Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಸನ್ನಿ ಲಿಯೋನ್​​ನ ಮಧುಬನ್ ಹಾಡಿನ ಸಾಹಿತ್ಯ ಬದಲಿಸಲು ನಿರ್ಧಾರ

"ಕೆಲವು ವಿಧರ್ಮಿಗಳು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. 'ಮಧುಬನ್ ಮೇ ರಾಧಿಕಾ ನಾಚೆ' ವಿಡಿಯೊ ಅಂತಹ ಒಂದು ಖಂಡನೀಯ ಪ್ರಯತ್ನವಾಗಿದೆ. ನಾನು ಸನ್ನಿ ಲಿಯೋನ್ ಜಿ, ಶರೀಬ್ ಮತ್ತು ತೋಶಿ ಜಿ ಅವರಿಗೆ ಅರ್ಥಮಾಡಿಕೊಳ್ಳಲು ಎಚ್ಚರಿಕೆ ನೀಡುತ್ತಿದ್ದೇನೆ.

ಸಚಿವರ ಎಚ್ಚರಿಕೆಯ ಬೆನ್ನಲ್ಲೇ ಸನ್ನಿ ಲಿಯೋನ್​​ನ ಮಧುಬನ್ ಹಾಡಿನ ಸಾಹಿತ್ಯ ಬದಲಿಸಲು ನಿರ್ಧಾರ
ಸನ್ನಿ ಲಿಯೋನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 26, 2021 | 8:18 PM

ದೆಹಲಿ: ಮಧ್ಯಪ್ರದೇಶದ (Madhya Pradesh) ಗೃಹ ಸಚಿವ ನರೋತ್ತಮ್ ಮಿಶ್ರಾ(Narottam Mishra) ಅವರು ಸನ್ನಿ ಲಿಯೋನ್  (Sunny Leone)ಮತ್ತು ಇತ್ತೀಚೆಗೆ ಬಿಡುಗಡೆಯಾದ ಮ್ಯೂಸಿಕ್ ವಿಡಿಯೊ ಮಧುಬನ್‌ನ (Madhuban)ಗಾಯಕರಿಗೆ ಎಚ್ಚರಿಕೆ ನೀಡಿದ ನಂತರ, ಕಂಪನಿಯು ಸಾಹಿತ್ಯವನ್ನು ಬದಲಾಯಿಸಲಿದೆ ಎಂದು ಸಂಗೀತ ಕಂಪನಿ ಸರೆಗಮ(Saregama) ಭಾನುವಾರ ತಿಳಿಸಿದೆ. “ಇತ್ತೀಚಿನ ಪ್ರತಿಕ್ರಿಯೆಯ ಬೆಳಕಿನಲ್ಲಿ ಮತ್ತು ನಮ್ಮ ದೇಶವಾಸಿಗಳ ಭಾವನೆಗಳನ್ನು ಗೌರವಿಸಿ, ನಾವು ಮಧುಬನ್ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ಬದಲಾಯಿಸುತ್ತೇವೆ” ಎಂದು ಸಂಗೀತ ಸಂಸ್ಥೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಮುಂದಿನ 3 ದಿನಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ಹಾಡನ್ನು ಬದಲಾಯಿಸಿ ಹೊಸ ಹಾಡು ಅಪ್ಲೋಡ್ ಮಾಡಲಾಗುತ್ತದೆ” ಎಂದು ಸರೆಗಮ ಹೇಳಿದೆ. ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರ ಮಂಗಳಸೂತ್ರ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ನರೋತ್ತಮ್ ಮಿಶ್ರಾ ಅವರು ಸನ್ನಿ ಲಿಯೋನ್ ಮತ್ತು ಸಂಗೀತ ವಿಡಿಯೊದ ಗಾಯಕರಿಗೆ ಕ್ಷಮೆಯಾಚಿಸುವಂತೆ ಮತ್ತು ಮೂರು ದಿನಗಳಲ್ಲಿ ವಿಡಿಯೊವನ್ನು ಹಿಂತೆಗೆದುಕೊಳ್ಳುವಂತೆ ಎಚ್ಚರಿಸಿದ್ದಾರೆ. ಇದನ್ನು ಮಾಡಲು ವಿಫಲವಾದರೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ ಕಂಪನಿ ವಿಡಿಯೊವನ್ನು ಬದಲಾಯಿಸಲಾಗುವುದು ಎಂದು ಹೇಳಿದೆ. ಸಚಿವರ ಬೆದರಿಕೆಯನ್ನು ಉಲ್ಲೇಖಿಸದೆ ಇತ್ತೀಚಿನ ಪ್ರತಿಕ್ರಿಯೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

“ಕೆಲವು ವಿಧರ್ಮಿಗಳು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ‘ಮಧುಬನ್ ಮೇ ರಾಧಿಕಾ ನಾಚೆ’ ವಿಡಿಯೊ ಅಂತಹ ಒಂದು ಖಂಡನೀಯ ಪ್ರಯತ್ನವಾಗಿದೆ. ನಾನು ಸನ್ನಿ ಲಿಯೋನ್ ಜಿ, ಶರೀಬ್ ಮತ್ತು ತೋಶಿ ಜಿ ಅವರಿಗೆ ಅರ್ಥಮಾಡಿಕೊಳ್ಳಲು ಎಚ್ಚರಿಕೆ ನೀಡುತ್ತಿದ್ದೇನೆ. ಅವರು ಮೂರು ದಿನಗಳಲ್ಲಿ ಕ್ಷಮೆಯಾಚಿಸಿದ ನಂತರ ಹಾಡನ್ನು ತೆಗೆದುಹಾಕದಿದ್ದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಈ ಹಾಡಿನಲ್ಲಿ 1960 ರ ಚಲನಚಿತ್ರ ಕೊಹಿನೂರ್‌ನ ಹಾಡಿನ ಕೆಲವು ಪದಗಳನ್ನು ಬಳಸಲಾಗಿದೆ. ಇದನ್ನು ಮೊಹಮ್ಮದ್ ರಫಿ ಹಾಡಿದ್ದರು.

ನರೋತ್ತಮ್ ಮಿಶ್ರಾಗಿಂತ ಮೊದಲು ಮಥುರಾ ಮೂಲದ ಅರ್ಚಕರು ಅವರು ವಿಡಿಯೊ ಆಕ್ಷೇಪಾರ್ಹವೆಂದು ಕಂಡುಕೊಂಡರು ಮತ್ತು ವಿಡಿಯೊ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದರು. ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಅವರು ವಿಡಿಯೊದ ಮೂಲಕ ಸನ್ನಿ ಲಿಯೋನ್ ಹಾಡನ್ನು “ಅವಹೇಳನಕಾರಿ ರೀತಿಯಲ್ಲಿ” ಪ್ರಸ್ತುತಪಡಿಸುವ ಮೂಲಕ ಬ್ರಿಜ್‌ಭೂಮಿಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Sunny Leone: ಸನ್ನಿ ಲಿಯೋನ್ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ

Published On - 8:16 pm, Sun, 26 December 21