ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಸಿರ್ಹಾಮಾ ಎಂಬ ಹಳ್ಳಿಯಲ್ಲಿ ಲಷ್ಕರ್ ಇ ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಕಮಾಂಡರ್ನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಮೃತ ಉಗ್ರನ ಹೆಸರು ನಿಸಾರ್ ದಾರ್ ಎಂಬುದಾಗಿ ಜಮ್ಮು-ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಸಿರ್ಹಾಮಾದಲ್ಲಿ ಇನ್ನೂ ಕೂಡ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಸದ್ಯ ಅನಂತ್ನಾಗ್ ಜಿಲ್ಲೆಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸಿರ್ಹಾಮಾದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿಯನ್ನು ಪಡೆದ ಭದ್ರತಾ ಪಡೆ ಸಿಬ್ಬಂದಿ, ಆ ಸ್ಥಳವನ್ನು ಸುತ್ತುವರಿದಿದ್ದರು. ತಾವು ಅಪಾಯದಲ್ಲಿದ್ದೇವೆ ಎಂದು ಅರಿತ ಭಯೋತ್ಪಾದಕರು ರಕ್ಷಣಾ ಪಡೆಗಳ ಮೇಲೆಯೇ ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಆಗ ಅದಕ್ಕೆ ಪ್ರತಿ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ, ಲಷ್ಕರ್ ಇ ತೊಯ್ಬಾದ ಪ್ರಮುಖ ಉಗ್ರನನ್ನೇ ಕೊಂದು ಹಾಕಿದ್ದಾರೆ. ಹಾಗೇ ಇನ್ನೊಬ್ಬಾತ ಸೆರೆ ಸಿಕ್ಕಿದ್ದಾಗಿಯೂ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
Jammu & Kashmir | Security forces have neutralised one LeT terrorist in Kulgam; Operation underway
(Visuals deferred by unspecified time) pic.twitter.com/zVf9n3dJtK
— ANI (@ANI) April 9, 2022
ಜಮ್ಮು-ಕಾಶ್ಮೀರದ ವಿವಿಧ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ತೀವ್ರವಾದ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಈಗೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹರಿಪೋರಾ ಗ್ರಾಮದಲ್ಲಿ ಸುಮಾರು 12 ತಾಸುಗಳ ಕಾಲ ಭದ್ರತಾ ಪಡೆ ಮತ್ತು ಉಗ್ರರ ವಿರುದ್ಧ ಎನ್ಕೌಂಟರ್ ನಡೆದಿತ್ತು. ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇನ್ನೊಂದೆಡೆ ಪುಲ್ವಾಮಾದ ಆವಂತಿಪೋರಾದಲ್ಲಿ ಇಬ್ಬರು ಉಗ್ರರನ್ನೂ ಹತ್ಯೆಗೈಯ್ಯಲಾಗಿತ್ತು.
ಇದನ್ನೂ ಓದಿ: Ranbir- Alia Wedding: ಕೊನೆಗೂ ಬಯಲಾಯ್ತು ಆಲಿಯಾ- ರಣಬೀರ್ ವಿವಾಹದ ದಿನಾಂಕ; ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್
Published On - 9:17 am, Sat, 9 April 22