ಪಂಜಾಬ್​ ವಿಧಾನಸಭಾ ಚುನಾವಣೆ; 15 ಅಭ್ಯರ್ಥಿಗಳ ಹೆಸರುಳ್ಳ 4ನೇ ಪಟ್ಟಿ ಬಿಡುಗಡೆ ಮಾಡಿದ ಆಪ್​

ಈ ಬಾರಿಯ ಪಂಜಾಬ್​, ಗೋವಾ, ಉತ್ತರಾಖಂಡ್​ ಚುನಾವಣೆಗಳನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್​ ಈ ರಾಜ್ಯಗಳ ಪ್ರವಾಸ ಮಾಡುತ್ತಿದ್ದರು.

ಪಂಜಾಬ್​ ವಿಧಾನಸಭಾ ಚುನಾವಣೆ; 15 ಅಭ್ಯರ್ಥಿಗಳ ಹೆಸರುಳ್ಳ 4ನೇ ಪಟ್ಟಿ ಬಿಡುಗಡೆ ಮಾಡಿದ ಆಪ್​
ಅರವಿಂದ ಕೇಜ್ರಿವಾಲ್
Follow us
TV9 Web
| Updated By: Lakshmi Hegde

Updated on:Dec 26, 2021 | 8:50 PM

ಚಂಡಿಗಢ್​: ಪಂಜಾಬ್​ ವಿಧಾನಸಭೆ ಚುನಾವಣೆ(Punjab Assembly Election)ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಇಂದು ಆಮ್​ ಆದ್ಮಿ ಪಕ್ಷ (AAP) ಬಿಡುಗಡೆ ಮಾಡಿದೆ. ಪಂಜಾಬ್​ನಲ್ಲಿ ಫೆಬ್ರವರಿ ಅಥವಾ ಮಾರ್ಚ್​ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅರವಿಂದ್ ಕೇಜ್ರಿವಾಲ್​ ನೇತೃತ್ವದ ಆಪ್​,  ಇದುವರೆಗೆ 73 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗೇ, ಎರಡೇ ದಿನಗಳ ಹಿಂದೆ 18 ಅಭ್ಯರ್ಥಿಗಳ ಹೆಸರುಳ್ಳ ಮೂರನೇ ಪಟ್ಟಿಯನ್ನು ಆಪ್​ ಬಹಿರಂಗ ಮಾಡಿತ್ತು. ಇದೀಗ 15 ಜನರ ಹೆಸರಿನ ನಾಲ್ಕನೇ ಲಿಸ್ಟ್​ ಹೊರಬಿದ್ದಿದೆ. ಆದರೆ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಅರವಿಂದ್ ಕೇಜ್ರಿವಾಲ್​ ತಿಳಿಸಿಲ್ಲ.  

ಇದೀಗ ಬಿಡುಗಡೆಯಾದ ಲಿಸ್ಟ್​​ನಲ್ಲಿ ರಂಜಿತ್ ಸಿಂಗ್ ರಾಣಾ, ಇಂದ್ರಜಿತ್ ಕೌರ್ ಮನ್​, ಗುರ್ಧಿಯನ್ ಸಿಂಗ್ ಮುಲ್ತಾನಿ, ಕರ್ಮವೀರ್ ಸಿಂಗ್​ ಘುಮ್ಮನ್​, ಜಸ್ವೀರ್​ ಸಿಂಗ್​ ರಾಜಾ ಗಿಲ್​, ದಿನೇಶ್​ ಘದಾ, ಲಖ್ಬೀರ್ ಸಿಂಗ್ ರೈ, ತರುಣ್​ಪ್ರೀತ್​ ಸಿಂಗ್​ ಸೋಂಧ್​, ಹಕಮ್​ ಸಿಂಗ್​ ಥೇಕೆಡಾರ್​, ದೇವಿಂದರ್​ ಸಿಂಗ್​ ಲಡ್ಡಿ ಧೋಸ್​, ಅಶು ಬಂಗೇರ್​, ಅಮಂದೀಪ್​ ಸಿಂಗ್​, ಗೋಲ್ಡಿ ಮುಸಾಫಿರ್​, ಡಾ.ವಿಜಯ್ ಸಿಂಗ್ಲಾ, ನರೀಂದರ್​ ಕೌರ್​ ಭರಾಜ್​ ಮತ್ತು ಕುಲ್​ಜಿತ್​ ಸಿಂಗ್ ರಾಂಧವಾ ಅವರ ಹೆಸರಿದೆ.

ಈ ಬಾರಿಯ ಪಂಜಾಬ್​, ಗೋವಾ, ಉತ್ತರಾಖಂಡ್​ ಚುನಾವಣೆಗಳನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. 2017ರ ಪಂಜಾಬ್​ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪಷ್ಟಬಹುಮತಗಳಿಸಿತ್ತು. 117 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಪಂಜಾಬ್​​ನಲ್ಲಿ ಕಾಂಗ್ರೆಸ್​ 77 ಸೀಟುಗಳನ್ನು ಗೆದ್ದುಕೊಂಡಿತ್ತು. ಆಗ ಆಪ್​ 20 ಕ್ಷೇತ್ರಗಳಲ್ಲಿ ಗೆದ್ದಿತ್ತು.  ಈಗಾಗಲೇ ಪಂಜಾಬ್​​ಗೆ ಎರಡು-ಮೂರು ಬಾರಿ ಭೇಟಿ ಕೊಟ್ಟಿರುವ ಅರವಿಂದ್ ಕೇಜ್ರಿವಾಲ್​, ತಾವು ಅಲ್ಲಿ ಅಧಿಕಾರಕ್ಕೆ ಬಂದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಉಚಿತ ಆರೋಗ್ಯ ಸೇವೆ, ಶಿಕ್ಷಕರ ಸಮಸ್ಯೆಗಳ ಪರಿಹಾರದ ಭರವಸೆಯನ್ನೂ ಕೊಟ್ಟಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್​​ನಲ್ಲಿ ಆಪ್​ ಅಧಿಕಾರ ಹಿಡಿದರೆ ಪ್ರತಿತಿಂಗಳೂ ಮಹಿಳೆಯರ ಖಾತೆಗೆ 1000 ರೂಪಾಯಿ ಹಾಕುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಸನ್ನಿ ಲಿಯೋನ್​​ನ ಮಧುಬನ್ ಹಾಡಿನ ಸಾಹಿತ್ಯ ಬದಲಿಸಲು ನಿರ್ಧಾರ

Published On - 8:49 pm, Sun, 26 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್