ಗೃಹ ಬಳಕೆ ವಿದ್ಯುತ್​ ದರ ಏರಿಕೆಯಾಯ್ತು! ಏಪ್ರಿಲ್​ 1ರಿಂದಲೇ ಯೂನಿಟ್​​ಗೆ 35 ಪೈಸೆ ಹೆಚ್ಚಳ, ಲೆಕ್ಕಾಚಾರ ಇಲ್ಲಿದೆ

ಗೃಹ ಬಳಕೆ ವಿದ್ಯುತ್​ ದರ ಏರಿಕೆಯಾಯ್ತು! ಏಪ್ರಿಲ್​ 1ರಿಂದಲೇ ಯೂನಿಟ್​​ಗೆ 35 ಪೈಸೆ ಹೆಚ್ಚಳ, ಲೆಕ್ಕಾಚಾರ ಇಲ್ಲಿದೆ
ಸಾಂದರ್ಭಿಕ ಚಿತ್ರ

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.

TV9kannada Web Team

| Edited By: Ayesha Banu

Apr 05, 2022 | 12:41 PM

ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಚರ್ಚೆಯಲ್ಲಿರುವ ವಿದ್ಯುತ್ ದರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ(Electricity Bill) ಶಾಕ್ ಎದುರಾಗಲಿದೆ. ಪ್ರತಿ ಯೂನಿಟ್​​ಗೆ 35 ಪೈಸೆ ಹೆಚ್ಚಳ ಮಾಡಿ ಕೆಇಆರ್​ಸಿ ಘೋಷಣೆ ಮಾಡಿದೆ. ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್​​ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ. ಕಳೆದ ವರ್ಷ 30 ಪೈಸೆ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ.

ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್​​ಗೆ 35 ಪೈಸೆ ಹೆಚ್ಚಳ ಮಾಡಲಾಗಿದ್ದು ಏಪ್ರಿಲ್​ 1ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ. ಎಸ್ಕಾಂಗಳು 1 ರೂ. 85 ಪೈಸೆ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದವು. ಸಾಧಕ ಬಾಧಕ ಪರಿಶೀಲಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) 35 ಪೈಸೆ ಹೆಚ್ಚಿಸಿದೆ. ವಿದ್ಯುತ್ ದರ ಪರಿಷ್ಕರಣೆ ವಿಚಾರವಾಗಿ ವಸಂತನನಗರದ KERC ಕಚೇರಿಯಲ್ಲಿ ಅಧ್ಯಕ್ಷ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿದ್ದು ಪ್ರತಿ ಯೂನಿಟ್​​ಗೆ 35 ಪೈಸೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.

ಆದಾಯ ಕೊರತೆ ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಇಂಧನ ಶುಲ್ಕ ಕೇವಲ 5 ಪೈಸೆ ಹೆಚ್ಚಳ ಮಾಡಿದ್ದೇವೆ. ಈ ಬಾರಿ ಶೇಕಡಾ 4.33ರಷ್ಟು ದರ ಹೆಚ್ಚಳ ಮಾಡಲಾಗಿದೆ. ಸರಾಸರಿ ಪ್ರತಿ ಯೂನಿಟ್​ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಇಂಧನ ವೆಚ್ಚ ಸೇರಿ ಒಟ್ಟು 35 ಪೈಸೆ ಏರಿಕೆ ಮಾಡಲಾಗಿದೆ ಎಂದರು. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ 1 ವರ್ಷದವರೆಗೆ ಮಾಸಿಕ ಇಂಧನ ಬಳಕೆಯಲ್ಲಿ ರಿಯಾಯಿತಿ ನೀಡಲಾಗುವುದು. ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್​ಗೆ 50 ಪೈಸೆ ರಿಯಾಯಿತಿ ನೀಡಲಾಗುವುದು ಹಾಗೂ ಸೀಸನಲ್‌ ಇಂಡಸ್ಟ್ರೀಸ್-ಯೂನಿಟ್​​ಗೆ 1 ರೂ. ರಿಯಾಯಿತಿ ಇಂಧನ ದರ ಯೋಜನೆ ಮುಂದುವರಿಯಲಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್​ಗೆ ದರ ಏರಿಕೆ ಇಲ್ಲ. ಹಾಲಿ‌ ದರವೇ ಮುಂದುವರಿಯಲಿದೆ ಎಂದು KERC ಅಧ್ಯಕ್ಷ ಮಂಜುನಾಥ್ ಹೇಳಿದ್ರು.

ವಿದ್ಯುತ್ ದರ ಹೆಚ್ಚಳ ಕೇವಲ ತಾತ್ಕಾಲಿಕ; ಕಲ್ಲಿದ್ದಲು ದರ ಇಳಿಕೆಯಾದಾಗ ವಿದ್ಯುತ್ ದರವೂ ಇಳಿಕೆ
ಇನ್ನು ವಿದ್ಯುತ್​ ದರ ಏರಿಕೆ ಕುರಿತು ಸಚಿವ ನಿರಾಣಿ ಪ್ರತಿಕ್ರಿಯಿಸಿದ್ದು ಕಲ್ಲಿದ್ದಲು ಬೆಲೆ ಹೆಚ್ಚಾದ್ದರಿಂದ ವಿದ್ಯುತ್ ಬೆಲೆಯೂ ಹೆಚ್ಚಳವಾಗಿದೆ. ಇದು ಕೇವಲ ತಾತ್ಕಾಲಿಕ ದರ ಹೆಚ್ಚಳ. ಕಲ್ಲಿದ್ದಲು ದರ ಇಳಿಕೆಯಾದಾಗ ವಿದ್ಯುತ್ ದರವೂ ಇಳಿಕೆಯಾಗುತ್ತದೆ ಎಂದು ಉಡುಪಿಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಥರ್ಮಲ್ ಪವರ್ ಪ್ಲಾಂಟ್ ಗೆ ಸರಬರಾಜಾಗುವ ಕಲ್ಲಿದ್ದಲು ದರ ಏರಿಕೆಯಾಗಿದೆ. ಹಿಂದೆ 5000 ದಿಂದ 6000 ಪ್ರತಿ ಟನ್ನಿಗೆ ಸಿಗುತ್ತಿತ್ತು. ಈಗ ಪ್ರತಿ ಟನ್ನಿಗೆ 12ರಿಂದ 15 ಸಾವಿರಕ್ಕೆ ಬೆಲೆ ಏರಿಕೆಯಾಗಿದೆ. ನಾವು ಮುಖ್ಯವಾಗಿ ಕಲ್ಲಿದ್ದಲು ಆಧಾರಿತ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ. ಕಲ್ಲಿದ್ದಲು ಬೆಲೆ ಹೆಚ್ಚಾದ್ದರಿಂದ ವಿದ್ಯುತ್ ಬೆಲೆಯೂ ಹೆಚ್ಚಾಗಿದೆ. ಇದು ಕೇವಲ ತಾತ್ಕಾಲಿಕ ದರ ಹೆಚ್ಚಳ. ಕಲ್ಲಿದ್ದಲು ದರ ಇಳಿಕೆಯಾದಾಗ ವಿದ್ಯುತ್ ದರವೂ ಇಳಿಕೆಯಾಗುತ್ತದೆ ಎಂದರು.

ಇದನ್ನೂ ಓದಿ: ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್; ವಿದ್ಯುತ್ ದರ ಏರಿಕೆಗೆ ಮುಂದಾದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

ಕಾಂಗ್ರೆಸ್ ತೊರೆದು ಕಳೆದ ವರ್ಷ ಟಿಎಂಸಿ ಸೇರಿದ್ದ ಅಶೋಕ್ ತಂವರ್ ಈಗ ಎಎಪಿಗೆ ಸೇರಲು ಸಿದ್ಧತೆ

Follow us on

Related Stories

Most Read Stories

Click on your DTH Provider to Add TV9 Kannada