ಮಹಾರಾಷ್ಟ್ರದ ಕನ್ನಡ ಮಕ್ಕಳಿಗೆ ಕನ್ನಡದಲ್ಲಿ ಕಲಿಸಿದ ಶಿಕ್ಷಕ: ರಂಜಿತ್​ಸಿಂಹ ಮಡಿಲಿಗೆ ಜಾಗತಿಕ ಪ್ರಶಸ್ತಿ

ಶಾಲೆಯ ಕನ್ನಡ ಭಾಷಾ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕವನ್ನು ಮರುವಿನ್ಯಾಸ ಮಾಡಿದ ಕೀರ್ತಿಗೆ ಪಾತ್ರರಾಗಿರುವ ದಿಸಾಳೆ ಈ ಪ್ರಶಸ್ತಿಗೆ ಭಾಜನರಾಗಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಮಹಾರಾಷ್ಟ್ರದ ಕನ್ನಡ ಮಕ್ಕಳಿಗೆ ಕನ್ನಡದಲ್ಲಿ ಕಲಿಸಿದ ಶಿಕ್ಷಕ: ರಂಜಿತ್​ಸಿಂಹ ಮಡಿಲಿಗೆ ಜಾಗತಿಕ ಪ್ರಶಸ್ತಿ
ರಂಜಿತ್​ಸಿಂಹ ದಿಸಾಳೆ
Follow us
TV9 Web
| Updated By: ganapathi bhat

Updated on:Apr 07, 2022 | 5:42 PM

ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್​ಸಿಂಹ ದಿಸಾಳೆ (32) ಅವರು ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಾಲೆಯ ಕನ್ನಡ ಭಾಷಾ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕವನ್ನು ಮರುವಿನ್ಯಾಸ ಮಾಡಿದ ಕೀರ್ತಿಗೆ ಪಾತ್ರರಾಗಿರುವ ದಿಸಾಳೆ ಈ ಪ್ರಶಸ್ತಿಗೆ ಭಾಜನರಾಗಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಲಂಡನ್ ಮೂಲದ ವರ್ಕಿ ಫೌಂಡೇಷನ್ ನೀಡುವ ಈ ಪ್ರಶಸ್ತಿಯು 10 ಲಕ್ಷ ಡಾಲರ್ (ಸುಮಾರು ₹ 7.37 ಕೋಟಿ) ನಗದು ಬಹುಮಾನವನ್ನು ಹೊಂದಿದೆ. ಲಂಡನ್​ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ನಿನ್ನೆ ವರ್ಚುಯಲ್ ಆಗಿ ಪ್ರಶಸ್ತಿ ಘೋಷಣೆಯಾಗಿದೆ.

ಪ್ರಶಸ್ತಿ ಮೊತ್ತವನ್ನು ಹಂಚಿಕೊಳ್ಳುವ ನಿರ್ಧಾರ ಪ್ರಶಸ್ತಿಗಾಗಿ 140 ದೇಶಗಳ 12 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ, ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 10 ಅಭ್ಯರ್ಥಿಗಳಿಗೆ ಪ್ರಶಸ್ತಿ ಮೊತ್ತದ ಅರ್ಧ ಭಾಗವನ್ನು ಹಂಚುವುದಾಗಿ ದಿಸಾಳೆ ಹೇಳಿದ್ದಾರೆ. ಈ ಮೂಲಕ ದಿಸಾಳೆ, ಗ್ಲೋಬಲ್ ಟೀಚರ್ ಪ್ರಶಸ್ತಿಯ ನಗದನ್ನು ಇತರ ಅಭ್ಯರ್ಥಿಗಳೊಂದಿಗೂ ಹಂಚಿಕೊಂಡ ಮೊದಲಿಗರಾಗಿದ್ದಾರೆ.

ಗ್ಲೋಬಲ್ ಟೀಚರ್ ಪ್ರೈಜ್​ನ 10 ಮಂದಿ ಫೈನಲಿಸ್ಟ್​ಗಳು

ಮಕ್ಕಳಿಗಾಗಿ ಕನ್ನಡ ಕಲಿತರು ಸೊಲ್ಲಾಪುರ ಮಹಾರಾಷ್ಟ್ರ ಆಡಳಿತಕ್ಕೆ ಒಳಪಟ್ಟ ಕರ್ನಾಟಕದ ಗಡಿಭಾಗದ ಊರು. ಕರ್ನಾಟಕದ ಗಡಿಯಿಂದ ಆಚೆಗೆ ಸುಮಾರು 50ಕಿ.ಮೀ. ಅಂತರವಿರುವ ಪ್ರದೇಶ. ಅಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದು, ಕನ್ನಡ ಭಾಷೆ ಮಾತ್ರ ಬಲ್ಲವರಾಗಿದ್ದರು. ಅವರ ಪಠ್ಯವು ಮರಾಠಿ ಭಾಷೆಯಲ್ಲಿ ಇದ್ದ ಕಾರಣ, ಮಕ್ಕಳ ಕಲಿಕೆ ಸಾಧ್ಯವಾಗುತ್ತಿರಲಿಲ್ಲ.

ಈ ಸಮಸ್ಯೆ ಸರಿದೂಗಿಸುವ ಪಣತೊಟ್ಟ ದಿಸಾಳೆ ಮೊದಲು ತಾವು ಕನ್ನಡ ಕಲಿತರು. 1ರಿಂದ 4ನೇ ತರಗತಿಯ ಎಲ್ಲಾ ಪಠ್ಯ ಪುಸ್ತಕಗಳನ್ನು ಮರುವಿನ್ಯಾಸ ಮಾಡಿದರು. ಹಾಡುಗಳನ್ನು ಧ್ವನಿಮುದ್ರಿಸಿದರು. ಪಾಠದ ವೀಡಿಯೋ ಮಾಡಿದರು. ಅವುಗಳನ್ನೆಲ್ಲಾ ಕ್ಯೂಆರ್ ಕೋಡ್​ಗೆ ಅಳವಡಿಸಿದರು. ಪಾಠ, ಅಸೈನ್​ಮೆಂಟ್​ಗಳು ಕನ್ನಡದಲ್ಲೇ ಶುರುವಾದವು. ರಂಜಿತ್​ಸಿಂಹ ದಿಸಾಳೆ ಪ್ರಯತ್ನಕ್ಕೆ ಅದ್ಭುತ ಫಲ ಲಭಿಸಿತು. ಕಳೆದ ಸಲದ ವಾರ್ಷಿಕ ಪರೀಕ್ಷೆಗಳಲ್ಲಿ ಶಾಲೆಯ ಶೇ.85ರಷ್ಟು ವಿದ್ಯಾರ್ಥಿಗಳು ಎ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತಾಯಿತು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಊರಿನ ಹೆಣ್ಣು ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡು, ಶೇಕಡಾ ನೂರು ಹಾಜರಾತಿ ಪಡೆದುಕೊಂಡರು. ಈಗ ಗ್ರಾಮದಲ್ಲಿ ಬಾಲ್ಯ ವಿವಾಹ ನಿಂತಿದೆ. ಗ್ರಾಮದ ಯುವತಿಯೊಬ್ಬಳು ಪದವಿಯನ್ನೂ ಪಡೆದ ಸಾಧನೆ ಮಾಡಿದ್ದಾಳೆ. ಊರ ಜನರು ಶಿಕ್ಷಿತರಾಗುತ್ತಿರುವುದಕ್ಕೆ ಈ ಬೆಳವಣಿಗೆಗಳು ಚಿಹ್ನೆಯಾಗಿ ಕಂಡಿವೆ.

‘ರಂಜಿತ್​ಸಿಂಹ ದಿಸಾಳೆ ಈ ಗ್ರಾಮಕ್ಕೆ ಬರುವ ಮೊದಲು ಇಂಥಾ ಬೆಳವಣಿಗೆಗಳು ಆಗುತ್ತವೆ ಎಂದು ಊಹಿಸಲೂ ಅಸಾಧ್ಯವಾಗಿತ್ತು’ ಎಂದು ಗ್ಲೋಬಲ್ ಟೀಚರ್ ಪ್ರೈಜ್​ನ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

ದಿಸಾಳೆ ಮತ್ತು ಮನೆಯವರ ಸಂಭ್ರಮ

ಇಂತಹ ಸಾಧನೆಯ ಪಥದಲ್ಲಿರುವ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಲಭಿಸಿದೆ. ದಿಸಾಳೆ ಅವರಿಗೆ 2016ರಲ್ಲಿ ನಾವೀನ್ಯತೆ ಸಂಶೋಧಕ ಮತ್ತು 2018ರಲ್ಲಿ ರಾಷ್ಟ್ರೀಯ ನಾವೀನ್ಯತೆ ಸಂಶೋಧಕ ಪ್ರಶಸ್ತಿ ಸಿಕ್ಕಿದೆ. ಮೈಕ್ರೊಸಾಫ್ಟ್​ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯ ನಾಡೆಲ್ಲ ಪುಸ್ತಕ ‘ಹಿಟ್ ಪ್ರೆಶ್’ನಲ್ಲೂ ದಿಸಾಳೆ ಕೆಲಸದ ಬಗ್ಗೆ ಉಲ್ಲೇಖವಿದೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆ

Published On - 2:35 pm, Fri, 4 December 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್