ದೆಹಲಿ: ಚೀನಾ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಸ್ಮರಣಾರ್ಥ ಚೀನಾ ರಾಯಭಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಪಕ್ಷದ ನಾಯಕ ಸೀತಾರಾಮ್ ಯೆಚೂರಿ, ಸಿಪಿಐನ ಡಿ.ರಾಜಾ ಸೇರಿ ಬೇರೆ ಕೆಲವು ಎಡ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ದಾಳಿಯಲ್ಲಿ ಭಾರತೀಯ ಯೋಧರು ಮೃತಪಟ್ಟ ನಂತರ, ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದ ಎಡಪಕ್ಷಗಳ ನಾಯಕರೇ ಇಂದು, ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಚೀನಾದ ಕಮ್ಯೂನಿಸ್ಟ್ ಪಕ್ಷ ನಿರ್ಮಾಣಗೊಂಡು ನೂರು ವರ್ಷಗಳೇ ಕಳೆದಿವೆ. ಇದೇ ತಿಂಗಳ ಪ್ರಾರಂಭದಲ್ಲಿ, ಚೀನಾದ ಟಿಯಾನನ್ಮೆನ್ ಸ್ಕ್ವೇರ್ನಲ್ಲಿ ಅದ್ದೂರಿ ಸಮಾರಂಭ ನಡೆದಿತ್ತು. ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅಂದು ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಯಾವುದೇ ವಿದೇಶೀ ಶಕ್ತಿಗಳೂ ಚೀನಾವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು.
2020ರ ಮೇ ತಿಂಗಳಿಂದಲೂ ಭಾರತ-ಚೀನಾ ಸೇನೆಗಳ ನಡುವೆ ಒಂದಲ್ಲ ಒಂದು ಸಂಘರ್ಷ ನಡೆಯುತ್ತಲೇ ಇದೆ. ಅದರಲ್ಲೂ ಕಳೆದ ಜುಲೈನಲ್ಲಿ ಪೂರ್ವ ಲಡಾಖನ್ ಗಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರು ಹೊಡೆದಾಡಿಕೊಂಡು, ಭಾರತದ 20 ಯೋಧರು ಪ್ರಾಣಬಿಟ್ಟಿದ್ದಾರೆ. ಅದಾದ ಮೇಲೆ ಮಿಲಿಟರಿ ಹಂತದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಚೀನಾ ಎಲ್ಎಸಿ ಬಳಿ ನಿರಂತರವಾಗಿ ತನ್ನ ಸೇನಾ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಭಾರತದ ಎಡ ಪಕ್ಷಗಳೆಲ್ಲ ಈಗ ಚೀನಾಕ್ಕೆ ಸಂಬಂಧಪಟ್ಟ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ
Left leaders attend Chinese Communist Party centenary event