ಪಂಜಾಬ್‌ನ ಫಿರೋಜ್‌ಪುರ್ ಗಡಿಯಲ್ಲಿ ₹200 ಕೋಟಿ ಮೌಲ್ಯದ ಹೆರಾಯಿನ್ ವಶ ಪಡಿಸಿದ ಬಿಎಸ್‌ಎಫ್
ಎರಡನೇ ಪ್ರಕರಣದಲ್ಲಿ 116 ಬೆಟಾಲಿಯನ್‌ನ ಸಿಬ್ಬಂದಿ ಗಡಿ ಹೊರಠಾಣೆ ಮೊಹಮ್ಮದಿ ವಾಲಾ ಬಳಿ 30 ಕೋಟಿ ಮೌಲ್ಯದ 6 ಕೆಜಿ ತೂಕದ ಆರು ಪ್ಯಾಕೆಟ್ ಹೆರಾಯಿನ್ ಅನ್ನು ವಶಪಡಿಸಿದ್ದಾರೆ
ಫಿರೋಜ್‌ಪುರ್: ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಭಾನುವಾರ ಫಿರೋಜ್‌ಪುರ್ ಸೆಕ್ಟರ್‌ನಲ್ಲಿ(Ferozepur Sector) ನಡೆದ ಎರಡು ಪ್ರಕರಣಗಳಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಹೆರಾಯಿನ್ (heroin) ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಪ್ರದೇಶದಲ್ಲಿ 10 ಕೆಜಿಗೂ ಹೆಚ್ಚು ವಸ್ತುವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ಇಷ್ಟೊಂದು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಭಾನುವಾರದ ಮೊದಲ ಪ್ರಕರಣದಲ್ಲಿ, 101 ಬೆಟಾಲಿಯನ್ ಸೈನಿಕರು ಗಡಿ ಹೊರಠಾಣೆ ಮಿಯಾನ್ ವಾಲಿ ಉತ್ತರ (Mian Wali Uttar)ಬಳಿ 22 ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟ 34 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಅಂದಾಜು ವೆಚ್ಚ 170 ಕೋಟಿ ರೂ.
Punjab | Troops of Border Security Force (BSF) in two separate incidents in the Ferozepur sector seized 40.64 kgs of contraband suspected to be heroin: BSF pic.twitter.com/QyW3qMOX5O
— ANI (@ANI) December 26, 2021
ಎರಡನೇ ಪ್ರಕರಣದಲ್ಲಿ 116 ಬೆಟಾಲಿಯನ್‌ನ ಸಿಬ್ಬಂದಿ ಗಡಿ ಹೊರಠಾಣೆ ಮೊಹಮ್ಮದಿ ವಾಲಾ ಬಳಿ 30 ಕೋಟಿ ಮೌಲ್ಯದ 6 ಕೆಜಿ ತೂಕದ ಆರು ಪ್ಯಾಕೆಟ್ ಹೆರಾಯಿನ್ ಅನ್ನು ವಶಪಡಿಸಿದ್ದಾರೆ. ಶನಿವಾರ, 136 ಬೆಟಾಲಿಯನ್‌ಗೆ ಸೇರಿದ ಸೈನಿಕರು ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಬ್ಯಾರೆಕೆ ಬಳಿ 10.852 ಕೆಜಿ ತೂಕದ 11 ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
“ಹೆರಾಯಿನ್ ಕಳ್ಳಸಾಗಣೆ ಮಾಡುವ ಸ್ಮಗ್ಲರ್‌ಗಳ ದುಷ್ಕೃತ್ಯದ ಪ್ರಯತ್ನವನ್ನು ಫಿರೋಜ್‌ಪುರದಲ್ಲಿ ಬಿಎಸ್‌ಎಫ್ ಪಡೆಗಳು ವಿಫಲಗೊಳಿಸಿದವು” ಎಂದು ಬಿಎಸ್‌ಎಫ್ ಪಂಜಾಬ್ ಟ್ವೀಟ್ ಮಾಡಿದೆ.
ಈ ತಿಂಗಳ ಆರಂಭದಲ್ಲಿ, ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನಲ್ಲಿ ಡ್ರಗ್ಸ್ ವಿತರಿಸುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಲುಧಿಯಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಿ, ಪಂಜಾಬ್‌ನಲ್ಲಿ ಡ್ರಗ್ಸ್ ಹರಡಿದವರ ವಿರುದ್ಧ ಕ್ರಮ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಮಜಿಠಿಯಾ ಅವರನ್ನು ಬಂಧಿಸುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದ ಸಿಧು
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ಆರೋಪ ಹೊರಿಸಲಾಗಿರುವ ಅಕಾಲಿ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿಠಿಯಾ ಅವರನ್ನು ಬಂಧಿಸುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಗುರುದಾಸ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಕ್ರಮ್ ಮಜಿಠಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ಸಾಕಾಗುವುದಿಲ್ಲ.
ಹಿರಿಯ ಅಕಾಲಿ ದಳದ ನಾಯಕನನ್ನು ಪ್ರಶ್ನಿಸಿದ ನವಜೋತ್ ಸಿಧು “ಬಿಕ್ರಮ್ ಮಜಿಠಿಯಾ ಎಲ್ಲಿದ್ದೀರಿ?” “ನಿಮಗೆ ಧೈರ್ಯವಿದ್ದರೆ ಮನೆಯಲ್ಲಿ ಇರಿ,ಯಾಕೆ ಹೆದರುತ್ತೀರಿ” ಎಂದು ಕೇಳಿದರು ಮಜಿಠಿಯಾ ವಿರುದ್ಧ ವಾಗ್ದಾಳಿ ನಡೆಸಿದ ಸಿಧು, “ಎಫ್‌ಐಆರ್‌ನಿಂದ ಏನೂ ಆಗುವುದಿಲ್ಲ. ಅವರನ್ನು (ಮಜಿಠಿಯಾ) ಬಂಧಿಸದ ಹೊರತು ಸಿಧು ವಿಶ್ರಾಂತಿ ಪಡೆಯುವುದಿಲ್ಲ” ಎಂದು ಹೇಳಿದರು.
ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾಜ್ಯದಲ್ಲಿನ ಡ್ರಗ್ ದಂಧೆಯ ತನಿಖೆಯ 2018 ರ ಸ್ಥಿತಿ ವರದಿಯ ಆಧಾರದ ಮೇಲೆ ಆರೋಪ ಹೊರಿಸಲಾಗಿದೆ. ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಸಿಧು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ 2018 ರಲ್ಲಿ ವರದಿಯನ್ನು ಸಲ್ಲಿಸಿದ್ದರು.
ಮೊಹಾಲಿ ನ್ಯಾಯಾಲಯವು ಈ ಹಿಂದೆ ಮಜಿಠಿಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪಂಜಾಬ್‌ನ ಮಾಜಿ ಸಚಿವರ ವಿರುದ್ಧ ವ್ಯಕ್ತಿಯೊಬ್ಬರು ದೇಶ ತೊರೆಯದಂತೆ ಲುಕ್‌ಔಟ್ ಸುತ್ತೋಲೆಯನ್ನೂ ಹೊರಡಿಸಲಾಗಿದೆ.
ಇದನ್ನೂ ಓದಿ: ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಸನ್ನಿ ಲಿಯೋನ್ನ ಮಧುಬನ್ ಹಾಡಿನ ಸಾಹಿತ್ಯ ಬದಲಿಸಲು ನಿರ್ಧಾರ
Published On - 8:40 pm, Sun, 26 December 21