Ganga Vilas: ಜಗತ್ತಿನ ಅತಿ ಉದ್ದದ ಐಷಾರಾಮಿ ಹಡಗಾದ ಗಂಗಾ ವಿಲಾಸ್​ಗೆ ಟಿಕೆಟ್ ಬುಕ್ ಮಾಡುವುದು ಹೇಗೆ?

ಗಂಗಾ ವಿಲಾಸ್ ಹಡಗಿನಲ್ಲಿ ಪ್ರಯಾಣಿಸಲು ಸ್ವಿಜರ್ಲೆಂಡ್ ಕಂಪನಿಯಿಂದ 32 ಸ್ವಿಸ್ ಪ್ರವಾಸಿಗರಿಗೆ ಚೊಚ್ಚಲ ಪ್ರವಾಸಕ್ಕಾಗಿ ಸಂಪೂರ್ಣ ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ.

Ganga Vilas: ಜಗತ್ತಿನ ಅತಿ ಉದ್ದದ ಐಷಾರಾಮಿ ಹಡಗಾದ ಗಂಗಾ ವಿಲಾಸ್​ಗೆ ಟಿಕೆಟ್ ಬುಕ್ ಮಾಡುವುದು ಹೇಗೆ?
ಗಂಗಾ ವಿಲಾಸ್ ಹಡಗುImage Credit source: Twitter
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 11, 2023 | 4:04 PM

ನವದೆಹಲಿ: ಜಗತ್ತಿನ ಅತಿ ಉದ್ದನೆಯ ಮತ್ತು ಐಷಾರಾಮಿ ಹಡಗು ಗಂಗಾ ವಿಲಾಸ (Ganga Vilas Cruise) ಉದ್ಘಾಟನೆಗೆ ಸಜ್ಜಾಗಿದೆ. 27 ನದಿಗಳಲ್ಲಿ ನೌಕಾಯಾನ ಮಾಡುವ ಮೂಲಕ ಆ ಭವ್ಯವಾದ ಕ್ಷಣಗಳನ್ನು ವೀಕ್ಷಿಸಲು ನೀವು 51 ದಿನಗಳ ಪ್ಯಾಕೇಜ್ ಬುಕ್ ಮಾಡಬಹುದು. ಈ ಹಡಗಿನಲ್ಲಿ ನೀವು ಉತ್ತಮ ಭೋಜನ, ಸ್ಪಾ ಮತ್ತು ಬಹು ವಿಶ್ರಾಂತಿ ಆಯ್ಕೆಗಳನ್ನು ಸಹ ಪಡೆಯಬಹುದು. ಗಂಗಾ ವಿಲಾಸ್ ಐಷಾರಾಮಿ ಹಡಗಾಗಿದೆ. ವಿಶ್ವದ ಅತಿ ಉದ್ದದ ನದಿ ವಿಹಾರ ಎಂದು ಹೆಸರಿಸಲಾಗಿರುವ ಈ ಗಂಗಾ ವಿಲಾಸ್ ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜನವರಿ 13ರಂದು ಉದ್ಘಾಟಿಸಲಿದ್ದಾರೆ.

ಗಂಗಾ ವಿಲಾಸ್ ಕ್ರೂಸ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?: ಟ್ರಿಪಲ್ ಡೆಕ್ ಗಂಗಾ ವಿಲಾಸ್ ಕ್ರೂಸ್ ಐಷಾರಾಮಿ ಹಡಗಾಗಿದ್ದು, ವಾರಾಣಸಿಯಿಂದ ಅಸ್ಸಾಂನ ದಿಬ್ರುಗಢ್‌ಗೆ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸಲಿದೆ. ಐಷಾರಾಮಿ ಕ್ರೂಸ್ 3,200 ಕಿಮೀ ದೂರವನ್ನು ಕ್ರಮಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ ಇದು ಹಾದುಹೋಗುತ್ತದೆ. ಇದರ ಉದ್ಘಾಟನೆಗೆ ಮುಂಚಿತವಾಗಿಯೇ ಗಂಗಾ ವಿಲಾಸ್ ಕ್ರೂಸ್‌ಗೆ ಟಿಕೆಟ್‌ಗಳನ್ನು ಹೇಗೆ ಬುಕ್ ಮಾಡುವುದು? ಅದರ ಟಿಕೆಟ್​​ಗೆ ಎಷ್ಟು ಬೆಲೆ ಇರಲಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಐಷಾರಾಮಿ ಗಂಗಾ ವಿಲಾಸ್ ಹಡಗಿನ ಟಿಕೆಟ್‌ಗಳು ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಪ್ರತಿ ವ್ಯಕ್ತಿಗೆ 1 ರಾತ್ರಿಗೆ ಸರಾಸರಿ 25,000 ರೂ. ದರವಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Ganga Vilas: 5 ರಾಜ್ಯ, 50 ಪ್ರವಾಸಿ ತಾಣ, 51 ದಿನ; ವಿಶ್ವದ ಅತಿ ಉದ್ದನೆಯ ನದಿ ವಿಹಾರ ಗಂಗಾ ವಿಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಹಡಗಿನಲ್ಲಿ ಪ್ರಯಾಣಿಸಲು ಸ್ವಿಜರ್ಲೆಂಡ್ ಕಂಪನಿಯಿಂದ 32 ಸ್ವಿಸ್ ಪ್ರವಾಸಿಗರಿಗೆ ಚೊಚ್ಚಲ ಪ್ರವಾಸಕ್ಕಾಗಿ ಸಂಪೂರ್ಣ ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ಚಾರ್ಟರ್ಡ್ ಬುಕ್ಕಿಂಗ್ ಪ್ರಕಾರ ಪ್ರತಿ ವ್ಯಕ್ತಿಗೆ ಸರಾಸರಿ ದರವು ಪ್ರತಿ ರಾತ್ರಿಗೆ ಸುಮಾರು 25,000 ರೂ.ಗಳಷ್ಟಿರಲಿದೆ ಎಂದು ಎಂವಿ ಗಂಗಾ ವಿಲಾಸ್ ಆಪರೇಟಿಂಗ್ ಕಂಪನಿ ಹೆರಿಟೇಜ್ ರಿವರ್ ಜರ್ನಿಯ ಪ್ರತಿನಿಧಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಭಾರತದ ಪ್ರಮುಖ ನಗರಗಳಾದ ಪಾಟ್ನಾ, ಕೋಲ್ಕತ್ತಾ ಗುವಾಹಟಿ ಮತ್ತು ಬಾಂಗ್ಲಾದೇಶದ ಢಾಕಾ ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ. ಈ ವಿಹಾರವು ಮೂರು ಪ್ರಮುಖ ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ಮೂಲಕ ಹಾದು ಹೋಗಲಿದೆ. ಬಾಂಗ್ಲಾದೇಶದಲ್ಲಿ ಮೇಘನಾ, ಪದ್ಮ ಮತ್ತು ಜಮುನಾ ಮೂಲಕ ಹಾದುಹೋಗುತ್ತದೆ. ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯನ್ನು ಪ್ರವೇಶಿಸುತ್ತದೆ.

ಕಾಶಿಯಿಂದ ಸಾರನಾಥದವರೆಗೆ, ಮಜುಲಿಯಿಂದ ಮಯೋಂಗ್‌ವರೆಗೆ, ಸುಂದರ್‌ಬನ್ಸ್‌ನಿಂದ ಕಾಜಿರಂಗದವರೆಗೆ ಈ ಕ್ರೂಸ್ ಸಂಚರಿಸಲಿದೆ ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ. ಈ ಗಂಗಾ ವಿಲಾಸ್ ವಿಹಾರಕ್ಕೆ ಸುಮಾರು 13 ಲಕ್ಷ ರೂ. ವೆಚ್ಚವಾಗುತ್ತದೆ. ಈ ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳಲ್ಲಿ 27 ನದಿಗಳಲ್ಲಿ 3,200 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುತ್ತದೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ನಾವಿಕರನ್ನು ಹೊತ್ತೊಯ್ಯುತ್ತಿದ್ದ ಹಡಗು ಥಾಯ್ಲೆಂಡ್ ಕೊಲ್ಲಿಯಲ್ಲಿ ಮುಳುಗಡೆ

ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 1.4 ಮೀಟರ್ ಡ್ರಾಫ್ಟ್ನೊಂದಿಗೆ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದೆ. 36 ಪ್ರವಾಸಿಗರ ಸಾಮರ್ಥ್ಯವಿರುವ 18 ಸೂಟ್‌ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ಟಾಪ್ ಓವರ್‌ಗಳೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಾರಾಣಸಿಯ ಗಂಗಾ ಆರತಿಯನ್ನು ಪ್ರದರ್ಶಿಸಲಾಗುವುದು.

ಈ ಗಂಗಾ ವಿಲಾಸ್ ವಿಹಾರ ಬೌದ್ಧ ಧರ್ಮದ ಅತ್ಯಂತ ಗೌರವದ ಸ್ಥಳವಾದ ಸಾರನಾಥದಲ್ಲಿ ನಿಲ್ಲುತ್ತದೆ. ಇದು ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಅಸ್ಸಾಂನ ಅತಿದೊಡ್ಡ ನದಿ ದ್ವೀಪ ಮತ್ತು ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಮಜುಲಿಯನ್ನು ಸಹ ಒಳಗೊಂಡಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ವಿಹಾರ ಸಾಗಲಿದೆ. ಇದು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ