Baba Ramdev: ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗೇ ಕಾಣುತ್ತಾರೆ; ಮತ್ತೆ ಟ್ರೋಲ್ ಆದ ಬಾಬಾ ರಾಮದೇವ್
ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗಳಿಂದ ಮಹಾರಾಷ್ಟ್ರದಲ್ಲಿ ಆಕ್ರೋಶದ ಅಲೆ ಎದ್ದಿರುವಾಗ ರಾಮ್‌ದೇವ್ ಬಾಬಾ ಈ ರೀತಿ ಅಸಂಬದ್ಧವಾಗಿ ಮಾತನಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈ: ಯೋಗ ಗುರು ಬಾಬಾ ರಾಮದೇವ್ (Baba Ramdev) ಶುಕ್ರವಾರ ಮಹಿಳೆಯರ ಉಡುಪುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ. ಪತಂಜಲಿ (Patanjali) ಯೋಗಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ಥಾಣೆಯಲ್ಲಿ ಆಯೋಜಿಸಿದ್ದ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಾಬಾ ರಾಮ್‌ದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಅವರ ಪಕ್ಕದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಇದ್ದರು. ಬಾಬಾ ರಾಮದೇವ್ ಅವರ ಈ ಹೇಳಿಕೆಯಿಂದ ವೇದಿಕೆಯಲ್ಲಿದ್ದವರು ಮುಜುಗರಕ್ಕೀಡಾಗಿದ್ದಾರೆ.
ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗಳಿಂದ ಮಹಾರಾಷ್ಟ್ರದಲ್ಲಿ ಆಕ್ರೋಶದ ಅಲೆ ಎದ್ದಿರುವಾಗ ರಾಮ್‌ದೇವ್ ಬಾಬಾ ಈ ರೀತಿ ಅಸಂಬದ್ಧವಾಗಿ ಮಾತನಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: Patanjali: ಬಾಬಾ ರಾಮದೇವ್ ಗೆ ಮತ್ತೊಮ್ಮೆ ಶಾಕ್! ಪತಂಜಲಿಯ ಪಂಚ ಔಷಧಗಳು ನಿಷೇಧ, ಮೆಡಿಕಲ್ ಮಾಫಿಯಾ ಅಂದರು ಬಾಬಾ
(Baba Ramdev Controversial statement).महाराष्ट्र के ठाणे में रामदेव ने कहा ‘साड़ी पहनने की फुर्सत नहीं थी, कोई बात नहीं, अब घर जाकर साड़ी पहनो, महिलाओं को साड़ी पहनना अच्छा लगता है. महिलाएं सलवार सूट में भी अच्छी लगती हैं और मेरी तरह बिना कुछ पहने भी अच्छी लगती हैं.’ pic.twitter.com/0Sw0NJxjUT
— Garima Mehra Dasauni (@garimadasauni) November 25, 2022
ಈ ಕಾರ್ಯಕ್ರಮದಲ್ಲಿ ಮಹಿಳೆಯರು ಯೋಗಕ್ಕಾಗಿ ಉಡುಪುಗಳನ್ನು ತಂದಿದ್ದರು. ಕೆಲವರು ಸೀರೆಯುಟ್ಟು ಬಂದಿದ್ದರು. ಇನ್ನು ಕೆಲವರಿಗೆ ಯೋಗದ ಬಳಿಕ ಸೀರೆಯುಡಲು ಸಮಯ ಆಗಿರಲಿಲ್ಲವಾದ್ದರಿಂದ ಯೋಗದ ಡ್ರೆಸ್ನಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಹಿನ್ನೆಲೆಯಲ್ಲಿ ತಮಾಷೆಯಾಗಿ ಮಾತನಾಡಿದ ಬಾಬಾ ರಾಮದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದಿದ್ದಾರೆ.