Sinking Joshimath: ಒಂದು ವಾರದಲ್ಲಿ ಹೋಟೆಲ್‌ಗಳು ಧ್ವಂಸ, ಹಾನಿಗೊಳಗಾದ ಮನೆಗಳ ಕುಟುಂಬಕ್ಕೆ 1.5 ಲಕ್ಷ ರೂ. ಪರಿಹಾರ
ಕುಸಿಯುವ ಅಂಚಿನಲ್ಲಿರುವ ಹೋಟೆಲ್‌ಗಳು ಮತ್ತು ಇತರ ಕಟ್ಟಡಗಳನ್ನು ಒಂದು ವಾರದೊಳಗೆ ನೆಲಸಮಗೊಳಿಸಲಾಗುವುದು, ಮನೆ ಕಳೆದುಕೊಂಡ ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 1.5 ಲಕ್ಷ ರೂ. ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೋಶಿಮಠ: ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕಿನಿಂದ (Sinking Joshimath) ಅನೇಕ ಮನೆಗಳು ಹಾಗೂ ಹಲವು ಸಾವು ನೋವುಗಳು ಸಂಭವಿಸಿತ್ತು. ಕುಸಿಯುವ ಅಂಚಿನಲ್ಲಿರುವ ಹೋಟೆಲ್‌ಗಳು ಮತ್ತು ಇತರ ಕಟ್ಟಡಗಳನ್ನು ಒಂದು ವಾರದೊಳಗೆ ನೆಲಸಮಗೊಳಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಇಂದು (ಬುಧವಾರ) ತಿಳಿಸಿದ್ದಾರೆ. ಹಿರಿಯ ಅಧಿಕಾರಿ ಹಿಮಾಂಶು ಖುರಾನಾ ಎನ್‌ಡಿಟಿವಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಮನೆ ಕಳೆದುಕೊಂಡ ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 1.5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ. ಎರಡು ಹೋಟೆಲ್‌ಗಳು ಮತ್ತು ಹಲವಾರು ಮನೆಗಳನ್ನು ನೆಲಸಮ ಮಾಡಿದಕ್ಕೆ ಅಲ್ಲಿನ ನಿವಾಸಿಗಳು ಕೋಪಗೊಂಡಿದ್ದು ನೆಲಸಮ ಮಾಡುವ ಪ್ರಕ್ರಿಯೆಗೆ ನಿರ್ಬಂಧಿಸಿದ್ದಾರೆ, ಈ ಬಗ್ಗೆ ನಮಗೆ ಯಾವುದೇ ನೋಟಿಸ್ ನೀಡಿಲ್ಲ, ಜೊತೆಗೆ ಪರಿಹಾರವನ್ನು ನೀಡಿಲ್ಲ ಎಂದು ದೂರಿದ್ದಾರೆ. ಈ ಕಾರಣಕ್ಕಾಗಿ ನೂರಾರು ಜನರು ರಸ್ತೆಗಳಿದು ಪ್ರತಿಭಟನೆ ಮಾಡಿದ್ದಾರೆ ಮತ್ತು ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಕಟ್ಟಡಗಳ ಹೊರಗೆ ಕಾವಲು ಕಾಯುತ್ತಿದ್ದರು.
ಬುಲ್ಡೋಜರ್‌ಗಳು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಮಾಡುತ್ತದೆ ಎಂಬ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸಿದರು. ನಮಗೆ ಈ ಬಗ್ಗೆ ಮೊದಲೇ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಹೋಟೆಲ್ ಬಳಿ ಹೋಟೆಲ್ ಕೆಡವಲು ಬುಲ್ಡೋಜರ್ ಬಂದಿದೆ ಎಂದು ಯಾರೋ ನಮಗೆ ಹೇಳಿದರು, ವಿಷಯ ತಿಳಿದ ತಕ್ಷಣ ನಮ್ಮ ಹೋಟೆಲ್ ಬಳಿದ ಬಂದ ಬುಲ್ಡೋಜರ್ಗಳನ್ನು ನೋಡಲು ಓಡಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು.
ಇದನ್ನು ಓದಿ:Joshimath Sinking: ಜೋಶಿಮಠ ಅನಾಹುತದ ಬಗ್ಗೆ ಐಐಟಿ ರೋಪರ್ ಸಂಶೋಧಕರಿಂದ 2021ರಲ್ಲೇ ಸಿಕ್ಕಿತ್ತು ಸುಳಿವು
ಪ್ರತಿ ವರ್ಷ ಸಾವಿರಾರು ಯಾತ್ರಿಕರು ಮತ್ತು ವ್ಯಾಪಾರಸ್ಥರನ್ನು ಆಕರ್ಷಿಸುವ ಪವಿತ್ರ ಪಟ್ಟಣವಾದ ಬದರಿನಾಥಕ್ಕೆ ಅವರನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಸಹಾಯ ಮಾಡಬೇಕೆಂದು ಇನ್ನೊಬ್ಬ ನಿವಾಸಿ ಹೇಳಿದ್ದಾರೆ. ಆಡಳಿತ ಅಧಿಕಾರಿಗಳು ನಿವಾಸಿಗಳನ್ನು ಭೇಟಿ ಮಾಡಿ ಪರಿಹಾರದ ಭರವಸೆ ನೀಡಿದರು. ನಾವು ಹೋಟೆಲ್‌ಗಳನ್ನು ಕೆಡವುತ್ತಿಲ್ಲ, ಈ ಬಗ್ಗೆ ಅವರಿಗೆ ಮಾಹಿತಿ ನೀಡಿ ಮತ್ತೆ ಒಂದು ವಾರದಲ್ಲಿ ಕೆಡವುತ್ತೇವೆ. ನಾವು ಹೋಟೆಲ್ ಮಾಲೀಕರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ ಎಂದು ಖುರಾನಾ NDTVಗೆ ತಿಳಿಸಿದರು.
ರಸ್ತೆಗಳು ಮತ್ತು ವಿದ್ಯುತ್ ಯೋಜನೆಗಳು ಸೇರಿದಂತೆ ಹಲವು ವರ್ಷಗಳಿಂದ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಬೆಟ್ಟದ ಪಟ್ಟಣದಲ್ಲಿ 731 ಮನೆಗಳಲ್ಲಿ ಭಾರಿ ಬಿರುಕುಗಳು ಉಂಟಾಗಿವೆ. ದಿನದಿಂದ ದಿನಕ್ಕೆ ಬಿರುಕುಗಳು ಹೆಚ್ಚಾಗುತ್ತಿವೆ ಎಂಬ ಆತಂಕದ ನಡುವೆಯೇ ಉತ್ತರಾಖಂಡ ಸರ್ಕಾರವು ಹೆಚ್ಚು ಹಾನಿಗೊಳಗಾದ ಕಟ್ಟಡಗಳನ್ನು ನೆಲಸಮಗೊಳಿಸಲು ಆದೇಶಿಸಿದೆ. ಸುಮಾರು 131 ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನಾವು ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಖುರಾನಾ ತಿಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ