ವಿಶ್ವದ ಅತಿ ದೊಡ್ಡ ಮೃಗಾಲಯ ಸ್ಥಾಪನೆಗೆ ಕೇಂದ್ರ ಸರಕಾರದ ಲೈಸೆನ್ಸ್ ಪಡೆದ ರಿಲಯನ್ಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 7:07 PM

ಗುಜರಾತ್​ನ ಜಾಮ್​ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯವನ್ನು ನಿರ್ಮಿಸಲು ರಿಲಯನ್ಸ್ ಇಂಡಸ್ಟ್ರಿ ಕೆಂದ್ರ ಸರಕಾರದಿಂದ ಪರವಾನಿಗೆಯನ್ನು ಮಡೆದಿದೆ. ಇನ್ನು 2 ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವುದಾಗಿ ರಿಲಯನ್ಸ್​ ತಿಳಿಸಿದೆ

ವಿಶ್ವದ ಅತಿ ದೊಡ್ಡ ಮೃಗಾಲಯ ಸ್ಥಾಪನೆಗೆ ಕೇಂದ್ರ ಸರಕಾರದ ಲೈಸೆನ್ಸ್ ಪಡೆದ ರಿಲಯನ್ಸ್
ಸಾಂದರ್ಭಿಕ ಚಿತ್ರ
Follow us on

ಗಾಂಧಿನಗರ: ವಿಶ್ವದ ಅತಿದೊಡ್ಡ ಮೃಗಾಲಯವನ್ನು ನಿರ್ಮಿಸಲು ಗುಜರಾತ್​ನ ಜಾಮ್​ನಗರದಲ್ಲಿ ಕೇಂದ್ರ ಸರಕಾರದಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾನಿಗೆ ಪಡೆದಿದೆ. ಇನ್ನು 2 ವರ್ಷಗಳಲ್ಲಿ ಮೃಗಾಲಯ ಸಿದ್ಧವಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ ಎಂದು ರಿಲಯನ್ಸ್ ಅಧಿಕಾರಿ ಹೇಳಿದ್ದಾರೆ.

ಮೃಗಾಲಯದ ಸಂಪೂರ್ಣ ಜವಾಬ್ದಾರಿಯನ್ನು ರಿಲಯನ್ಸ್ ಇಂಡಸ್ಟ್ರಿ ವಹಿಸಿಕೊಂಡಿದೆ. ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆ ಕಿಂಚಿತ್ತು ವಿಳಂಬವಾಗಿದೆ. ಇನ್ನು 2 ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದು ಕಾರ್ಪೋರೇಟ್ ವ್ಯವಹಾರ ನಿರ್ದೇಶಕ ಮತ್ತು ರಾಜ್ಯಸಭಾ ಸಂಸದ ಪರಿಮಲ್ ನಥ್ವಾನಿ ಹೇಳಿದ್ದಾರೆ.

ಶುಕ್ರವಾರ ಅಸೋಚಾಮ್ ಫೌಂಡೇಷನ್ ಸಪ್ತಾಹದ ವರ್ಚುವಲ್ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಕೆ ದಾಸ್, ಜಾಮ್​​ನಗರದಲ್ಲಿ ವಿಶ್ವದ ಅತಿದೊಡ್ಡ ಮೃಗಾಲಯವು ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಜಾಮ್​ನಗರದ ಮೃಗಾಲಯವನ್ನು 250 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಇದು ವಿಶ್ವದ ಅತಿ ದೊಡ್ಡ ಮೃಗಾಲಯ ಆಗಬೇಕಂತೇನಿಲ್ಲ. ವೈವಿಧ್ಯಮಯ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಇದು ಒಳಗೊಂಡಿರುತ್ತದೆ ಎಂದು ಹಿರಿಯ ಅಧಿಕಾರಿಗಳು ಮೃಗಾಲಯದ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?