ಕಾರವಾರ: ಭಾರತೀಯ ನೌಕಾದಳಕ್ಕೆ ಇಂದು ನೌಕಾ ದಿನದ ಸಂಭ್ರಮ. ಆದರೆ ಎಂಟು ದಿನಗಳ ಹಿಂದೆ ನಾಪತ್ತೆಯಾದ ಫೈಟರ್ ಜೆಟ್ನ ಪೈಲಟ್ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಭಾರತೀಯ ನೌಕಾದಳದ ಅಭಿಮಾನಿಗಳು ಪೈಲಟ್ರ ಪತ್ತೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಎಂಟು ದಿನ ಆದರೂ ಸುಳಿವಿಲ್ಲ..
ನವೆಂಬರ್ 26ರಂದು ಪತನಗೊಂಡ ಮಿಗ್-29 ಫೈಟರ್ ಜೆಟ್ನಿಂದ ಸಮುದ್ರಕ್ಕೆ ಜಿಗಿದಿದ್ದಾರೆ ಎಂದು ಹೇಳಲಾದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಯಾವುದೇ ಸುಳಿವು ದೊರಕಿಲ್ಲ. ಕಳೆದ ಮೇನಲ್ಲಿ ಮದುವೆಯಾಗಿದ್ದ ನಿಶಾಂತ್ ಸಿಂಗ್ರ ಕುರಿತು ನೌಕಾಪಡೆ ಸಮುದ್ರದ ಇಂಚಿಂಚಲ್ಲೂ ಶೋಧ ಮುಂದುವರೆಸಿದೆ.
ಮಿಗ್-29 ಪತನಗೊಂಡ ತಕ್ಷಣ ಜೆಟ್ನಲ್ಲಿದ್ದ ಇಬ್ಬರು ಪೈಲಟ್ಗಳೂ ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ ಓರ್ವ ಪೈಲಟ್ ಮಾತ್ರ ನೌಕಾಪಡೆಗೆ ಸಿಕ್ಕಿದ್ದು, ನಿಶಾಂತ್ರ ಯಾವುದೇ ಸುಳಿವು ಲಭಿಸಿಲ್ಲ. ನಿಶಾಂತ್ ಸಿಂಗ್ ಫೈಟರ್ ಜೆಟ್ನಿಂದ ಹೊರಬರುವುದನ್ನು ನೋಡಿರುವುದಾಗಿ ನೌಕಾಪಡೆ ರಕ್ಷಿಸಿರುವ ಇನ್ನೋರ್ವ ಪೈಲಟ್ ಹೇಳಿದ್ದಾರೆ. ರಷ್ಯಾ ನಿರ್ಮಿತ 45 ಬಲಶಾಲಿ ಜೆಟ್ಗಳ ಹನ್ಸಾ ನೌಕಾಪಡೆಗೆ ತೆರಳಿದ್ದ ಮಿಗ್-29ನ ಅವಶೇಷಗಳು ಪತನಗೊಂಡ 50 ಕಿಮೀ ದೂರದಲ್ಲಿ ಪತ್ತೆಯಾಗಿದ್ದವು.
Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು
ನಿಶಾಂತ್ ಮದುವೆಯ ರಜೆ ಅರ್ಜಿ ಹಂಚಿಕೊಂಡ ಅಭಿಮಾನಿಗಳು..
ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಮದುವೆ ಮೇ ತಿಂಗಳಲ್ಲಿ ನಿಗದಿಯಾಗಿತ್ತು. ತಮ್ಮ ಮೇಲಧಿಕಾರಿಗೆ ಮದುವೆಗೆ ರಜೆ ಕೋರಿ ಬರೆದ ರಜಾ ಅರ್ಜಿ ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಅವರು ಮರಳಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
Pray for safe return of missing pilot?
— Kaku (@Kaku57977250) November 30, 2020
Published On - 1:33 pm, Fri, 4 December 20