ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ನಂತರ ಕಾಶ್ಮೀರದ ಈ ಹಳ್ಳಿಗೆ ಸಿಕ್ಕಿತು ವಿದ್ಯುತ್ ಸಂಪರ್ಕ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ನಂತರ ಕಾಶ್ಮೀರದ ಈ ಹಳ್ಳಿಗೆ ಸಿಕ್ಕಿತು ವಿದ್ಯುತ್ ಸಂಪರ್ಕ
ವಿದ್ಯುತ್ ಸಂಪರ್ಕ

ಈ ಹಳ್ಳಿಯಲ್ಲಿ ಸಂಜೆಯ ಸಮಯದಲ್ಲಿ ಬೆಳಕಿನ ಏಕೈಕ ಮೂಲವೆಂದರೆ ಮೇಣದಬತ್ತಿಗಳು ಮತ್ತು ಎಣ್ಣೆ ದೀಪಗಳಾಗಿತ್ತು. ಕ್ರಮೇಣ ಅದೇ ಅವರ ದೈನಂದಿನ ಜೀವನದ ಭಾಗವಾಯಿತು.

TV9kannada Web Team

| Edited By: Sushma Chakre

Apr 07, 2022 | 2:30 PM

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಈ ಗ್ರಾಮಕ್ಕೆ ಇದೀಗ ಕರೆಂಟ್ ಬಂದಿದೆ. ಜಮ್ಮು ಕಾಶ್ಮೀರದ ಉಧಮ್‌ಪುರದ ಗ್ರಾಮವಾದ ಸದ್ದಲ್‌ಗೆ ಕೇಂದ್ರ ಸರ್ಕಾರದ ‘ಅನ್ಟೈಡ್ ಗ್ರ್ಯಾಂಟ್ಸ್’ ಯೋಜನೆಯಡಿ ಬುಧವಾರ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ (Electricity Connection) ಬಂದಿದೆ. ಈ ಮೂಲಕ ಈ ಗ್ರಾಮ ಕತ್ತಲೆಯಿಂದ ಮುಕ್ತಿ ಪಡೆದಿದೆ. 75 ಕೊನೆಗೂ ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರುವುದರಿಂದ ಈ ಗ್ರಾಮದ ನಿವಾಸಿಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆಶಾಭಾವನೆ ಹೊಂದಿದ್ದಾರೆ.

ಮೊದಲು, ಈ ಹಳ್ಳಿಯಲ್ಲಿ ಸಂಜೆಯ ಸಮಯದಲ್ಲಿ ಬೆಳಕಿನ ಏಕೈಕ ಮೂಲವೆಂದರೆ ಮೇಣದಬತ್ತಿಗಳು ಮತ್ತು ಎಣ್ಣೆ ದೀಪಗಳಾಗಿತ್ತು. ಕ್ರಮೇಣ ಅದೇ ಅವರ ದೈನಂದಿನ ಜೀವನದ ಭಾಗವಾಯಿತು. ತಮ್ಮ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದೀಗ ಈಡೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಾಚರಣೆಯ ಯಶಸ್ಸಿಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಗ್ರಾಮಸ್ಥರು ಮನ್ನಣೆ ನೀಡಿದ್ದಾರೆ. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಡಳಿತ, ಉಧಮ್‌ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಈ ಹಳ್ಳಿಯ ಮಕ್ಕಳು ಕೃತಜ್ಞರಾಗಿದ್ದಾರೆ.

ಈಗ ನಾವು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಓದುತ್ತೇವೆ ಎಂದು ವಿದ್ಯಾರ್ಥಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಿದ್ಯುತ್ ಇಲ್ಲದ ಕಾರಣ ಎಣ್ಣೆ ದೀಪ ಹಚ್ಚುವುದನ್ನು ಓದಬೇಕಾಗಿತ್ತು ಎನ್ನುತ್ತಾರೆ 8ನೇ ತರಗತಿಯ ವಿದ್ಯಾರ್ಥಿ ಪ್ಯಾರ್ ಸಿಂಗ್. ಈ ಹಳ್ಳಿಯ ಹಿಂದಿನ ಪೀಳಿಗೆಯವರು ತಮ್ಮ ಮನೆಗಳಲ್ಲಿ ವಿದ್ಯುತ್ ಅನ್ನೇ ನೋಡಿರಲಿಲ್ಲ. ಇಷ್ಟು ಸುದೀರ್ಘ ಕಾಯುವಿಕೆಯ ನಂತರ ನಮಗೆ ವಿದ್ಯುತ್ ಒದಗಿಸಿದ ಇಲಾಖೆಗೆ ಇಂದು ನಾವು ಕೃತಜ್ಞರಾಗಿರುತ್ತೇವೆ ಎಂದು 72 ವರ್ಷದ ಬದರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ನಾಳೆ ದೇಶದಲ್ಲೂ ಆಗಬಹುದು; ಬುದ್ಧಿಜೀವಿಗಳು ಮೌನವಾಗಿದ್ದಾರೆ -ಬಿಜೆಪಿ ನಾಯಕ ಸಿ.ಟಿ.ರವಿ

ಗೃಹ ಬಳಕೆ ವಿದ್ಯುತ್​ ದರ ಏರಿಕೆಯಾಯ್ತು! ಏಪ್ರಿಲ್​ 1ರಿಂದಲೇ ಯೂನಿಟ್​​ಗೆ 35 ಪೈಸೆ ಹೆಚ್ಚಳ, ಲೆಕ್ಕಾಚಾರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada