Livestream: ಮೊಟ್ಟ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2022 | 2:47 PM

ಸುಪ್ರೀಂ ಕೋರ್ಟ್ ಮೊಟ್ಟ ಮೊದಲ ಬಾರಿಗೆ ಇಂದು ಕೋರ್ಟ್​ನಲ್ಲಿ ನಡೆಯುವ ವಿಚಾರಣೆಗಳನ್ನು ಲೈವ್‌ಸ್ಟ್ರೀಮ್ ನೇರಪ್ರಸಾರ ಮಾಡಲಾಯಿತು. ಸುಪ್ರೀಂನಲ್ಲಿ ಹಗಲಿನಲ್ಲಿ ಲೈವ್‌ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಇದನ್ನು ಆನ್‌ಲೈನ್‌ನಲ್ಲಿ ನೋಡಬಹುದು.

Livestream: ಮೊಟ್ಟ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರ
Supreme Court
Follow us on

ಮೊಟ್ಟ ಮೊದಲ ಬಾರಿಗೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆಯುವ ವಿಚಾರಣೆಗಳನ್ನು ಲೈವ್‌ಸ್ಟ್ರೀಮ್ ನೇರಪ್ರಸಾರ ಮಾಡಲಾಯಿತು. ಸುಪ್ರೀಂನಲ್ಲಿ ಹಗಲಿನಲ್ಲಿ ಲೈವ್‌ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಇದನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಲೈವ್‌ಸ್ಟ್ರೀಮ್ ಮಾಡಲು ನಿರ್ಧರಿಸಲಾದ ಮೂರು ಪ್ರಕರಣಗಳಲ್ಲಿ, ಒಂದು ಪ್ರಕರಣವು ಮಹಾರಾಷ್ಟ್ರ ಟೀಮ್ ಉದ್ಧವ್ ಠಾಕ್ರೆ ಟೀಮ್ ಏಕನಾಥ್ ಶಿಂಧೆ ವಿರುದ್ಧ – ಶಿವಸೇನೆ ಹೆಸರಿನ ಬಗ್ಗೆ ಈಗಾಗಲೇ ಚುನಾವಣಾ ಆಯೋಗವು ಈ ವಿಷಯದಲ್ಲಿ ಪ್ರಸ್ತಾವನೆಯನ್ನು ಮಾಡಲಾಗಿದ್ದು. ಈ ಪ್ರಕರಣದ ಬಗ್ಗೆ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸುವುದನ್ನು ಕಾಣಬಹುದು – ಇದು ನೇರ ಪ್ರಸಾರವಾದ ಎರಡನೇ ವಿಚಾರಣೆಯಾಗಿದೆ.

ನಾಲ್ಕು ವರ್ಷಗಳ ಹಿಂದೆಯೇ ಲೈವ್ ಸ್ಟ್ರೀಮಿಂಗ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಲೈವ್ ವಾದಗಳನ್ನು ನೋಡಲು ಒಬ್ಬರು ಈ URL ಅನ್ನು ಬಳಸಬಹುದು webcast.gov.in/scindia/. 2018 ರಲ್ಲಿ ಆ ಸಮಯದಲ್ಲಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೇರ ಪ್ರಸಾರ ಮಾಡುವಂತೆ ಸೆಪ್ಟೆಂಬರ್ 27 ರಂದು ಮಹತ್ವದ ತೀರ್ಪು ನೀಡಿದ್ದರು. ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರನ್ನು ಒಳಗೊಂಡ ಪೂರ್ಣ ನ್ಯಾಯಾಲಯವು ಸೆಪ್ಟೆಂಬರ್ 20ರಂದು ಈ ವಿಷಯವನ್ನು ಚರ್ಚಿಸಿತು ಮತ್ತು ಈ ವಾರದಿಂದ ಸಾಂವಿಧಾನಿಕ ಪೀಠದ ವಿಚಾರಣೆಯನ್ನು ಲೈವ್-ಸ್ಟ್ರೀಮ್ ಮಾಡಲು ನಿರ್ಧಾರವನ್ನು ತೆಗೆದುಕೊಂಡಿತು. ಫುಲ್ ಕೋರ್ಟ್ ಸಭೆಯ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ವಹಿಸಿದ್ದರು, ಇದರಲ್ಲಿ ಎಲ್ಲಾ ನ್ಯಾಯಾಧೀಶರು ಸಾಂವಿಧಾನಿಕ ಪ್ರಕರಣಗಳನ್ನು ಪ್ರಸಾರ ಮಾಡುವ ಮೂಲಕ ನಿಯಮಿತವಾಗಿ ಲೈವ್-ಸ್ಟ್ರೀಮಿಂಗ್ ಪ್ರಾರಂಭಿಸಬೇಕು ಎಂದು ಸರ್ವಾನುಮತ ವ್ಯಕ್ತಪಡಿಸಿದರು.

ಭಾರತದ ನ್ಯಾಯಾಂಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯನ್ನು ಕಾರ್ಯಗತಗೊಳಿಸುವ ಮಹತ್ವಾಕಾಂಕ್ಷೆಯ ಕ್ರಮವಾಗಿದೆ ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತದ ಭಾಗವಾಗಿ ಸುಪ್ರೀಂ ಕೋರ್ಟ್‌ನ ವಿಚಾರಣೆಗಳನ್ನು ಲೈವ್-ಸ್ಟ್ರೀಮ್ ಮಾಡಲು ವಿಶೇಷ ವೇದಿಕೆಯನ್ನು ಕಲ್ಪಿಸಿದೆ. ಗುಜರಾತ್, ಒರಿಸ್ಸಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶದ ಕೆಲವು ಹೈಕೋರ್ಟ್‌ಗಳು ಲೈವ್‌ಸ್ಟ್ರೀಮ್ ವಿಚಾರಣೆಗಳನ್ನು ಮಾಡುತ್ತಿದೆ.

Published On - 2:45 pm, Tue, 27 September 22