ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕಾನ್ಪುರದಲ್ಲಿ ಬಂಧಿಸಲಾಗಿದೆ. ಆರೋಪಿಯು 112ಗೆ ಸಂದೇಶ ಕಳುಹಿಸುವ ಮೂಲಕ ಕೊಲೆ ಬೆದರಿಕೆ ಹಾಕಿದ್ದರು. ಬಳಿಕ ಲಕ್ನೋದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು, ಬಳಿಕ ಕಾನ್ಪುರದಲ್ಲಿ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ತನ್ನ ಪ್ರೇಯಸಿಯನ್ನು ಮದುವೆಯಾಗಲು ಬಯಸಿದ್ದ, ಪ್ರೇಯಸಿ ತಂದೆ ಜೈಲಿಗೆ ಹೋದರೆ ತಮ್ಮ ಮದುವೆ ಸುಗಮವಾಗುತ್ತದೆ ಎಂದು ಪ್ರೇಯಸಿಯ ತಂದೆಯ ಫೋನ್ ಕದ್ದು ಅದರಿಂದ ಸಂದೇಶ ಕಳುಹಿಸಿದ್ದ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಮತ್ತಷ್ಟು ಓದಿ: ಬಿಜೆಪಿ ಕೇಂದ್ರ ನಾಯಕರ ಪ್ರಚಾರದ ಭರಾಟೆ: ಇಂದು ರಾಜ್ಯಕ್ಕೆ ಯೋಗಿ, ರಾಜನಾಥ್ ಸಿಂಗ್, ನಿರ್ಮಲಾ ಭೇಟಿ
ಬಾಬುಪುರದ ನಿವಾಸಿ ಅಮೀನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 10 ದಿನಗಳ ಹಿಂದೆ ತನ್ನ ಫೋನ್ ಕಳ್ಳತನವಾಗಿದೆ ಎಂದು ಫೋನ್ ಮಾಲೀಕರು ತಿಳಿಸಿದ್ದರು. ಹುಡುಗಿಯ ತಂದೆಗೆ ಇವರಿಬ್ಬರ ಪ್ರೀತಿ ಇಷ್ಟವಿರಲಿಲ್ಲ. ಅದಕ್ಕಾಗಿ ಕೋಪಗೊಂಡ ಯುವಕ ಪ್ರೇಯಸಿ ತಮದೆಯನ್ನು ಜೈಲಿಗಟ್ಟಲು ತಯಾರಿ ನಡೆಸಿದ್ದ.
ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506 ಮತ್ತು 507 ಮತ್ತು ಐಟಿ ಕಾಯ್ದೆ 66 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ರೀತಿ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ, ಯೋಗಿ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹಲವು ಬಾರಿ ಬೆದರಿಕೆ ಎದುರಿಸಿದ್ದಾರೆ.
ವಾರದ ಹಿಂದೆಯೂ ಫೇಸ್ ಬುಕ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಪೋಸ್ಟ್‌ನಲ್ಲಿ ಸಿಎಂ ಯೋಗಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಲಾಗಿತ್ತು, ನಂತರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ