ಪ್ರಾಣಿಯ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಚಿರತೆ (Leopard) ದಾಳಿ ಮಾಡಿದ ಪರಿಣಾಮ ವ್ಯಕ್ತಿಯ ಕಾಲಿಗೆ ಗಾಯವಾಗಿದೆ. ಅಸ್ಸಾಂನ ದಿಬ್ರುಗಢ್‌ನ ಖರ್ಜನ್ ಟೀ ಎಸ್ಟೇಟ್ ಬಳಿ ಘಟನೆ ನಡೆದಿದ್ದು, ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ಗಂಡು ಚಿರತೆ ಚಾಬುವಾ ಬೈಪಾಸ್‌ನ ಮೋರಿಯೊಳಗೆ ಆಶ್ರಯ ಪಡೆದಿತ್ತು. ದಾರಿಹೋಕರು ಇದನ್ನು ಗಮನಿಸಿದ್ದು, ವೇಗವಾಗಿ ಸುದ್ದಿ ಹರಡಿದೆ. ಪರಿಣಾಮವಾಗಿ ಚಿರತೆಯನ್ನು ನೋಡಲು ಹೆಚ್ಚಿನ ಜನರು ಆಗಮಿಸಿದ್ದಾರೆ. ಈ ವೇಳೆ ಘಟನೆ ನಡೆದಿದೆ. ದಾಳಿಗೆ ಒಳಗಾದ ವ್ಯಕ್ತಿ ದಿನಗೂಲಿ ಕೆಲಸ ಮಾಡುತ್ತಿದ್ದು, ಢಕುಖಾನಾದಿಂದ ಹಿಂತಿರುಗುತ್ತಿದ್ದರು. ಈ ವೇಲೆ ಚಿರತೆ ಕಾಣಿಸಿಕೊಂಡ ಬಗ್ಗೆ ತಿಳಿದು ಬಂದಿದ್ದು, ಸ್ಥಳಕ್ಕೆ ತಲುಪಿದ್ದಾರೆ. ಸ್ಥಳಕ್ಕೆ ತಲುಪಿ ಚಿರತೆಯ ಫೋಟೀ ಕ್ಲಿಕ್ಕಿಸುತ್ತಾ ಅವರು ಅದರ ಹತ್ತಿರಕ್ಕೆ ತೆರಳಿದ್ದಾರೆ. ಈ ವೇಳೆ ಚಿರತೆ ಏಕಾಏಕಿ ದಾಳಿ ಮಾಡದ್ದು, ವ್ಯಕ್ತಿಯ ಕಾಲಿಗೆ ಗಾಯಗಳಾಗಿವೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಂತರ ತಿನ್ಸುಕಿಯಾ ಅರಣ್ಯ ಇಲಾಖೆಯ ತಂಡ ಆಗಮಿಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಭಾರತೀಯ ವೈಲ್ಡ್‌ಲೈಫ್ ಟ್ರಸ್ಟ್‌ನ ಪಶುವೈದ್ಯ ಖನಿನ್ ಚಾಂಗ್ಮಾಯಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರತೆಯ ಬಗ್ಗೆ ಮಾಹಿತಿ ಸಿಕ್ಕಿ ತಿನ್ಸುಕಿಯಾ ಅರಣ್ಯ ಇಲಾಖೆಯ ತಂಡವು ಸ್ಥಳಕ್ಕೆ ಧಾವಿಸಿ, ಚಿರತೆಯನ್ನು ತಿನ್ಸುಕಿಯಾಕ್ಕೆ ಕರೆದೊಯ್ದಿದ್ದೇವೆ. ಆರೋಗ್ಯ ತಪಾಸಣೆ ನಡೆಸನಬೇಕಿದೆ. ನಂತರ ಅದನ್ನು ಕಾಡಿಗೆ ಬಿಡಲಾಗುವುದು ಎಂದಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಅರಣ್ಯಾಧಿಕಾರಿಯೊಬ್ಬರು, ಅಸ್ಸಾಂನಲ್ಲಿ ಮಾನವ-ಪ್ರಾಣಿ ಸಂಘರ್ಷದ ನಿದರ್ಶನಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿವೆ ಎಂದಿದ್ದಾರೆ. ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 8 May 22