AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಶಶಿ ತರೂರ್​​ ನೋಟ, ನಗುವಿಗೆ ಮನಸೋತ ನೆಟ್ಟಿಗರು; ಸಂಸತ್ತಿನಲ್ಲಿ ಸುಪ್ರಿಯಾ ಸುಲೆ ಜತೆ ಮಾತಾಡುತ್ತ ಕುಳಿತ ಭಂಗಿ ನೋಡಿ !

ನೆಟ್ಟಿಗರಂತೂ ಶಶಿ ತರೂರ್​ರನ್ನು ಸಿಕ್ಕಾಪಟೆ ಕಾಲೆಳೆದಿದ್ದಾರೆ. ಸುಪ್ರಿಯಾ ಸುಲೆ ಮಾತನಾಡುತ್ತಿದ್ದರೆ, ಶಶಿ ತರೂರ್​ ಮುಖಭಾವ ಹೇಗಿತ್ತು ಎಂಬುದನ್ನು ಝೂಮ್ ಮಾಡಿ ತೋರಿಸಲಾಗಿದೆ.

Video: ಶಶಿ ತರೂರ್​​ ನೋಟ, ನಗುವಿಗೆ ಮನಸೋತ ನೆಟ್ಟಿಗರು; ಸಂಸತ್ತಿನಲ್ಲಿ ಸುಪ್ರಿಯಾ ಸುಲೆ ಜತೆ ಮಾತಾಡುತ್ತ ಕುಳಿತ ಭಂಗಿ ನೋಡಿ !
ಸುಪ್ರಿಯಾ ಸುಲೆ-ಶಶಿ ತರೂರ್​ ಮಾತು
TV9 Web
| Edited By: |

Updated on:Apr 07, 2022 | 4:23 PM

Share

ನೀವೇನೇ ಹೇಳಿ, ಕಾಂಗ್ರೆಸ್​ ಸಂಸದ ಶಶಿ ತರೂರ್​ ಪದೇಪದೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಹೆಚ್ಚು. ಕೆಲವು ವಿಭಿನ್ನ, ವಿಶಿಷ್ಟ ಕಾರಣಗಳಿಗೆ ಅವರು ಟ್ರೋಲ್ ಆಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಶಶಿ ತರೂರ್​ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.. ಅದೂ ಲೋಕಸಭೆಯಲ್ಲಿ ಕಂಡುಬಂದ ಒಂದು ಸನ್ನಿವೇಶದಿಂದಾಗಿ !.

Farrago Abdullah ಎಂಬ ಟ್ವಿಟರ್ ಅಕೌಂಟ್​​ನಿಂದ ವಿಡಿಯೋವೊಂದು ಶೇರ್ ಆಗಿದೆ. ಅದರಲ್ಲಿ ಫಾರೂಕ್ ಅಬ್ದುಲ್ಲಾ ಎದ್ದು ನಿಂತು, ಸದನವನ್ನು ಉದ್ದೇಶಿಸಿ ಗಂಭೀರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರ ತುಸು ಹಿಂದೆ ಕುಳಿತ ಶಶಿ ತರೂರ್​, ಸಂಸದೆ ಸುಪ್ರಿಯಾ ಸುಲೆಯೊಂದಿಗೆ ಏನೋ ಹರಟೆಹೊಡೆಯುತ್ತಿದ್ದಾರೆ. ಅದೂ ಹೇಗೆ ಅಂತೀರಿ, ಮುಂದಿನ ಸಾಲಿನಲ್ಲಿ ಕುಳಿತ ಸುಪ್ರಿಯಾ ಹಿಂದಿರುಗಿ ಕುಳಿತು ಶಶಿ ತರೂರ್​ಗೆ ಏನೋ ಹೇಳುತ್ತಿದ್ದಾರೆ. ಶಶಿ ತರೂರ್​ ತಮ್ಮ ಮುಂದಿನ ಡೆಸ್ಕ್​ ಮೇಲೆ ಎರಡೂ ಕೈಯಿಟ್ಟು, ಆ ಕೈಗಳ ಮೇಲೆ ತಮ್ಮ ಗಲ್ಲವನ್ನಿಟ್ಟು, ಮುಗುಳ್ನಗುತ್ತ ಸುಪ್ರಿಯಾ ಮಾತುಗಳಿಗೆ ತಲೆ ಹಾಕುತ್ತ ಆಲಿಸುತ್ತಿದ್ದಾರೆ. ಅದನ್ನು ನೋಡಿದರೆ ಕಾಲೇಜು ಹುಡುಗರ ಫೀಲ್ ಬಾರದೆ ಇರದು. ಹೀಗೆ ಸುಪ್ರಿಯಾ ಸುಲೆಯ ಮಾತುಗಳನ್ನು ಅಷ್ಟು ಮಗ್ನವಾಗಿ ಆಲಿಸುತ್ತ, ಅದಕ್ಕೆ ತಲೆ ಅಲ್ಲಾಡಿಸುತ್ತಿರುವ ಶಶಿ ತರೂರ್​​ರನ್ನು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ. ಈ ವಿಡಿಯೋಕ್ಕೆ ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡನ್ನು ಹಾಕಿ ವೈರಲ್ ಮಾಡಲಾಗಿದೆ. ಹೀಗಾಗಿ ಫಾರೂಕ್​ ಅಬ್ದುಲ್ಲಾ ಯಾವ ವಿಚಾರ ಮಾತನಾಡುತ್ತಿದ್ದರು ಎಂಬುದು ಗೊತ್ತಾಗುತ್ತಿಲ್ಲ.

ನೆಟ್ಟಿಗರಂತೂ ಶಶಿ ತರೂರ್​ರನ್ನು ಸಿಕ್ಕಾಪಟೆ ಕಾಲೆಳೆದಿದ್ದಾರೆ. ಸುಪ್ರಿಯಾ ಸುಲೆ ಮಾತನಾಡುತ್ತಿದ್ದರೆ, ಶಶಿ ತರೂರ್​ ಮುಖಭಾವ ಹೇಗಿತ್ತು ಎಂಬುದನ್ನು ಝೂಮ್ ಮಾಡಿ ತೋರಿಸಲಾಗಿದೆ. ವೃತ್ತಿಜೀವನವನ್ನೂ ಹೇಗೆ ಬೋರ್​ ಬಾರದಂತೆ ಮಾಡಬೇಕು ಎಂಬುದನ್ನು ಶಶಿ ತರೂರ್​ ತೋರಿಸುತ್ತಿದ್ದಾರೆ ಎಂಬಂಥ ಕಮೆಂಟ್​ಗಳನ್ನೂ ನೆಟ್ಟಿಗರು ಮಾಡಿದ್ದಾರೆ ಇಲ್ಲಿದೆ ನೋಡಿ ಫನ್ನಿ ವಿಡಿಯೋ..

ಇದನ್ನೂ ಓದಿತಂದೆಯಿಂದಲೇ ಮಗನಿಗೆ ಬೆಂಕಿ ಹಾಕಿ ಹತ್ಯೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗ ಸಾವು; ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆ

Published On - 4:23 pm, Thu, 7 April 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್