅಧಿಕಾರಿಯನ್ನು ವಿರೋಧ ಪಕ್ಷದ ನಾಯಕರನ್ನು ದೂರವಿಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ ಅದು ರೈತರ ಮನವೊಲಿಸಲು ಮತ್ತು ಸಮಾಧಾನಪಡಿಸಲು ಕಷ್ಟವಾಗುತ್ತದೆ.

Lakhimpur Kheri ಲಖಿಂಪುರ್ ಖೇರಿ ಘಟನೆ: ರೈತ ಮುಖಂಡ ರಾಕೇಶ್ ಟಿಕಾಯತ್ ಸಹಾಯದೊಂದಿಗೆ ಪರಿಸ್ಥಿತಿ ನಿಯಂತ್ರಿಸಿದ್ದು ಹೇಗೆ?
ರಾಕೇಶ್ ಟಿಕಾಯತ್

ಉತ್ತರ ಪ್ರದೇಶ ಸರ್ಕಾರವು ಲಖಿಂಪುರ್ ಖೇರಿ (Lakhimpur Kheri) ಘಟನೆ ಮತ್ತಷ್ಟು ತೀವ್ರವಾಗುವುದನ್ನು ತಡೆಯಲು ತ್ವರಿತವಾಗಿ ಕಾರ್ಯನಿರ್ವಹಿಸಿತು, ಪ್ರತಿಭಟನಾ ನಿರತ ರೈತರು 24 ಗಂಟೆಗಳಲ್ಲಿ ಅಲ್ಲಿಂದ ಸರಿದರು ಮತ್ತು 25,000 ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಚದುರಿದರು. ಇದನ್ನು ಸಾಧಿಸಲು ಅವರಿಗೆ ಸಹಾಯ ಮಾಡಿದ ವ್ಯಕ್ತಿ ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ (Rakesh Tikait) ಮತ್ತು ಪಶ್ಚಿಮ ಯುಪಿ ನಾಯಕನೊಂದಿಗೆ ಹಲವು ವರ್ಷಗಳಿಂದ ವ್ಯವಹರಿಸಿದ ಹಿರಿಯ ಅಧಿಕಾರಿಗಳ ಗುಂಪು ಎಂದು ದಿ ಇಂಡಿಯನ್ ಎಕ್ಸ್​​​ಪ್ರೆಸ್ ವರದಿ ಮಾಡಿದೆ.  ಮೂಲಗಳು ಹೇಳುವಂತೆ ಈ ಅಧಿಕಾರಿಗಳು ಮಧ್ಯಸ್ಥಿಕೆಗಾಗಿ ಟಿಕಾಯತ್​​ರನ್ನು ಭೇಟಿ ಮಾಡಿದ್ದು ಅವರು ಆದಷ್ಟು ಬೇಗ ಲಖಿಂಪುರ್ ಖೇರಿಯನ್ನು ತಲುಪಿದರು. ಸೋಮವಾರ ಮಧ್ಯರಾತ್ರಿ 1.30 ಕ್ಕೆ ಆರಂಭವಾದ ಸಂಧಾನ ಮಾತುಕತೆ ಸುಮಾರು 12 ಗಂಟೆಗಳ ನಂತರ ಅಂದರೆ ಮಧ್ಯಾಹ್ನ 2 ಗಂಟೆಗೆ ಮುಕ್ತಾಯವಾಗಿತ್ತು.

ಟಿಕಾಯತ್ ಲಕ್ನೋದಿಂದ ತನ್ನೊಂದಿಗೆ ಸಮನ್ವಯ ಸಾಧಿಸುವ ಅಧಿಕಾರಿಯನ್ನು ವಿರೋಧ ಪಕ್ಷದ ನಾಯಕರನ್ನು ದೂರವಿಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ ಅದು ರೈತರ ಮನವೊಲಿಸಲು ಮತ್ತು ಸಮಾಧಾನಪಡಿಸಲು ಕಷ್ಟವಾಗುತ್ತದೆ. ಯೋಗಿ ಆದಿತ್ಯನಾಥ ಸರ್ಕಾರವು ರಸ್ತೆಗಳನ್ನು ನಿರ್ಬಂಧಿಸಿತು, ವಿಮಾನವನ್ನು ಇಳಿಯುವುದನ್ನು ನಿಲ್ಲಿಸಿತು ಮತ್ತು ನಾಯಕರನ್ನು ವಶಕ್ಕೆ ಪಡೆದುಕೊಂಡಿತು, ಮಂಗಳವಾರವೂ ಸಹ ಪ್ರತಿಪಕ್ಷಗಳು ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ.

ಟಿಕಾಯತ್ ನಿರ್ವಹಿಸಿದ ಪಾತ್ರ ಮಹತ್ವದ್ದಾಗಿದೆ ಏಕೆಂದರೆ ಅವರು ಕೃಷಿ ಪ್ರತಿಭಟನೆಗಳ ಮುಖವೆಂದು ಪರಿಗಣಿಸಲಾಗಿದೆ. ಚುನಾವಣೆಗೆ ಸಿದ್ಧವಾಗಿರುವ ರಾಜ್ಯಗಳಲ್ಲಿ ಈ ಪ್ರತಿಭಟನೆಗಳು ಪಶ್ಚಿಮ ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿವೆ, ಅಲ್ಲಿ ಟಿಕಾಯತ್(ಟಿಕಾಯತ್ ಅಪ್ಪ ಮಹೇಂದರ್ ಸಿಂಗ್ ಟಿಕಾಯತ್ ನಿಂದ ಆರಂಭವಾಗಿ) ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಮಾತುಕತೆಯಲ್ಲಿ ಅಥವಾ ರೈತರನ್ನು ಉದ್ದೇಶಿಸಿ ಮಾತನಾಡುವಾಗ ಯಾವುದೇ ಸಮಯದಲ್ಲಿ ಟಿಕಾಯತ್ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಆಕ್ರಮಣ ಅಥವಾ ಟೀಕೆಗಳನ್ನು ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು. ಪ್ರತಿಭಟನಾಕಾರರು ಚದುರಿದ ನಂತರವೇ ಅವರು ಲಖಿಂಪುರ್ ಖೇರಿಯನ್ನು ತೊರೆದರು.

ಇದನ್ನು ಖಚಿತಪಡಿಸಿಕೊಳ್ಳಲು ರೈತರೊಂದಿಗೆ ಸಭೆಗಳನ್ನು “ಮೂರು ಹಂತಗಳಲ್ಲಿ” ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದರು. ಮೊದಲಿಗೆ ಲಖಿಂಪುರ್ ಖೇರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಚೌರಾಶಿಯಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಧುಲ್ ಅವರು ರೈತ ನಿಯೋಗದೊಂದಿಗೆ ಮಾತುಕತೆ ನಡೆಸಿದರು, ಇದು ಟಿಕಾಯತ್ ನೇತೃತ್ವದಲ್ಲಿ ಮತ್ತು ಅವರ ಇಬ್ಬರು ಆಪ್ತರು ಮತ್ತು ನಾಲ್ಕು ಸ್ಥಳೀಯ ಸಿಖ್ ರೈತರನ್ನು ಒಳಗೊಂಡಿತ್ತು. ಅವರು ಮಧ್ಯದಲ್ಲಿ ಮಧ್ಯಂತರಗಳೊಂದಿಗೆ ಮೂರು ಬಾರಿ ಭೇಟಿಯಾದರು.

ನಂತರ ಕಾರ್ಯತಂತ್ರ ರೂಪಿಸಿದಂತೆ ಲಕ್ನೋ ರೇಂಜ್ ಐಜಿ ಲಕ್ಷ್ಮಿ ಸಿಂಗ್ ಮತ್ತು ವಿಭಾಗೀಯ ಆಯುಕ್ತ ರಂಜನ್ ಕುಮಾರ್ ಅವರು ಹಲವು ಸುತ್ತುಗಳಲ್ಲಿ ಚಹಾ ಮತ್ತು ಊಟದ ವಿರಾಮಗಳೊಂದಿಗೆ ಸಭೆಗಳನ್ನು ನಡೆಸಿದರು.
ಟಿಕಾಯತ್ ತಂಡವು ಮೂರು ಬೇಡಿಕೆಗಳನ್ನು ಮಂಡಿಸಿತು. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ವಿರುದ್ಧ ಕೊಲೆ ಪ್ರಕರಣದ ನೋಂದಣಿ ಎಫ್‌ಐಆರ್ ಪ್ರತಿಯನ್ನು ತಕ್ಷಣವೇ ಪ್ರಸ್ತುತಪಡಿಸುವುದು. ಮರಣ ಹೊಂದಿದೆ ರೈತರ ಪ್ರತಿ ಕುಟುಂಬಕ್ಕೆ 1 ಕೋಟಿ ಪರಿಹಾರ ಮತ್ತು ಅವರ ಸ್ಥಳೀಯ ಜಿಲ್ಲೆಯಲ್ಲಿ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ. ಪರಿಹಾರದ ಬೇಡಿಕೆಯನ್ನು ಕಡಿಮೆ ಮಾಡುವಂತೆ ಮತ್ತು ಕೆಲಸದ ನೀಡಬೇಕು ಎಂಬ ಒತ್ತಾಯವನ್ನು ಕೈಬಿಡುವಂತೆ ಕೇಳಿದಾಗ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು. ಆದಾಗ್ಯೂ, ದೀರ್ಘಕಾಲದವರೆಗೆ ಟಿಕಾಯತ್ ನೇತೃತ್ವದ ನಿಯೋಗವು ಅಲುಗಾಡಲಿಲ್ಲ.

ಸ್ಥಳದ ಸುತ್ತಲೂ ಜನಸಂದಣಿ ಹೆಚ್ಚಾಗುತ್ತಿದ್ದಂತೆ ಹಲವು ಉದ್ವಿಗ್ನ ಕ್ಷಣಗಳು ಇದ್ದವು ಎಂದು ಅಧಿಕಾರಿಗಳು ಒಪ್ಪಿಕೊಂಡರು. ಯಾವುದೇ ಸಣ್ಣ ಘಟನೆಯು ಕೋಪಗೊಂಡ ರೈತರ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂಬ ಆತಂಕವಿತ್ತು. ಅನೇಕ ಮಂದಿ ಖಡ್ಗ, ಕೋಲುಗಳು ಮತ್ತು ಪರವಾನಗಿ ಪಡೆದ ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಇವರನ್ನು ನಿಯಂತ್ರಿಸಲು ಪೊಲೀಸ್, ಆರ್‌ಎಎಫ್ ಮತ್ತು ಎಸ್‌ಎಸ್‌ಬಿಯ ದೊಡ್ಡ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೃಷಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ, ಎಡಿಜಿ, ಕಾನೂನು ಮತ್ತು ಸುವ್ಯವಸ್ಥೆ, ಪ್ರಶಾಂತ್ ಕುಮಾರ್ ಮತ್ತು ಎಡಿಜಿ, ಲಕ್ನೋ ವಲಯ, ಎಸ್‌ಎನ್ ಸಬತ್ ಅವರು ಒಪ್ಪಂದಕ್ಕೆ ಮುನ್ನ ರೈತರೊಂದಿಗೆ ಮಾತನಾಡಲು ಹೋದರು. ಆಶಿಶ್ ವಿರುದ್ಧ ಎಫ್‌ಐಆರ್ ಪ್ರತಿಯೊಂದಿಗೆ ಸಜ್ಜಾದರು.

ಈ ಸಭೆಯಲ್ಲಿ ಮೃತ ರೈತರ ಕುಟುಂಬ ಸದಸ್ಯರು ಕೂಡ ಹಾಜರಿದ್ದರು. ಪರಿಹಾರ ಮೊತ್ತವನ್ನು ಸೌಹಾರ್ದಯುತವಾಗಿ ಮೃತರ ಕುಟುಂಬಗಳಿಗೆ ರೂ 45 ಲಕ್ಷ ಮತ್ತು ಗಾಯಗೊಂಡವರಿಗೆ ರೂ. 10 ಲಕ್ಷ ಎಂದು ಅಂತಿಮಗೊಳಿಸಲಾಗಿದೆ. ಲಖನೌದ ಉನ್ನತ ಅಧಿಕಾರಿಗಳು ಟಿಕಾಯತ್ ಮತ್ತು ಪಂಜಾಬಿನ ಸಿಖ್ ರೈತ ನಾಯಕರೊಂದಿಗೆ ಮಾತನಾಡಿದರು.

ಹಿರಿಯ ಅಧಿಕಾರಿಗಳ ತಂಡವು ಅಂತಿಮ ಒಪ್ಪಂದದ ಕುರಿತು ಪತ್ರಿಕಾಗೋಷ್ಠಿಯನ್ನು ಬಯಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಆದರೆ ಟಿಕಾಯತ್  ಸುದ್ದಿಗೋಷ್ಠಿಗಾಗಿ ಒತ್ತಾಯಿಸಿದರು. ಭಾನುವಾರದ ಘಟನೆಯಿಂದ ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸುತ್ತಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು ಮತ್ತು ರೈತರನ್ನು ಉದ್ದೇಶಿಸಿ ಮಾತನಾಡಿದರು.

ಅಂತಿಮ ಮಾತುಕತೆಯ ಭಾಗವಾಗಿದ್ದ ಚತುರ್ವೇದಿ ಮತ್ತು ಇತರ ಅಧಿಕಾರಿಗಳನ್ನು ಹೊರತುಪಡಿಸಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಕುಮಾರ್ ಅವಸ್ಥಿ ಕೂಡ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮೂಲಗಳು ಹೇಳುವಂತೆ ಅವಸ್ಥಿ ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಟಿಕಾಯತ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಮೂಲಗಳ ಪ್ರಕಾರ ಅವಸ್ಥಿಯು ಒಂದು ವರ್ಷದ ಹಿಂದೆ ಮೂರು ಕೃಷಿ ಕಾನೂನುಗಳ ಕುರಿತು ರೈತರ ಆಂದೋಲನ ಆರಂಭವಾದಾಗಿನಿಂದ ಟಿಕಾಯತ್​​ನೊಂದಿಗೆ ಸಂಪರ್ಕದಲ್ಲಿದ್ದರು.  ಮೀರತ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದಾಗ  ಹಿರಿಯ ಟಿಕಾಯತ್ ಅವರ ಸಂಪರ್ಕಕ್ಕೆ ಬಂದಾಗಿನಿಂದ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅಧಿಕಾರಿಗಳು ಹೇಳುವಂತೆ ಬಿಕೆಯು ಯುಪಿ ಮಿತಿಯಲ್ಲಿ ವಿಶೇಷವಾಗಿ ಲಕ್ನೋದ ಸುತ್ತಮುತ್ತ ಯಾವುದೇ ದೊಡ್ಡ ಆಂದೋಲನವನ್ನು ನಡೆಸಲಿಲ್ಲ.

ಇತರ ಅಧಿಕಾರಿಗಳಿಗೂ ಟಿಕಾಯತ್ ಬಗ್ಗೆ ಚೆನ್ನಾಗಿ ತಿಳಿದಿದೆ. ಎಡಿಜಿ ಪ್ರಶಾಂತ್ ಕುಮಾರ್ ಅವರು ಮೀರತ್ ವಲಯದ ಎಡಿಜಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು, ಎಡಿಜಿ ಎಸ್ ಎನ್ ಸಬತ್ ಅವರು ಈ ಹಿಂದೆ ಪಶ್ಚಿಮ ಉತ್ತರ ಪ್ರದೇಶ ಮುಜಾಫರ್ ನಗರದ ಎಸ್‌ಎಸ್‌ಪಿಯಾಗಿ ನೇಮಕಗೊಂಡಿದ್ದರು. ಎಸಿಎಸ್, ಕೃಷಿ, ಚತುರ್ವೇದಿ ಟಿಕಾಯತ್ ಅವರ  ಅನೇಕ ಸಭೆಗಳ ಭಾಗವಾಗಿದ್ದರು.

ಇದನ್ನೂ ಓದಿ:  Lakhimpur Kheri Violence ಸುಪ್ರೀಂಕೋರ್ಟ್‌ ತಲುಪಿದ ಲಖಿಂಪುರ್ ಖೇರಿ ಪ್ರಕರಣ; ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ವಕೀಲರು

Read Full Article

Click on your DTH Provider to Add TV9 Kannada