ಗಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ಸೈನಿಕರೊಂದಿಗೆ 2020ರಲ್ಲಿ ಕಾದಾಡಿ ವೀರಮರಣವನ್ನಪ್ಪಿದ ಭಾರತದ ಸೈನಿಕರ ಬಲಿದಾನವನ್ನು ಲೇವಡಿ ಮಾಡಿದ ಬಾಲಿವುಡ್ ನಟಿ ರೀಚಾ ಚಡ್ಡಾರನ್ನು (Richa Chadha) ನಟ ಅಕ್ಷಯ್ ಕುಮಾರ್ (Akshay Kumar) ಗುರುವಾರದಂದು (ನವೆಂಬರ್ 24) ಟೀಕಿಸಿದ್ದರು. ರೀಚಾರ ಆಕ್ಷೇಪಾರ್ಹ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಕ್ಷಯ್, ‘ಇದನ್ನು ನೋಡಿ ಮನಸ್ಸಿಗೆ ನೋವಾಗುತ್ತದೆ. ನಮ್ಮ ಸಶಸ್ತ್ರ ಪಡೆಗಳ ವಿಚಾರದಲ್ಲಿ ನಾವು ಯಾವ ಕಾರಣಕ್ಕೂ ಕೃತಜ್ಞಹೀನರಾಗಿರಬಾರದು, ಅವರಿಂದಾಗಿಯೇ ನಾವು ಜೀವಿಸುವುದು ಸಾಧ್ಯವಾಗುತ್ತಿದೆ,’ ಎಂದಿದ್ದರು.
Hurts to see this. Nothing ever should make us ungrateful towards our armed forces. Woh hain toh aaj hum hain. ? pic.twitter.com/inCm392hIH
— Akshay Kumar (@akshaykumar) November 24, 2022
ತಮ್ಮನ್ನು ಎಡಪಂಥೀಯ ಲಿಬರಲ್ ಗಳೆಂದು ಕರೆದುಕೊಳ್ಳುವ ಜನಕ್ಕೆ ಅಕ್ಷಯ್ ಕುಮಾರ್ ಟ್ವಿಟರ್ ಟೈಮ್ ಲೈನ್ ಮೇಲೆ ಮುಗ್ಗುರಿಸಲು ಅಷ್ಟು ಸಾಕಿತ್ತು. ಅಕ್ಷಯ್ ರನ್ನು ಟೀಕಿಸಲು ಅವರಲ್ಲಿ ಯಾವುದೇ ಯೋಗ್ಯ ವಿಷಯವಿರದ ಕಾರಣ ನಟನ ಬೇರೊಂದು ರಾಷ್ಟ್ರದ ಪೌರತ್ವ ಪಡೆದಿರುವ ಸಂಗತಿಯನ್ನು ಉಲ್ಲೇಖಿಸಿ ಬೇರೆ ರಾಷ್ಟ್ರದ ಪ್ರಜೆಯಾಗಿರುವ ವ್ಯಕ್ತಿಯೊಬ್ಬ ಭಾರತೀಯ ಸೇನೆಯ ಬಗ್ಗೆ ಕಾಮೆಂಟ್ ಮಾಡಬಾರದು ಎನ್ನುತ್ತಾ ಹರಿಹಾಯತೊಡಗಿದ್ದಾರೆ.
ಅಮೆರಿಕದ ನಾಗರಿಕ ಸಿದ್ಧಾರ್ಥ ವರದರಾಜನ್ ರಿಂದ ಸ್ಥಾಪಿಸಲ್ಲಪಟ್ಟಿರುವ ದಿ ವೈರ್ ಪ್ರಕಾಶನದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುವ ರೋಹಿಣಿ ಸಿಂಗ್, ‘ಅಕ್ಷಯ್ ತಮ್ಮ ಕೆನಡಿಯನ್ ಪಾಸ್ ಪೋರ್ಟ್ ರದ್ದು ಮಾಡಿಸಿಕೊಂಡು ಪುನಃ ಭಾರತದ ಪ್ರಜೆಯಾಗಿದ್ದಾಯೇ,’ ಅಂತ ಟ್ವೀಟ್ ಮಾಡಿದ್ದಾರೆ.
Hurts to see this. Giving up the citizenship of a country that has given you everything. No inducements from another country should ever make us ungrateful towards our India that we stop remaining it’s citizen. India hai to aaj hum hain. ? https://t.co/4LIvG1Mi9i
— Rohini Singh (@rohini_sgh) November 25, 2022
ಗ್ಯಾನ್ ಪಾವಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದ್ದನ್ನು ಲೇವಡಿ ಮಾಡಿದ್ದ ಪತ್ರಕರ್ತೆ ಸಬಾ ನಖ್ವಿ ಅಕ್ಷಯ್ ಕುಮಾರ್ ಅವರನ್ನು ಟೀಕಿಸುತ್ತಾ, ‘ನಾವೆಲ್ಲ ಭಾರತೀಯ ಪ್ರಜೆ @RichaChadha ಅವರೊಂದಿಗಿದ್ದೇವೆ, ಕೆನಡಾದ ನಿವಾಸಿಗಳಿಗೆ ನಮಲ್ಲಿ ಸಮಯವಿಲ್ಲ,’ ಅಂತ ಟ್ವೀಟ್ ಮಾಡಿದ್ದಾರೆ.
In solidarity with Indian citizen @RichaChadha. No time for Canadians
— Saba Naqvi (@_sabanaqvi) November 25, 2022
ಕಾಂಗ್ರೆಸ್ ಸೇವಾದಳದ ಮಹಾರಾಷ್ಟ್ರ ಘಟಕ ಟ್ವೀಟ್ ಮಾಡಿ, ‘ಕೆನಡಾದ ಪೌರತ್ವ ಪಡೆಯಲು ಭಾರತೀಯ ಪಾಸ್ ಪೋರ್ಟ್ ತ್ಯಜಿಸಿರುವ ಕೆಲವರು ವಾಸ್ತವದಲ್ಲಿ ರಾಷ್ಟ್ರಭಕ್ತಿ ಬಗ್ಗೆ ನೀತಿಪಾಠ ಬೋಧಿಸುತ್ತಿದ್ದಾರೆ. ಸೀರಿಯಸ್ಲೀ!’ ಅಂತ ಹೇಳಿದೆ.
Some people left Indian Passport to attain citizenship in Canada, are actually giving lessons on patriotism. Seriously!
Modi ji disrespected the martyrs of Galvan by saying that “Na koi Ghusa tha, No kisi ne hamari kisi post par kabja kiya hua hai”
— Maharashtra Congress Sevadal (@SevadalMH) November 24, 2022
ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆಯಿದೆ-ಆದರೆ ಈಗಿನ ಸರ್ಕಾರವೇ ಚೀನಾ ಕುರಿತು ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತಾ ನಮ್ಮ ಯೋಧರನ್ನು ಅವಮಾನಿಸಿಕೊಂಡು ಬರುತ್ತಿದೆ. ಅದು ಸರಿ, ನಮ್ಮ ಆಂತರಿಕ ವಿಷಯಗಳ ಬಗ್ಗೆ ಕೆನಡಾದ ಪ್ರಜೆಗೆ ಚಿಂತೆ ಯಾಕೆ?’ ಅಂತ ಅಜಯ್ ಕಾಮತ್ ಹೆಸರಿನ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
We are very proud of our armed forces- it’s our current govt which seems hell bent on insulting them by consistently lying about China. Anyway why is a Canadian citizen worried about our internal matters?
— Ajay Kamath (@ajay43) November 25, 2022
ರಾಜಕೀಯ ಕಾರ್ಯಕರ್ತ ರಾಜೀವ ಧ್ಯಾನಿ ಬಾಲಿವುಡ್ ನಟನನ್ನು ಕೆನಡಾ ಕುಮಾರ ಎಂದು ಸಂಬೋಧಿಸಿ, ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೃತದೇಹಗಳನ್ನು ನೋಡಿ ನಟನಿಗೆ ದುಃಖವಾಗಿರಲಿಲ್ಲ ಅಂತ ಹೇಳಿದ್ದಾರೆ.
गलवान में शहीद हुए जवानों के शव देखकर तुम हर्ट नहीं हुए थे कनाडा कुमार?
— Rajeev Dhyani•राजीव•راجیو•ਰਾਜੀਵ•রাজীব•రాజీవ్ (@rajeevdhyani) November 24, 2022
ಎಫ್ ಸಿ ಆರ್ ಎ ಪ್ರಕರಣವೊಂದರಲ್ಲಿ ವಿಚಾರಣೆಗೊಳಗಾಗಿರುವ ಅಮ್ನೆಸ್ಟಿ ಇಂಡಿಯದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್, ‘ವಿದೇಶದ ಏಜೆಂಟ್ ಈ ವಿಷಯದ ಬಗ್ಗೆ ಮಾತಾಡದಿರುವುದೇ ಲೇಸು,’ ಎಂದಿದ್ದಾರೆ.
foreign agent stay out of this
— Aakar Patel (@Aakar__Patel) November 24, 2022
ಹಾಗೆ ನೋಡಿದರೆ ನಿನ್ನೆಯವರೆಗೆ ಎಡ-ಲಿಬರಲ್ ಎಂದು ಕರೆದುಕೊಳ್ಳುವ ಗುಂಪಿನ ಮನಸ್ಥಿತಿಗೆ ಮಂಕುಕವಿದಂತಿತ್ತು ಮತ್ತು ಖಿನ್ನತೆ ಅವರಿಸಿತ್ತು, ಯಾಕೆಂದರೆ ಬಾಲಿವುಡ್ ನಟನಟಿಯರ ಪೈಕಿ ಪ್ರಮುಖ ಚೀರ್‌ಲೀಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ರಿಚಾ ಚಡ್ಡಾ ತಮ್ಮ ಗಾಲ್ವಾನ್ ಕಾಮೆಂಟ್ ಹಿನ್ನೆಲೆಯಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದರು. ಅಕ್ಷಯ್ ಕುಮಾರ್ ಸೇನೆಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಚಡ್ಡಾ ನಡವಳಿಕೆಯನ್ನು ವಿಕೃತ ಎಂದು ಕರೆದ ಕರೆದ ನಂತರ, ಗಲಿಬಿಲಿಗೊಂಡಿರುವ ಎಡ-ಉದಾರವಾದಿ ಕೂಟವು ಚಡ್ಡಾ ಅವರನ್ನು ಬಲಿಪಶು ಎಂದು ಬಣ್ಣಿಸಲು ಮತ್ತು ಭಾರತೀಯ ಸೇನೆಯ ವಿರುದ್ಧ ಅವರು ಮಾಡಿರುವ ಅವಹೇಳನಕಾರಿ ಟ್ವೀಟ್ ಗೆ ಎದುರಾಗುತ್ತಿರುವ ಟೀಕೆಗಳನ್ನು ಮರೆಮಾಚಲು ಅಕ್ಷಯ್ ಕುಮಾರ್ ರಾಷ್ಟ್ರೀಯತೆಯ ಮೇಲೆ ಆಕ್ರಮಣ ಮಾಡುವ ಮೂಲಕ ಅತಿರೇಕತವನ್ನು ಪ್ರದರ್ಶಿಸಿದೆ.
ಒಂದು ಸಂಗತಿಯನ್ನು ನಾವಿಲ್ಲಿ ನೆನೆಪಿಟ್ಟುಕೊಳ್ಳಬೇಕಿದೆ. ಎಡಪಂಥೀಯರ ಇದೇ ಗುಂಪು ಭಾರತದಲ್ಲಿ ರೈತರು ನಡೆಸಿದ ಚಳುಳಿಯ ಬಗ್ಗೆ ಅರೆಬರೆ ಮಾಹಿತಿ ಹೊಂದಿದ್ದ ಖ್ಯಾತ ಗಾಯಕಿ ರಿಹಾನಾ, ಪೋರ್ನ್ ತಾರೆ ಮಿಯಾ ಖಲೀಫಾ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಮಾಡಿದ ಕಾಮೆಂಟ್ ಗಳನ್ನೇ ಆಧಾರವಾಗಿಟ್ಟುಕೊಂಡು ಮೋದಿ ಸರ್ಕಾರವನ್ನು ಉಗ್ರವಾಗಿ ಟೀಕಿಸಿದ್ದರು.
ಡಿಸೆಂಬರ್ 2020ರಲ್ಲಿ ಭಾರತದ ಕೃಷಿ-ವಿರೋಧಿ ಪ್ರತಿಭಟನೆಗಳ ಬಗ್ಗೆ ಟ್ರುಡೊ, ‘ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿಯ ಬಗ್ಗೆ ನಾನು ಈ ಸಂದರ್ಭದಲ್ಲಿ ಕಾಮೆಂಟ್ ಮಾಡದಿದ್ದರೆ ಅದು ತಪ್ಪಾಗುತ್ತದೆ. ಅಲ್ಲಿನ ಸ್ಥಿತಿ ಕಳವಳಕಾರಿಯಾಗಿದೆ. ಅವರ ಕುಟುಂಬಗಳು ಮತ್ತು ಆಪ್ತರ ಬಗ್ಗೆ ನಮಗೆ ಚಿಂತೆಯಾಗಿದೆ. ಅದೇ ನಿಮ್ಮೆಲ್ಲರ ಎದುರಿರುವ ವಾಸ್ತವ ಅಂತ ನಂಗೊತ್ತಿದೆ,’ ಎಂದು ಹೇಳಿದ್ದರು.
‘ಒಂದು ಸಂಗತಿಯನ್ನು ನಿಮಗೆ ಹೇಳಲಿಚ್ಛಿಸುತ್ತೇನೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ರೈತರಿಗೆ ಇರುವ ಹಕ್ಕನ್ನು ಕೆನಡಾ ಬೆಂಬಲಿಸುತ್ತದೆ. ಮಾತುಕತೆಗೆ ಇರುವ ಪ್ರಾಮುಖ್ಯತೆಯನ್ನು ಗೌರವಿಸುವ ನಾವು ಈ ಕಾರಣಕ್ಕಾಗೇ ಭಾರತದ ಸರ್ಕಾರವನ್ನು ವಿವಿಧ ಸ್ವರೂಪಗಳ ಮೂಲಕ ನೇರವಾಗಿ ಸಂಪರ್ಕಿಸಿ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ,’ ಎಂದು ಟ್ರುಡೊ ಹೇಳಿದ್ದರು.
ಫೆಬ್ರುವರಿ 2021 ರಲ್ಲಿ ಸಿಎನ್ ಎನ್ ನ ‘ಇಂಡಿಯ ಕಟ್ಸ್ ಇಂಟರ್ನೆಟ್ ಅರೌಂಡ್ ನ್ಯೂ ಡೆಲ್ಲಿ ಌಸ್ ಪ್ರೊಟೆಸ್ಟಿಂಗ್ ಫಾರ್ಮರ್ಸ್ ಕ್ಲ್ಯಾಶ್ ವಿತ್ ಪೊಲೀಸ್’ ಶೀರ್ಷಿಕೆಯ ಲೇಖನವನ್ನು ಶೇರ್ ಮಾಡಿ, ಟ್ವೀಟೊಂದರಲ್ಲಿ ಹೀಗೆ ಕೇಳಿದ್ದರು: ‘ ನಾವ್ಯಾಕೆ #FarmersProtest ಬಗ್ಗೆ ಮಾತಾಡುತ್ತಿದ್ದೇವೆ?’. ನಂತರ ಗೊತ್ತಾಗಿದ್ದೇನೆಂದರೆ ಈ ಪಿಆರ್ ಕಸರತ್ತಿಗಾಗಿ ಅವರಿಗೆ 2.5 ಮಿಲಿಯನ್ ಡಾಲರ್ ನೀಡಲಾಗಿತ್ತು.
ಅದಾದ ಬಳಿಕ ಗ್ರೆಟಾ ಥುನ್ಬರ್ಗ್ ಮತ್ತು ಪೋರ್ನ್ ತಾರೆ ಮಿಯಾ ಖಲೀಫಾ ಸಹ ಟ್ವೀಟ್ ಗಳ ಮೂಲಕ ಭಾರತ ಸರ್ಕಾರದ ನೀತಿಗಳನ್ನು ಖಂಡಿಸಿದ್ದರು. ಭಾರತ ಇತಿಹಾಸದ ಪ್ರಮುಖ ದಿನಗಳಾಗಿರುವ ಜನೆವರಿ 23 ಮತ್ತು ಜನೆವರಿ 26 ಗಳ ಮೇಲೆ ಪ್ರಭಾವ ಬೀರಲು ನವೆಂಬರ್ 2020 ರಿಂದ ಅಂತರರಾಷ್ಟ್ರಿಯ ಅಭಿಯಾನ ನಡೆಸಲಾಗಿತ್ತು ಎಂದು ಟೂಲ್ಕಿಟ್ ಮೂಲಕ ಅಮೇಲೆ ಗೊತ್ತಾಗಿತ್ತು.
ಅಕ್ಷಯ್ ಗರಿಷ್ಠ ಪ್ರಮಾಣದ ಆದಾಯ ತೆರಿಗೆ ಪಾವತಿದಾರರಲ್ಲದೆ, 2020 ರಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ಥಾಪನೆಯಾಗಿದ್ದ ಪಿಎಂ ಕೇರ್ಸ್ ನಿಧಿಗೆ ರೂ. 25 ಕೋಟಿಗಳನ್ನು ದೇಣಿಗೆ ನೀಡಿದ್ದರು. ಅವರು, ಗೃಹಖಾತೆ ಸಚಿವಾಲಯದ ಸಹಾಯದಿಂದ ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ ಸೈನಿಕರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲು ‘ಭಾರತ್ ಕೆ ವೀರ್’ ವೇದಿಕೆಯನ್ನು ಸಹ ಪ್ರಾರಂಭಿಸಿದ್ದರು.
ಎಡಪಂಥೀಯ-ಉದಾರವಾದಿಗಳು ಮತ್ತು ಅವಕಾಶವಾದಿ ರಾಜಕಾರಣಿಗಳು ಗಾಲ್ವಾನ್ ಬ್ರೇವ್‌ಹಾರ್ಟ್ಸ್ ವಿರುದ್ಧ ಅವಮಾನಕರ ಹೇಳಿಕೆಗಳಿಗಾಗಿ ವಿವಾದಕ್ಕೀಡಾಗಿರುವ ತಮ್ಮ ಸದಸ್ಯರೊಬ್ಬರನ್ನು ಸಮರ್ಥಿಸಿಕೊಳ್ಳಲು ಅಕ್ಷಯ್ ವಿರುದ್ಧ ನಡೆಸುತ್ತಿರುವ ಹತಾಷ ಆಕ್ರಮಣ ಜನರನ್ನು ದಂಗಾಗಿಸಿದೆ. ರಿಹಾನಾ, ಟ್ರೂಡೊ ಅವರು ಭಾರತದ ಆಂತರಿಕ ವಿಷಯದಲ್ಲಿ ಅವರ ಹಸ್ತಕ್ಷೇಪಕ್ಕಾಗಿ ಶ್ಲಾಘಿಸಿದ ನಂತರ, ಅಕ್ಷಯ್ ಕುಮಾರ್ ವಿರುದ್ಧ ಎಡಪಂಥೀಯರ ಹೇವರಿಕೆ ಹುಟ್ಟಿಸುವ ಬೂಟಾಟಿಕೆಗೆ ಮತ್ತು ಉದಾರತ್ವದ ಇಕೊಸಿಸ್ಟಮ್ ಬಯಲಿಗೆ ಬಿದ್ದಿದೆ.
ಮತ್ತಷ್ಟು ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ