ಲಕ್ಷದ್ವೀಪ ಕರಾವಳಿಯಲ್ಲಿ ₹ 1,526 ಕೋಟಿ ಮೌಲ್ಯದ ಹೆರಾಯಿನ್ ವಶ
ಎರಡು ಅಥವಾ ಮೂರನೇ ವಾರದಲ್ಲಿ ತಮಿಳುನಾಡಿನ ಕರಾವಳಿಯಿಂದ ನೌಕಾಯಾನ ಮಾಡುವ ಎರಡು ಭಾರತೀಯ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಯಾವುದೋ ಕಡೆ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ ಎಂದು ಡಿಆರ್‌ಐಗೆ ಮಾಹಿತಿ ಲಭಿಸಿತ್ತು
ಲಕ್ಷದ್ವೀಪ ದ್ವೀಪಗಳ ಕರಾವಳಿಯಲ್ಲಿ ₹ 1,526 ಕೋಟಿ ಮೌಲ್ಯದ ಹೆರಾಯಿನ್ ವಶ ಪಡಿಸಿಕೊಳ್ಳಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಭಾರತೀಯ ಕರಾವಳಿ ಕಾವಲು ಪಡೆ (IGC) ಜಂಟಿಯಾಗಿ ‘ಆಪರೇಷನ್ ಖೋಜ್‌ಬೀನ್’ (Operation Khojbeen) ಎಂಬ ಹೆಸರಿನಲ್ಲಿ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ‘ಹೈ-ಗ್ರೇಡ್ ಹೆರಾಯಿನ್’ ವಶಪಡಿಸಿಕೊಳ್ಳಲಾಗಿದೆ. ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಯಲ್ಲಿ ಎರಡು ಬೋಟ್‌ಗಳಲ್ಲಿ ನಡೆಸಿದ ಶೋಧ ವೇಳೆ ತಲಾ 1 ಕೆಜಿ ಹೆರಾಯಿನ್ ಹೊಂದಿರುವ 218 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಎರಡು ಅಥವಾ ಮೂರನೇ ವಾರದಲ್ಲಿ ತಮಿಳುನಾಡಿನ ಕರಾವಳಿಯಿಂದ ನೌಕಾಯಾನ ಮಾಡುವ ಎರಡು ಭಾರತೀಯ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಯಾವುದೋ ಕಡೆ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ ಎಂದು ಡಿಆರ್‌ಐಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಮೇರೆಗೆ ‘ಆಪರೇಷನ್ ಖೋಜ್‌ಬೀನ್’ ಅನ್ನು ಮೇ 2022 ಮೇ 7 ರಂದು ಪ್ರಾರಂಭಿಸಲಾಯಿತು. ಕಾರ್ಯಾಚರಣೆಯ ಅಡಿಯಲ್ಲಿ ಡಿಆರ್‌ಐ ಅಧಿಕಾರಿಗಳೊಂದಿಗೆ ಕೋಸ್ಟ್ ಗಾರ್ಡ್ ಹಡಗು ‘ಸುಜೀತ್’ ವಿಶೇಷ ಆರ್ಥಿಕ ವಲಯ (EEZ) ಬಳಿ ನಿಕಟ ನಿಗಾ ಇರಿಸಿದೆ. ಹಲವಾರು ದಿನಗಳ ನಿರಂತರ ಹುಡುಕಾಟ ಮತ್ತು ಸಮುದ್ರಗಳ ಮೇಲ್ವಿಚಾರಣೆಯ ನಂತರ, ಎರಡು ಶಂಕಿತ ದೋಣಿಗಳಾದ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಅನ್ನು ಮೇ 18 ರಂದು ಲಕ್ಷದ್ವೀಪ ದ್ವೀಪಗಳ ಕರಾವಳಿಯಲ್ಲಿ ಐಸಿಜಿ ಮತ್ತು ಡಿಆರ್‌ಐ ಅಧಿಕಾರಿಗಳು ತಡೆದರು.
The op was meticulously planned & executed by DRI & ICG and entailed extensive surveillance in the rough seas over a period of several days. Seized drug appears to be of high-grade heroin and its value in the international illicit market is estimated to be around Rs. 1526 Cr: DRI
ಇದನ್ನೂ ಓದಿ— ANI (@ANI) May 20, 2022
ವಿಚಾರಣೆಯ ನಂತರ ಕೆಲವು ಸಿಬ್ಬಂದಿಗಳು ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೆರಾಯಿನ್ ಪಡೆದಿದ್ದು ಎರಡೂ ದೋಣಿಗಳಲ್ಲಿ ಬಚ್ಚಿಟ್ಟಿದ್ದಾರೆ ಎಂದು ಬಹಿರಂಗಪಡಿಸಿದರು. ಡಿಆರ್‌ಐ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದ್ದು ತನಿಖೆ ಪ್ರಗತಿಯಲ್ಲಿದೆ .
ಕಳೆದ ತಿಂಗಳಲ್ಲಿ ಡಿಆರ್‌ಐ ನಡೆಸಿದ ನಾಲ್ಕನೇ ಪ್ರಮುಖ ಮಾದಕ ದ್ರವ್ಯ ಪತ್ತೆ ಇದಾಗಿದೆ. ಏಪ್ರಿಲ್ 2021 ರಿಂದ ಅಂತರರಾಷ್ಟ್ರೀಯ ಅಕ್ರಮ ಮಾರುಕಟ್ಟೆಯಲ್ಲಿ ಅಂದಾಜು ₹ 26,000 ಕೋಟಿ ಮೌಲ್ಯದ 3,800 ಕೆಜಿಗೂ ಹೆಚ್ಚು ಹೆರಾಯಿನ್ ವಶಪಡಿಸಿಕೊಂಡಿದೆ.
ಏತನ್ಮಧ್ಯೆ, ಭಾರತೀಯ ಕೋಸ್ಟ್ ಗಾರ್ಡ್ ಕಳೆದ 3 ವರ್ಷಗಳಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಸುಮಾರು ₹ 6,200 ಕೋಟಿ ಮೌಲ್ಯದ ಸುಮಾರು 3 ಟನ್ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ. ಇಲ್ಲಿಯವರೆಗೆ ₹ 12,206 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
Published On - 11:01 pm, Fri, 20 May 22