Patanjali: ಬಾಬಾ ರಾಮದೇವ್ ಗೆ ಮತ್ತೊಮ್ಮೆ ಶಾಕ್! ಪತಂಜಲಿಯ ಪಂಚ ಔಷಧಗಳು ನಿಷೇಧ, ಮೆಡಿಕಲ್ ಮಾಫಿಯಾ ಅಂದರು ಬಾಬಾ
Acharya Balkrishna: ಆಯುರ್ವೇದ ಔಷಧಗಳ ವಿರುದ್ಧ ಮೆಡಿಕಲ್ ಮಾಫಿಯಾ ಗುಂಪು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಷಡ್ಯಂತ್ರವನ್ನು ಬಯಲಿಗೆಳೆಯುತ್ತೇವೆ. ವೈದ್ಯಕೀಯ ಲೋಕದಲ್ಲಿ ಗೊಂದಲ, ಭಯದಿಂದ ವ್ಯಾಪಾರ ಮಾಡುವವರು ತಮ್ಮ ವಿರುದ್ಧ ಇಂತಹ ಆರೋಪ, ಟೀಕೆ ಮಾಡುತ್ತಿದ್ದಾರೆ ಎಂದು ಆಚಾರ್ಯ ಬಾಲಕೃಷ್ಣ ಹೇಳಿದರು.
ಯೋಗ ಗುರು ಬಾಬಾ ರಾಮದೇವ್ ಅವರಿಗೆ ಮತ್ತೊಮ್ಮೆ ಶಾಕ್ ಸಿಕ್ಕಿದೆ. ಉತ್ತರಾಖಂಡ್ ಆಯುರ್ವೇದ ಮತ್ತು ಯುನಾನಿ ಸೇವಾ ಆಯೋಗವು ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿ ತಯಾರಿಸುವ 5 ಬಗೆಯ ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಸೇವಾ ಪ್ರಾಧಿಕಾರದ (Uttarakhand Ayurvedic and Unani Services Licensing Authority -UAUSLA) ಮಾನ್ಯತೆ ಅಧಿಕಾರಿ ಡಾ. ಜಿಸಿಎಸ್ ಜಂಗ್ ಬಂಕಿ ಅವರು ದಿವ್ಯ ಮಧುಕೃತಿ, ದಿವ್ಯ ಇಗ್ರಿಡ್ ಗೋಲ್ಡ್, ದಿವ್ಯ ಥೈರೋಗ್ರಿಡ್, ದಿವ್ಯ ಬಿಬಿಗ್ರಿಡ್, ದಿವ್ಯಾ ಲಿಡಿಮ್ ಎಂಬ 5 ಔಷಧಿಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸುವಂತೆ ಪತಂಜಲಿಗೆ ಸೂಚಿಸಿದ್ದಾರೆ. ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಆಕ್ಟ್ ಅನ್ನು (Drugs and Magic Remedies -Objectionable Advertisement -Act, 1954, and Drugs and Cosmetics Act, 1940) ಉಲ್ಲಂಘಿಸುವುದರಿಂದ ಈ ಔಷಧಗಳನ್ನು ನಿಷೇಧಿಸಲಾಗಿದೆ. ಉತ್ತರಾಖಂಡ ಆಯುರ್ವೇದಿಕ್ ಮೆಡಿಸಿನ್ಸ್ ಕಂಟ್ರೋಲ್ ಅಥಾರಿಟಿ ಹೇಳಿದೆ. ಈ 5 ಔಷಧಿಗಳನ್ನು ಮಧುಮೇಹ, ಕಣ್ಣಿನ ಹಾನಿ, ಥೈರಾಯ್ಡ್, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಗೆ ನೀಡಲಾಗುತ್ತದೆ. (Divya Madhugrit, Divya Eyegrit Gold, Divya Thyrogrit, Divya BPgrit and Divya Lipidom).
ಇದೇ ವೇಳೆ ದಿವ್ಯ ಮಧುಕೃತಿ, ದಿವ್ಯ ಇಗ್ರಿಡ್ ಗೋಲ್ಡ್, ದಿವ್ಯ ಥೈರೋಗ್ರಿಡ್, ದಿವ್ಯ ಬಿಬಿಗ್ರಿಡ್, ದಿವ್ಯಾ ಲಿಡಿಮ್ ಎಂಬ ಪಂಚ ಔಷಧಗಳ ಸಂಯೋಜನೆಯನ್ನು ಅಧ್ಯಯನ ಮಾಡಲು ವಿಶೇಷ ಸಮಿತಿಯನ್ನು ನೇಮಿಸಲಾಗಿದೆ ಎಂದು ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಸೇವಾ ಪ್ರಾಧಿಕಾರದ ಮಾನ್ಯತೆ ಅಧಿಕಾರಿ ಡಾ. ಜಿ.ಸಿ.ಎಸ್.ಜಂಗಬಂಗಿ ತಿಳಿಸಿದ್ದಾರೆ. ಒಂದು ವಾರದೊಳಗೆ ಮುಂದಿನ ಆದೇಶ ಬರುವವರೆಗೆ ಈ 5 ಔಷಧಗಳ ಉತ್ಪಾದನೆ ಆರಂಭಿಸದಂತೆ ಪತಂಜಲಿ ಕಂಪನಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಕೇರಳದ ವೈದ್ಯ ಕೆ.ವಿ. ಬಾಬು ನೀಡಿದ ದೂರಿನ ಆಧಾರದ ಮೇಲೆ ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಸೇವಾ ಆಯೋಗ ಕ್ರಮ ಕೈಗೊಂಡಿದೆ. ಪತಂಜಲಿ ಕಂಪನಿಯು ತನ್ನ ಉತ್ಪನ್ನವಾದ ಐ ಡ್ರಾಪ್ಸ್ ಗ್ಲುಕೋಮಾ, ಕಣ್ಣಿನ ಪೊರೆ ಸೇರಿದಂತೆ ನಾನಾ ರೋಗಗಳನ್ನು ಗುಣಪಡಿಸುತ್ತದೆ ಎಂದು ಜಾಹೀರಾತು ನೀಡಿದ್ದು, ಈ ರೋಗಗಳಿಗೆ ಈ ಔಷಧ ಬಳಸಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಂತಹ ಜಾಹೀರಾತುಗಳು ಮಾನವನ ಜೀವಕ್ಕೆ ಅಪಾಯಕಾರಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಪತಂಜಲಿ ಕಂಪನಿ ನೀಡಿರುವ ಪ್ರತಿಕ್ರಿಯೆಯಲ್ಲಿ, ‘ದಿವ್ಯಾ ಫಾರ್ಮಸಿ ತಯಾರಿಸುವ ಎಲ್ಲ ಔಷಧಗಳು ಸರ್ಕಾರ ನೀಡುವ ಗುಣಮಟ್ಟ ಮತ್ತು ಗುಣಮಟ್ಟ ನಿಯಂತ್ರಣದಲ್ಲಿಯೇ ತಯಾರಾಗುತ್ತವೆ ಎಂದಿದ್ದಾರೆ. ವೈದ್ಯಕೀಯ ಅವ್ಯವಸ್ಥೆಯ ಜಗತ್ತಿನಲ್ಲಿ ಭಯದಿಂದ ವ್ಯಾಪಾರ ಮಾಡುವವವರು ತಮ್ಮ ವಿರುದ್ಧ ಇಂತಹ ಆರೋಪ, ಟೀಕೆ ಮಾಡುತ್ತಿದ್ದಾರೆ. ಆಯುರ್ವೇದ ಔಷಧಿಗಳ ವಿರುದ್ಧ ಮಾಫಿಯಾ ಗ್ಯಾಂಗ್ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅದನ್ನು ಬಯಲಿಗೆಳೆಯುತ್ತೇವೆ ಎಂದು ಆಚಾರ್ಯ ಬಾಲಕೃಷ್ಣ, ಎಂ.ಡಿ. ಪತಂಜಲಿ ಆಯುರ್ವೇದ ಕಂಪನಿ (MD of Patanjali Ayurved Ltd) ಹೇಳಿದ್ದಾರೆ.
पतंजलि संस्थान को इससे जो संस्थागत हानि हुई है उसकी भरपाई सहित इस षड्यंत्र के जिम्मेदार व्यक्तियों को आपराधिक कृत्य के लिए दण्डित करने हेतु संस्था कानूनी कार्यवाही करेगी। साथ में संलग्न- 30.09.2022 को विभाग को दिये गए पत्र की प्रति pic.twitter.com/87VUlLcqNH
— Acharya Balkrishna (@Ach_Balkrishna) November 10, 2022