ಬ್ಯಾಂಕ್ ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿಚಾರಣೆ ನಡೆಸಿದ ಇಡಿ

ಬ್ಯಾಂಕ್ ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿಚಾರಣೆ ನಡೆಸಿದ ಇಡಿ
ಒಮರ್ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, ತನಿಖೆಗೆ ಸಂಬಂಧಿಸಿದಂತೆ ಅವರ ಹಾಜರಾತಿ ಅಗತ್ಯ ಎಂಬ ಆಧಾರದ ಮೇಲೆ ಫೆಡರಲ್ ಏಜೆನ್ಸಿಯಿಂದ ಅಬ್ದುಲ್ಲಾ ಅವರನ್ನು ದೆಹಲಿಗೆ ಕರೆಸಲಾಯಿತು ಎಂದು ಹೇಳಿದೆ.

TV9kannada Web Team

| Edited By: Rashmi Kallakatta

Apr 07, 2022 | 3:55 PM

ದೆಹಲಿ: ಜಮ್ಮು ಮತ್ತು ಕಾಶ್ಮೀರ(Jammu and Kashmir)  ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ(Omar Abdullah) ಅವರನ್ನು ಗುರುವಾರ ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ(money laundering case) ಸಂಬಂಧಿಸಿದಂತೆ ಒಮರ್ ಅಬ್ದುಲ್ಲಾ ಅವರನ್ನು ತನಿಖೆ ನಡೆಸಲಾಗುತ್ತಿದೆ. ನ್ಯಾಷನಲ್ ಕಾನ್ಫರೆನ್ಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, ತನಿಖೆಗೆ ಸಂಬಂಧಿಸಿದಂತೆ ಅವರ ಹಾಜರಾತಿ ಅಗತ್ಯ ಎಂಬ ಆಧಾರದ ಮೇಲೆ ಫೆಡರಲ್ ಏಜೆನ್ಸಿಯಿಂದ ಅಬ್ದುಲ್ಲಾ ಅವರನ್ನು ದೆಹಲಿಗೆ ಕರೆಸಲಾಯಿತು ಎಂದು ಹೇಳಿದೆ. ಇಡಿ ಕಾರ್ಯಾಚರಣೆಯು ರಾಜಕೀಯ ಸ್ವರೂಪದ್ದಾಗಿದ್ದರೂ, ಅಬ್ದುಲ್ಲಾ ಅವರ ಕಡೆಯಿಂದ ಯಾವುದೇ ತಪ್ಪಿಲ್ಲದ ಕಾರಣ ಅದಕ್ಕೆ ಸಹಕರಿಸುತ್ತಾರೆ ಎಂದು ಅದು ಹೇಳಿದೆ. ಜೆಕೆಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ತನಿಖೆಗೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಲು ಇಡಿ ದೆಹಲಿಗೆ ಕರೆದಿತ್ತು. ಈ ಕಸರತ್ತು ರಾಜಕೀಯ ಸ್ವರೂಪದ್ದಾಗಿದ್ದರೂ ಅವರ ಕಡೆಯಿಂದ ಯಾವುದೇ ತಪ್ಪಿಲ್ಲದ ಕಾರಣ ಅವರು ಸಹಕರಿಸುತ್ತಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಕೇಂದ್ರೀಯ ತನಿಖಾ ದಳ (CBI) ಈ ಹಿಂದೆ ಜೆ & ಕೆ ಬ್ಯಾಂಕ್ ಮಾಜಿ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಶೇಖ್ ಮತ್ತು ಇತರರ ವಿರುದ್ಧ ಸಾಲ ಮತ್ತು ಹೂಡಿಕೆಗಳ ಮಂಜೂರಾತಿಯಲ್ಲಿ ಅಕ್ರಮಗಳ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.

ಕೇಂದ್ರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಎನ್‌ಸಿ ವಕ್ತಾರರು, “ಇದು ಅದೇ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಬಿಜೆಪಿಗೆವಿರೋಧವನ್ನು ವ್ಯಕ್ತಪಡಿಸುವ ಯಾವುದೇ ರಾಜಕೀಯ ಪಕ್ಷವನ್ನು ಉಳಿಸಲಾಗಿಲ್ಲ, ಅದು ಇಡಿ, ಸಿಬಿಐ, ಎನ್ಎಐ, ಎನ್ ಸಿಬಿ – ಎಲ್ಲವನ್ನೂ ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಎಲ್ಲೆಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆಯೋ, ಇಡಿ ಯಂತಹ ಏಜೆನ್ಸಿಗಳು ಬಿಜೆಪಿಗೆ ಸವಾಲು ಒಡ್ಡುವ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ನೋಡಿದ್ದೇವೆ.

ಈ ಕಾರ್ಯವು ರಾಜಕೀಯ ಸ್ವರೂಪದ್ದಾಗಿದೆ ಎಂದು ಪಕ್ಷವು ಒತ್ತಿಹೇಳಿದೆ. ಈ ಸಮನ್ಸ್ 2019 ರ ಆಗಸ್ಟ್ 5 ಕ್ಕಿಂತ ಮುಂಚೆಯೇ ಪ್ರಾರಂಭವಾದ ಕೆಟ್ಟ ದೂಷಣೆ ಅಭಿಯಾನದ ಮತ್ತೊಂದು ಹೆಜ್ಜೆಯಾಗಿದೆ. ಆಗ ರಾಜ್ಯಪಾಲರಂತಹ ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವವರು ಬಿಜೆಪಿ ವಿರೋಧಿಗಳ ವಿರುದ್ಧ ದೂಷಣೆಯ ಆರೋಪಗಳನ್ನು ಮಾಡಲು ಬಳಸಿಕೊಂಡರು ಎಂದಿದೆ.

ಸಿಬಿಐನ ಎಫ್‌ಐಆರ್‌ನ ಅರಿವು ಪಡೆದು ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ತನಿಖೆಯನ್ನು ಆರಂಭಿಸಿದೆ.  2010 ರಲ್ಲಿ ಮುಂಬೈನ ಬಾಂದ್ರಾ ಕುರ್ಲಾದಲ್ಲಿ M/s ಆಕೃತಿ ಗೋಲ್ಡ್ ಬಿಲ್ಡರ್ಸ್‌ನಿಂದ ₹ 180 ಕೋಟಿಗೆ ಅಧಿಕ ದರದಲ್ಲಿ ಆಸ್ತಿಯನ್ನು ಖರೀದಿಸಿದ್ದಕ್ಕಾಗಿ ಜೆ&ಕೆ ಬ್ಯಾಂಕ್‌ನ ಅಂದಿನ ಆಡಳಿತದ ವಿರುದ್ಧ ಸಿಬಿಐ 2021 ರಲ್ಲಿ ಪ್ರಕರಣವನ್ನು ದಾಖಲಿಸಿದೆ.

ಇದನ್ನೂ ಓದಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ನಂತರ ಕಾಶ್ಮೀರದ ಈ ಹಳ್ಳಿಗೆ ಸಿಕ್ಕಿತು ವಿದ್ಯುತ್ ಸಂಪರ್ಕ

Follow us on

Related Stories

Most Read Stories

Click on your DTH Provider to Add TV9 Kannada