AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕೇಂದ್ರ ನಾಯಕರ ಪ್ರಚಾರದ ಭರಾಟೆ: ಇಂದು ರಾಜ್ಯಕ್ಕೆ ಯೋಗಿ, ರಾಜನಾಥ್​​​ ಸಿಂಗ್​​, ನಿರ್ಮಲಾ ಭೇಟಿ

ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ವಿವಿಧ ರಾಜ್ಯಗಳ ಸಿಎಂ, ಡಿಸಿಎಂ ಮತ್ತು ಕೇಂದ್ರ ಸಚಿವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಅಭ್ಯರ್ಥಿಗಳ ಮತಯಾಚನೆ ಮಾಡಲಿದ್ದಾರೆ.

ಬಿಜೆಪಿ ಕೇಂದ್ರ ನಾಯಕರ ಪ್ರಚಾರದ ಭರಾಟೆ: ಇಂದು ರಾಜ್ಯಕ್ಕೆ ಯೋಗಿ, ರಾಜನಾಥ್​​​ ಸಿಂಗ್​​, ನಿರ್ಮಲಾ ಭೇಟಿ
ಬಿಜೆಪಿ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 26, 2023 | 8:37 AM

Share

ಮುಖ್ಯಾಂಶಗಳು

  • ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಮುಖ ಮೂರು ಪ್ರಕ್ಷಗಳಿಂದ ಪ್ರಚಾರ ಜೋರಾಗಿಯೇ ನಡೆದಿದೆ.
  • ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯ ಆಗಮಿಸುತ್ತಿದ್ದಾರೆ.
  • ಇಲ್ಲಿಯವರೆಗೆ ಬಿಜೆಪಿಯ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್​ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸುತ್ತಿದ್ದರು. ಆದರೆ ಈಗ ಇವರೊಡನೆ ವಿವಿಧ ರಾಜ್ಯದ ಸಿಎಂ, ಡಿಸಿಎಂ ಮತ್ತು ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆ ಪ್ರಮುಖ ಮೂರು ಪ್ರಕ್ಷಗಳಿಂದ ಪ್ರಚಾರ ಜೋರಾಗಿಯೇ ನಡೆದಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್​ (Congress) ಹೈಕಮಾಂಡ್​ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿಜೆಪಿಯ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್​ ಶಾ (Amith Shah), ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಆಗಮಿಸುತ್ತಿದ್ದರು. ಆದರೆ ಈಗ ಇವರೊಡನೆ ವಿವಿಧ ರಾಜ್ಯದ ಸಿಎಂ, ಡಿಸಿಎಂ ಮತ್ತು ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ. ಹೌದು ಇಂದು (ಏ.25) ಮಂಡ್ಯ (Mandya) ಮತ್ತು ವಿಜಯಪುರ (Vijayapura) ಜಿಲ್ಲೆಗೆ ಹಿಂದೂ ಫೈಯರ್​ ಬ್ರ್ಯಾಂಡ್​, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (Yogi Adithynatrh) ಅವರು ಆಗಮಿಸಲಿದ್ದಾರೆ.

ಬೆಳಗ್ಗೆ ಲಖನೌನಿಂದ ಮೈಸೂರಿಗೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್​​ ಅವರು, 11 ಗಂಟೆಗೆ ಮಂಡ್ಯದಲ್ಲಿ ನಡೆಯುವ ರೋಡ್​​ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ 2.40ಕ್ಕೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರರ ದರ್ಶನ ಪಡೆದು ಮಧ್ಯಾಹ್ನ 3.05ಕ್ಕೆ ಬಸವನಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್​​.ಕೆ.ಬೆಳ್ಳುಬ್ಬಿ ಪರ ಪ್ರಚಾರ ಮಾಡಲಿದ್ದಾರೆ.

ಇದಾದ ನಂತರ ಸಂಜೆ 4.50ಕ್ಕೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡು ಇಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಪರ ಮತಯಾಚಿಸಲಿದ್ದಾರೆ. ಸಮಾವೇಶ ಮುಗಿದ ಬಳಿಕ ಉತ್ತರ ಪ್ರದೇಶದ ಲಖನೌಗೆ ನಿರ್ಗಮಿಸುತ್ತಾರೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್ ರಾಜ್ಯ ಪ್ರವಾಸ

ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಇಂದು ಬೆಳಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಬೆಳಗಾವಿ ಜಿಲ್ಲೆಯ ಕಾಗವಾಡದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ, ನಮತರ ಮಧ್ಯಾಹ್ನ 1.15ಕ್ಕೆ ಬೈಲಹೊಂಗಲದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಸಂಜೆ 4 ಗಂಟೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆಯುವ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ: TV9 Kannada CVoter survey: ಅತಂತ್ರ ವಿಧಾನಸಭೆಯತ್ತ ರಾಜ್ಯ; ಟಿವಿ9, ಸಿವೋಟರ್ ಸಮೀಕ್ಷೆ

ಕಲಬುರಗಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಇಂದು ಕಲಬುರಗಿ ಜಿಲ್ಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ 11 ಗಂಟೆಗೆ ಕಲಬುರಗಿಯಲ್ಲಿ ಪ್ರಬುದ್ಧರ ಜೊತೆ ಸಂವಾದ ನಡೆಸಲಿದ್ದಾರೆ.

ಬಳಿಕ 3 ಗಂಟೆಗೆ ಅಳಂದದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಆ ಬಳಿಕ ಸಂಜೆ 4 ಗಂಟೆಗೆ ಕಲಬುರಗಿ ನಗರದಲ್ಲಿ ಮನೆ ಮನೆ ಸಂಪರ್ಕ ಮಾಡಲಿದ್ದಾರೆ.

ರಾಜ್ಯದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಚುನಾವಣಾ ಪ್ರಚಾರ

ರಾಜ್ಯದಲ್ಲಿ ಇಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದುಮುಖಲಿಸರುವ ಇವರು, ಬೆಳಗ್ಗೆ 11.30ಕ್ಕೆ ಹುಕ್ಕೇರಿಯಲ್ಲಿನ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 2.30ಕ್ಕೆ ಗೋಕಾಕ್​ನಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ, ಸಂಜೆ 4 ಗಂಟೆಗೆ ರಾಮದುರ್ಗದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗುತ್ತಾರೆ.

ವಿಜಯಪುರದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಸಂಚಾರ

ಇಂದು ವಿಜಯಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಪ್ರಚಾರ ನಡೆಸಲಿದ್ದಾರೆ. ಸಿದ್ದೇಶ್ವರ ಆಶ್ರಮಕ್ಕೆ ಭೇಟಿ ನೀಡಿ, ನಂತರ ಬೆಳಗ್ಗೆ 11 ಗಂಟೆಗೆ ವಿಜಯಪುರ ಬಿಜೆಪಿ ಕಚೇರಿಯಲ್ಲಿ ದೇವೇಂದ್ರ ಫಡ್ನವಿಸ್​ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕನಮಡಿ ಧರಿದೇವರ ದೇವಸ್ಥಾನಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಬಬಲೇಶ್ವರದಲ್ಲಿ ದೇವೇಂದ್ರ ಫಡ್ನವಿಸ್ ಪ್ರಚಾರ ಸಭೆ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 am, Wed, 26 April 23

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?