ವಿಜಯಪುರದಲ್ಲಿ ಯತ್ನಾಳ್ ಪರ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಚಾಯ್ ಪೇ ಚರ್ಚಾ

ಮಹಾರಾಷ್ಟ್ರ ಡಿಸಿಎಂ ದೇವಿಂದ್ರ ಫಡ್ನವೀಸ್ ನೇತೃತ್ವದಲ್ಲಿ ವಿಜಯಪುರ ‌ನಗರದಲ್ಲಿ ಚಹಾ‌ಪೇ ಚರ್ಚಾ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ವಿಜಯಪುರದಲ್ಲಿ ಯತ್ನಾಳ್ ಪರ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಚಾಯ್ ಪೇ ಚರ್ಚಾ
ದೇವೇಂದ್ರ ಫಡ್ನವಿಸ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್
Follow us
Rakesh Nayak Manchi
|

Updated on:Apr 25, 2023 | 11:07 PM

ವಿಜಯಪುರ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವಿಂದ್ರ ಫಡ್ನವೀಸ್ (Devendra Fadnavis) ನೇತೃತ್ವದಲ್ಲಿ ವಿಜಯಪುರ ‌ನಗರದಲ್ಲಿ ಚಹಾ‌ಪೇ ಚರ್ಚಾ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಭಾಷಣ ಆರಂಭಿಸಿದ ಪಡ್ನವೀಸ್, ಎಲ್ಲ ಒಳ್ಳೆಯ ಕಾರ್ಯಕ್ರಮಗಳು ಚಾಯ್ ಪೇ ಚರ್ಚಾ ಆಗುತ್ತವೆ. ಸಮಯ ಆಗಿದೆ, ಚಾಯ್ ಪೇ ಚರ್ಚಾ ಹೋಗಿ ಭೋಜನ್ ಪೇ ಚರ್ಚಾ ಆಗಿದೆ ಎಂದು ನಗೆ ಚಟಾಕಿ ಹಾರಿಸಿದರು. ಅಲ್ಲದೆ, ಕರ್ನಾಟಕದ ವಿಧಾನಸಭೆ ಎಲೆಕ್ಷನ್ ಬಂದಿದೆ. ಛತ್ರಪತಿ ಶಿವಾಜಿ ಇತಿಹಾಸದಲ್ಲಿ ವಿಜಯಪುರ ಅತ್ಯಂತ ಮಹತ್ವ ವಹಿಸುತ್ತದೆ. ನಿಮ್ಮ ಆಶೀರ್ವಾದ ಬಸನಗೌಡ ಪಾಟೀಲ್ ಯತ್ನಾಳ್​ ಅವರಿಗೆ ಕೊಡಬೇಕು ಎಂದು ಮನವಿ ಮಾಡಿದರು.

ಯತ್ನಾಳ್ ಮಂತ್ರಿಯಾಗಿ, ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಛತ್ರಪತಿ ಶಿವಾಜಿಯಂತೆ ಧರ್ಮ, ದಾನ, ಸಹಾಯಕ್ಕೆ ಯತ್ನಾಳ್ ಹೆಸರುವಾಸಿಯಾಗಿದ್ದಾರೆ. ಈ‌ ಬಾರಿ ಬಸನಗೌಡ ಅವರಿಗೆ ವೋಟ್ ಹಾಕಿ ರೆಕಾರ್ಡ್ ಬ್ರೇಕ್ ಮಾಡಬೇಕು ಎಂದು ಹೇಳಿದ ಫಡ್ನವಿಸ್, ನರೇಂದ್ರ ಮೋದಿ ನೇತ್ರತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ ಅಂತ ಬಂದ ದಿನವೇ ಮೋದಿ ಹೇಳಿದ್ದಾರೆ. ಕೋಟಿ ಕೋಟಿ ಜನರ ಮನೆಗೆ ಗ್ಯಾಸ್, ನೀರು, ಶೌಚಾಲಯ ಕೊಟ್ಟಿದ್ದಾರೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 10 ಸಾವಿರ ಕೊಡಲಾಗುತ್ತಿದೆ. 15 ಲಕ್ಷ ಕೋಟಿ ಇದ್ದ ಬಜೆಟ್ ಇದೀಗ 45 ಲಕ್ಷ ಕೋಟಿಗೆ ಬಂದಿದೆ. ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಯುವಕರು, ಯುವತಿಯರು, ರೈತರು ಸೇರಿದಂತೆ ಎಲ್ಲರ ಬದುಕನ್ನು ವಿಕಾಸಗೊಳಿಸುತ್ತಿದ್ದಾರೆ. ಬಡತನವನ್ನು ಹೋಗಲಾಡಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: Karnataka Assembly Polls; ಜಗದೀಶ್ ಶೆಟ್ಟರ್ ನಿರ್ಗಮನ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು: ಬಸನಗೌಡ ಪಾಟೀಲ್ ಯತ್ನಾಳ್

ಕೊರೋನಾ ಸಮಯದಲ್ಲಿ 80 ಕೋಟಿ ಜನರಿಗೆ ಅನ್ನಧಾನ್ಯ ಕೊಟ್ಟಿದ್ದಾರೆ. ಒಂದೂವರೆ ವರ್ಷ ಕೋವಿಡ್ ಸಮಯದಲ್ಲಿ ಭಾರತದ ಸಮಸ್ತ ಜನತೆಗೆ ವ್ಯಾಕ್ಷಿನ್ ಕೊಟ್ಟಿದ್ದಾರೆ. ಕೇವಲ ಐದು ದೇಶಗಳು ಕೋವಿಡ್ ಔಷಧಿ ತಯಾರು ಮಾಡುತ್ತಿದ್ದವು, ಅದರಲ್ಲಿ ಭಾರತವೂ ಇದೆ. 20 ಲಕ್ಷ ಕೋಟಿ ಕೋವಿಡ್​ಗಾಗಿ ಮೋದಿ ಖರ್ಚು ಮಾಡಿ ಜನತೆಯನ್ನು ಸುರಕ್ಷತೆಯಾಗಿ ಇಟ್ಟಿದ್ದಾರೆ ಎಂದರು.

ಆಗಿನ ಪ್ರಧಾನಿ ಮನಮೋಹನಸಿಂಗ್ ಸರಳ ಸಜ್ಜನಿಕೆ ವ್ಯಕ್ತಿ ಇದ್ದರು. ಆದರೆ ಸೋನಿಯಾಗಾಂಧಿ ಹೇಳಿದಂತೆ ಕೇಳುತ್ತಿದ್ದರು ಎಂದು ವ್ಯಂಗ್ಯವಾಡಿದ ಪಡ್ನವೀಸ್, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರರು ಮುಖ್ಯಮಂತ್ರಿಯಾಗಲು ಪರದಾಡುತ್ತಿದ್ದಾರೆ. ಭಾರತ ಎಲ್ಲಿ ತುಂಡಾಗಿದೆ ಎಂಬುದು ಗೊತ್ತಿಲ್ಲ. ಆದೆರೆ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದರು. ಆದರೆ ಈ ಯಾತ್ರೆಯು ಕಾಂಗ್ರೆಸ್ ಜೋಡೊ ಯಾತ್ರೆ ಆಗಿದೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಮಾನ, ಮರ್ಯಾದೆ ಇಲ್ಲ: ಫಡ್ನವಿಸ್

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಮಾನ, ಮರ್ಯಾದೆ ಇಲ್ಲ ಎಂದು ಹೇಳಿದ ಫಡ್ನವಿಸ್, ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತ ಸರ್ಕಾರ ಕೊಡುತ್ತೇವೆ ಎಂದು ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ನೀವು ಬಿಜೆಪಿಗೆ ಸಪೋರ್ಟ್ ಕೊಡುತ್ತೀರಿ ಎಂಬ ನಂಬಿಕೆ ಇದೆ. ಮೇ 10 ರಂದು ಬಿಜೆಪಿಗೆ ವೋಟ್ ಹಾಕುವ ಮೂಲಕ ಐದು ವರ್ಷ ನಿಶ್ಚಿಂತೆಯಿಂದ ಇರಬೇಕು ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:07 pm, Tue, 25 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್