ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಝಲ್​ಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

| Updated By: ಸುಷ್ಮಾ ಚಕ್ರೆ

Updated on: Jan 11, 2023 | 5:00 PM

ಶೆಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾದ ವಿವಾದದ ನಂತರ ಮೊಹಮ್ಮದ್ ಫೈಝಲ್ ನೇತೃತ್ವದಲ್ಲಿ ಸಾಲಿಹ್ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಸಾಲಿಹ್ ಗಂಭೀರವಾಗಿ ಗಾಯಗೊಂಡಿದ್ದರು.

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಝಲ್​ಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ
ಮೊಹಮ್ಮದ್ ಫೈಝಲ್
Follow us on

ನವದೆಹಲಿ: 2014ರಿಂದ ಸಂಸತ್ತಿನಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದ ಮೊಹಮ್ಮದ್ ಫೈಜಲ್‌ಗೆ 2009ರ ಕೊಲೆ ಯತ್ನ (Murder Attempt) ಪ್ರಕರಣದಲ್ಲಿ ಲಕ್ಷದ್ವೀಪದ (Lakshadweep) ಕವರಟ್ಟಿಯ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ 23 ಆರೋಪಿಗಳ ಪೈಕಿ ನಾಲ್ವರನ್ನು ಅಪರಾಧಿಗಳೆಂದು ಘೋಷಿಸಿದ ನಂತರ ಲಕ್ಷದ್ವೀಪದ ನ್ಯಾಯಾಲಯ ಫೈಝಲ್ ಮತ್ತು ಇತರ ಮೂವರ ಜಾಮೀನನ್ನು ಅಮಾನತುಗೊಳಿಸಿದೆ. ಮೊಹಮ್ಮದ್ ಫೈಝಲ್ (Mohammed Faizal) ತನ್ನ ಸಂಬಂಧಿ ಪಡನಾಥ್ ಸಾಲಿಹ್ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾರೆ.

ಶೆಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾದ ವಿವಾದದ ನಂತರ ಮೊಹಮ್ಮದ್ ಫೈಝಲ್ ನೇತೃತ್ವದಲ್ಲಿ ಸಾಲಿಹ್ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಸಾಲಿಹ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಪಡನಾಥ್ ಸಾಲಿಹ್ ಅವರನ್ನು ಕೇರಳಕ್ಕೆ ಸಾಗಿಸಲಾಯಿತು. ಅಲ್ಲಿ ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: Charles Sobhraj 19 ವರ್ಷ ಜೈಲು ಶಿಕ್ಷೆ ನಂತರ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂಕೋರ್ಟ್ ಆದೇಶ

ಮೊಹಮ್ಮದ್ ಫೈಝಲ್ ತಮಗೆ ನೀಡಲಾದ ಶಿಕ್ಷೆಯ ವಿರುದ್ಧ ಲಕ್ಷದ್ವೀಪದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅವರು ಸಂಸದರಾಗಿದ್ದ ತಮ್ಮನ್ನು ಅನರ್ಹಗೊಳಿಸುವುದನ್ನು ತಡೆಯಲು ತಡೆಯಾಜ್ಞೆ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಕವರಟ್ಟಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2009ರಲ್ಲಿ ಮೊಹಮ್ಮದ್ ಫೈಝಲ್ ವಿರುದ್ಧ ದಾಖಲಾದ ಕೊಲೆ ಯತ್ನ ಪ್ರಕರಣದಲ್ಲಿ ಅಪರಾಧಿಗಳಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ತಿಳಿಸಿದ್ದಾರೆ.  2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಸಮಸ್ಯೆಯೊಂದರಲ್ಲಿ ಮಧ್ಯಪ್ರವೇಶಿಸಲು ತಮ್ಮ ನೆರೆಹೊರೆಗೆ ಬಂದಾಗ ಸಂಸದ ಮತ್ತು ಇತರರು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಪಡನಾಥ್ ಸಾಲಿಹ್ ಮೇಲೆ ಹಲ್ಲೆ ನಡೆಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ