Maharashtra Politics: : ನಿಮಗೆ ತಾಕತ್ತಿದ್ದರೆ ವರ್ಲಿಯಿಂದ ನನ್ನ ವಿರುದ್ಧ ನಿಂತು ಗೆದ್ದು ತೋರಿಸಿ: ಶಿಂದೆಗೆ ಆದಿತ್ಯ ಠಾಕ್ರೆ ಸವಾಲು

| Updated By: ನಯನಾ ರಾಜೀವ್

Updated on: Feb 05, 2023 | 12:20 PM

ನಿಮಗೆ ತಾಕತ್ತಿದ್ದರೆ ವರ್ಲಿಯಿಂದ ನನ್ನ ವಿರುದ್ಧ ನಿಂತು ಗೆದ್ದು ತೋರಿಸಿ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆಗೆ ಸವಾಲೆಸೆದಿದ್ದಾರೆ.

Maharashtra Politics: : ನಿಮಗೆ ತಾಕತ್ತಿದ್ದರೆ ವರ್ಲಿಯಿಂದ ನನ್ನ ವಿರುದ್ಧ ನಿಂತು ಗೆದ್ದು ತೋರಿಸಿ: ಶಿಂದೆಗೆ ಆದಿತ್ಯ ಠಾಕ್ರೆ ಸವಾಲು
ಆದಿತ್ಯ ಠಾಕ್ರೆ
Follow us on

ನಿಮಗೆ ತಾಕತ್ತಿದ್ದರೆ ವರ್ಲಿಯಿಂದ ನನ್ನ ವಿರುದ್ಧ ನಿಂತು ಗೆದ್ದು ತೋರಿಸಿ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆಗೆ ಸವಾಲೆಸೆದಿದ್ದಾರೆ. ಎಎನ್​ಐ ವರದಿ ಪ್ರಕಾರ, ಶಿವಸೇನಾ ನಾಯಕ ಆದಿತ್ಯ ಠಾಕ್ರೆ ನಾನು ಕೂಡ ರಾಜೀನಾಮೆ ನೀಡುತ್ತೇವೆ, ಶಿಂದೆಯವರು ಕೂಡ ರಾಜೀನಾಮೆ ನೀಡಲಿ ಬಳಿಕ ವರ್ಲಿ ಕ್ಷೇತ್ರದಿಂದ ಇಬ್ಬರೂ ಚುನಾವಣೆಗೆ ಸ್ಪರ್ಧಿಸೋಣ ಅಲ್ಲಿ ಗೆದ್ದು ತೋರಿಸಲು ಎಂದು ಹೇಳಿದ್ದಾರೆ.

ಭಾರತದ ಬೇರೆ ಯಾವುದೇ ರಾಜ್ಯಗಳಲ್ಲಿ ನಾವು 40 ದೇಶದ್ರೋಹಿಗಳನ್ನು ಪಕ್ಷಕ್ಕೆ ಸೇರಿಸಿ ನಂತರ ಚುನಾವಣೆಯಿಲ್ಲದೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದನ್ನು ನೋಡಿಲ್ಲ. ಶಿಂದೆ ಬಣದ ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ನಡೆಸುವ ಧೈರ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯ ಠಾಕ್ರೆ ಒಂದೊಮ್ಮೆ ಏಕನಾಥ್ ಶಿಂದೆಗೆ ತಾಕತ್ತಿದ್ದರೆ ನನ್ನ ವಿರುದ್ಧ ನಿಂತು ಗೆಲ್ಲಲಿ, ಏಕನಾಥ್ ಶಿಂದೆ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಜೂನ್​ 2022ರಲ್ಲಿ ಇಬ್ಭಾಗವಾಯಿತು. ರಾಜ್ಯದಲ್ಲಿ ಸರ್ಕಾರ ರಚಿಸಲು ಅದರ ಶಾಸಕರು ಏಕನಾಥ್ ಶಿಂದೆ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣದ ಶಿವಸೇನಾಗೆ ಹೊಸ ಹೆಸರು ನಿಗದಿ ಪಡಿಸಿದ ಚುನಾವಣಾ ಆಯೋಗ

ಮಹಾರಾಷ್ಟ್ರದ ಜನತೆ ಈಗಲೂ ಬಾಳಾಸಾಹೇಬ್‌ ಠಾಕ್ರೆ ಅವರ ನೈಜ ಶಿವಸೇನೆಯಾಗಿರುವ ನಮ್ಮೊಂದಿಗೆ ಇದ್ದಾರೆ. ಉದ್ಧವ್‌ ಠಾಕ್ರೆ ಅವರ ಜನಪರ ಆಡಳಿತವನ್ನು ರಾಜ್ಯದ ಜನತೆ ಕಣ್ಣಾರೆ ಕಂಡಿದ್ದಾರೆ. ಹೀಗಾಗಿ ಜನರ ಬೆಂಬಲ ತಮಗಿದೆ ಎಂಬ ಭ್ರಮೆಯಲ್ಲಿರುವ ಶಿಂಧೆ ಬಣದ ಶಿವಸೇನೆ ನಾಯಕರು, ಈ ಕೂಡಲೇ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಆದಿತ್ಯ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದರು.

ಮುಂಬೈನಲ್ಲಿ ನಡೆದ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯ ಠಾಕ್ರೆ, ತಮ್ಮ ತಂದೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಇತರ ಶಿವಸೇನಾ ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಿ ಮತದಾರರನ್ನು ಎದುರಿಸುವಂತೆ ಸವಾಲೆಸೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ