ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್; ವಿದ್ಯುತ್ ದರ ಏರಿಕೆಗೆ ಮುಂದಾದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್; ವಿದ್ಯುತ್ ದರ ಏರಿಕೆಗೆ ಮುಂದಾದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ
ಸಾಂದರ್ಭಿಕ ಚಿತ್ರ

ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ. 1 ರೂಪಾಯಿ 50 ಪೈಸೆ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ದರ ಏರಿಕೆ ಸಂಬಂಧ KERC ಸಂಜೆ 4ಕ್ಕೆ ಸುದ್ದಿಗೋಷ್ಠಿ ಕರೆದಿದೆ.

TV9kannada Web Team

| Edited By: Ayesha Banu

Apr 04, 2022 | 2:34 PM

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಖಾದ್ಯತೈಲ, ಸಿಲಿಂಡರ್ ಸೇರಿದಂತೆ ದಿನನಿತ್ಯದ ಎಲ್ಲದರ ಬೆಲೆ ಏರಿಕೆ ಮಾಡಲು ಚಿಂತನೆ ನಡೆದಿದೆ. ಇದರ ನಡುವೆ ಈಗ ಜನರಿಗೆ ಮತ್ತೊಂದು ಹೊರೆ ಬೀಳಲಿದೆ. ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮುಂದಾಗಿದೆ.

ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ. 1 ರೂಪಾಯಿ 50 ಪೈಸೆ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ದರ ಏರಿಕೆ ಸಂಬಂಧ KERC ಸಂಜೆ 4ಕ್ಕೆ ಸುದ್ದಿಗೋಷ್ಠಿ ಕರೆದಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಕೆಇಆರ್ಸಿ ಕಚೇರಿಯಿಂದ KERC ಅಧ್ಯಕ್ಷ ಮಂಜುನಾಥ್, ಸುದ್ದಿಗೋಷ್ಠಿ ನಡೆಸಲಿದ್ದು ದರ ಏರಿಕೆ ಸಂಬಂಧ ಮಾಹಿತಿ ನೀಡಲಿದ್ದಾರೆ.

ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? – 2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ – 2010 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೈಕ್ – 2011 ರಲ್ಲಿ ಪ್ರತಿ ಯೂನಿಟ್ ಗೆ 28 ಪೈಸೆ ಹೈಕ್ – 2012 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೆಚ್ಚಳ – 2013 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೈಕ್ – 2017 ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ – 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ – 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ

ಯುಗಾದಿ ಮುನ್ನಾ ದಿನ ಎಲ್​ಪಿಜಿ ದರ ಏರಿಕೆ: ಹೊಟೆಲ್​ಗಳಲ್ಲಿ ದರ ಹೆಚ್ಚಳದ ಬಿಸಿ ಆರ್ಥಿಕ ವರ್ಷದ ಮೊದಲ ದಿನವೂ ಆಗಿರುವ ಏಪ್ರಿಲ್ 1ರಂದು ಕೇಂದ್ರ ಸರ್ಕಾರ ಎಲ್​ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದೆ. ವಾಣಿಜ್ಯ ಎಲ್​ಪಿಸಿ ಸಿಲಿಂಡರ್‌ ಬೆಲೆ ₹2,253ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಉಪಹಾರ, ಊಟ ದುಬಾರಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 2ನೇ ವಾರದಲ್ಲಿ ಮತ್ತೆ ದರ ಏರಿಕೆ ಮಾಡುವ ಚಿಂತನೆಯೂ ಕೇಂದ್ರ ಸರ್ಕಾರಕ್ಕೆ ಇದೆ ಎನ್ನಲಾಗಿದೆ. ದಿನಬಳಕೆ ವಸ್ತುಗಳ ದರದ ಮೇಲೆ ಪ್ರಭಾವ ಬೀರುವ ಅಡುಗೆ ಅನಿಲ, ಎಣ್ಣೆ, ಪೆಟ್ರೋಲ್, ಡೀಸೆಲ್, ನೀರಿನ ಬಿಲ್, ವಿದ್ಯುತ್ ಬಿಲ್, ಹಾಲಿನ ದರ ಏರಿಕೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿಯೂ ಟೀ, ಕಾಫಿ, ಉಪಹಾರ, ಊಟದ ಬೆಲೆ ಹೆಚ್ಚಿಸಲು ಹೊಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ ಎಂದು ಟಿವಿ9ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ‌ ಅಧ್ಯಕ್ಷ ಪಿ.ಸಿ.ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ನಿರಂತರ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ಕಂಗಾಲಾಗಿದೆ. ಕಳೆದ 3 ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹ 350ರಷ್ಟು ಹೆಚ್ಚಾಗಿದೆ. ಇಂದು ಒಂದೇ ದಿನ ₹ 250 ಏರಿಕೆಯಾಗಿದೆ. ಹೀಗಾಗಿ ಉದ್ಯಮ ನಿರ್ವಹಣೆ ಕಷ್ಟವಾಗುತ್ತಿದೆ. ಎಲ್ಲ ರೀತಿಯ ಊಟ, ತಿಂಡಿ ದರಗಳ ಪರಿಷ್ಕರಣೆ ಅನಿವಾರ್ಯವಾಗುತ್ತಿದೆ. ಸರಾಸರಿ ₹ 5ರಷ್ಟು ಬೆಲೆ ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದೇವೆ. ಸೋಮವಾರ ಸಂಜೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ

Best Smartphone: ಭಾರತದಲ್ಲಿ 20,000 ರೂ. ಒಳಗೆ ಲಭ್ಯವಿರುವ ಹೊಚ್ಚ ಹೊಸ ಬೆಸ್ಟ್ ಫೋನ್​ಗಳು

Follow us on

Related Stories

Most Read Stories

Click on your DTH Provider to Add TV9 Kannada