Livestream: ಮೊಟ್ಟ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರ
ಸುಪ್ರೀಂ ಕೋರ್ಟ್ ಮೊಟ್ಟ ಮೊದಲ ಬಾರಿಗೆ ಇಂದು ಕೋರ್ಟ್ನಲ್ಲಿ ನಡೆಯುವ ವಿಚಾರಣೆಗಳನ್ನು ಲೈವ್‌ಸ್ಟ್ರೀಮ್ ನೇರಪ್ರಸಾರ ಮಾಡಲಾಯಿತು. ಸುಪ್ರೀಂನಲ್ಲಿ ಹಗಲಿನಲ್ಲಿ ಲೈವ್‌ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಇದನ್ನು ಆನ್‌ಲೈನ್‌ನಲ್ಲಿ ನೋಡಬಹುದು.
ಮೊಟ್ಟ ಮೊದಲ ಬಾರಿಗೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯುವ ವಿಚಾರಣೆಗಳನ್ನು ಲೈವ್‌ಸ್ಟ್ರೀಮ್ ನೇರಪ್ರಸಾರ ಮಾಡಲಾಯಿತು. ಸುಪ್ರೀಂನಲ್ಲಿ ಹಗಲಿನಲ್ಲಿ ಲೈವ್‌ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಇದನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಲೈವ್‌ಸ್ಟ್ರೀಮ್ ಮಾಡಲು ನಿರ್ಧರಿಸಲಾದ ಮೂರು ಪ್ರಕರಣಗಳಲ್ಲಿ, ಒಂದು ಪ್ರಕರಣವು ಮಹಾರಾಷ್ಟ್ರ ಟೀಮ್ ಉದ್ಧವ್ ಠಾಕ್ರೆ ಟೀಮ್ ಏಕನಾಥ್ ಶಿಂಧೆ ವಿರುದ್ಧ – ಶಿವಸೇನೆ ಹೆಸರಿನ ಬಗ್ಗೆ ಈಗಾಗಲೇ ಚುನಾವಣಾ ಆಯೋಗವು ಈ ವಿಷಯದಲ್ಲಿ ಪ್ರಸ್ತಾವನೆಯನ್ನು ಮಾಡಲಾಗಿದ್ದು. ಈ ಪ್ರಕರಣದ ಬಗ್ಗೆ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸುವುದನ್ನು ಕಾಣಬಹುದು – ಇದು ನೇರ ಪ್ರಸಾರವಾದ ಎರಡನೇ ವಿಚಾರಣೆಯಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಲೈವ್ ಸ್ಟ್ರೀಮಿಂಗ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಲೈವ್ ವಾದಗಳನ್ನು ನೋಡಲು ಒಬ್ಬರು ಈ URL ಅನ್ನು ಬಳಸಬಹುದು webcast.gov.in/scindia/. 2018 ರಲ್ಲಿ ಆ ಸಮಯದಲ್ಲಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೇರ ಪ್ರಸಾರ ಮಾಡುವಂತೆ ಸೆಪ್ಟೆಂಬರ್ 27 ರಂದು ಮಹತ್ವದ ತೀರ್ಪು ನೀಡಿದ್ದರು. ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರನ್ನು ಒಳಗೊಂಡ ಪೂರ್ಣ ನ್ಯಾಯಾಲಯವು ಸೆಪ್ಟೆಂಬರ್ 20ರಂದು ಈ ವಿಷಯವನ್ನು ಚರ್ಚಿಸಿತು ಮತ್ತು ಈ ವಾರದಿಂದ ಸಾಂವಿಧಾನಿಕ ಪೀಠದ ವಿಚಾರಣೆಯನ್ನು ಲೈವ್-ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಂಡಿತು. ಫುಲ್ ಕೋರ್ಟ್ ಸಭೆಯ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ವಹಿಸಿದ್ದರು, ಇದರಲ್ಲಿ ಎಲ್ಲಾ ನ್ಯಾಯಾಧೀಶರು ಸಾಂವಿಧಾನಿಕ ಪ್ರಕರಣಗಳನ್ನು ಪ್ರಸಾರ ಮಾಡುವ ಮೂಲಕ ನಿಯಮಿತವಾಗಿ ಲೈವ್-ಸ್ಟ್ರೀಮಿಂಗ್ ಪ್ರಾರಂಭಿಸಬೇಕು ಎಂದು ಸರ್ವಾನುಮತ ವ್ಯಕ್ತಪಡಿಸಿದರು.
ಭಾರತದ ನ್ಯಾಯಾಂಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯನ್ನು ಕಾರ್ಯಗತಗೊಳಿಸುವ ಮಹತ್ವಾಕಾಂಕ್ಷೆಯ ಕ್ರಮವಾಗಿದೆ ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತದ ಭಾಗವಾಗಿ ಸುಪ್ರೀಂ ಕೋರ್ಟ್‌ನ ವಿಚಾರಣೆಗಳನ್ನು ಲೈವ್-ಸ್ಟ್ರೀಮ್ ಮಾಡಲು ವಿಶೇಷ ವೇದಿಕೆಯನ್ನು ಕಲ್ಪಿಸಿದೆ. ಗುಜರಾತ್, ಒರಿಸ್ಸಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶದ ಕೆಲವು ಹೈಕೋರ್ಟ್‌ಗಳು ಲೈವ್‌ಸ್ಟ್ರೀಮ್ ವಿಚಾರಣೆಗಳನ್ನು ಮಾಡುತ್ತಿದೆ.
Published On - 2:45 pm, Tue, 27 September 22