ತಮಿಳುನಾಡು: ರಾವತ್ ಮತ್ತು ಇತರರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಮೇಲೆ  ಹೂದಳ ಸುರಿದು ಕಣ್ಣೀರಿಟ್ಟ  ಸ್ಥಳೀಯರು

| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2021 | 5:23 PM

ನೀಲಗಿರಿ ಜಿಲ್ಲೆಯ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನಿಂದ (Madras Regimental Centre) ಸೂಲೂರು ವಾಯುನೆಲೆಗೆ ತೆರಳುತ್ತಿದ್ದಾಗ ಮೃತರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್‌ಗಳ ಮೇಲೆ ಸ್ಥಳೀಯರು ಘೋಷಣೆಗಳನ್ನು ಕೂಗುತ್ತಾ ಹೂವಿನ ದಳಗಳನ್ನು ಸುರಿದಿದ್ದಾರೆ .

ತಮಿಳುನಾಡು: ರಾವತ್ ಮತ್ತು ಇತರರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಮೇಲೆ  ಹೂದಳ ಸುರಿದು ಕಣ್ಣೀರಿಟ್ಟ  ಸ್ಥಳೀಯರು
ತಮಿಳುನಾಡಿನಲ್ಲಿ ಆಂಬುಲೆನ್ಸ್ ಮೇಲೆ ಪುಷ್ಪವರ್ಷ
Follow us on

ಚೆನ್ನೈ: ಬುಧವಾರ ಹೆಲಿಕಾಪ್ಟರ್ ಅಪಘಾತದಲ್ಲಿ (helicopter crash) ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಅವರ ಪತ್ನಿ ಮತ್ತು ಇತರ ಭದ್ರತಾ ಪಡೆ ಸಿಬ್ಬಂದಿಯ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ತಮಿಳುನಾಡಿನ ಸ್ಥಳೀಯರು ಹೂವಿನ ದಳ ಸುರಿದು ಭಾರತ್ ಮಾತಾ  ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ನೀಲಗಿರಿ ಜಿಲ್ಲೆಯ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನಿಂದ (Madras Regimental Centre) ಸೂಲೂರು ವಾಯುನೆಲೆಗೆ ತೆರಳುತ್ತಿದ್ದಾಗ ಮೃತರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್‌ಗಳ ಮೇಲೆ ಸ್ಥಳೀಯರು ಘೋಷಣೆಗಳನ್ನು ಕೂಗುತ್ತಾ ಹೂವಿನ ದಳಗಳನ್ನು ಸುರಿಯುವುದನ್ನು ವಿಡಿಯೊ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ವಾಹನಗಳು ಸೂಲೂರು ವಾಯುನೆಲೆಗೆ ಆಗಮಿಸುತ್ತಿದ್ದಂತೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಲ್ಲಾ 13 ಮೃತದೇಹಗಳನ್ನು ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ನವದೆಹಲಿಗೆ ತರಲಾಗುವುದು ಎಂದು ಎಎನ್ಐ ವರದಿ ಮಾಡಿದೆ. ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಸೇರಿದಂತೆ ನಾಲ್ಕು ದೇಹಗಳನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.

ಗುರುವಾರ ಭಾರತೀಯ ಸೇನೆಯು ಅಪಘಾತದ ತೀವ್ರತೆಯು ದೇಹಗಳನ್ನು ಗುರುತಿಸಲು ಕಷ್ಟಕರವಾಗಿದೆ ಎಂದು ಹೇಳಿದರು. ಪ್ರೀತಿಪಾತ್ರರ ಸೂಕ್ಷ್ಮತೆ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಪರಿಗಣಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. ಮೃತದೇಹಗಳನ್ನು ಗುರುತಿಸಲು ವೈಜ್ಞಾನಿಕ ಕ್ರಮಗಳ ಜೊತೆಗೆ ನಿಕಟ ಕುಟುಂಬ ಸದಸ್ಯರ ಸಹಾಯವನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಅದು ಹೇಳಿದೆ.


“ಮೃತದೇಹ ಗುರುತಿಸಿದ ನಂತರವೇ ಅದನ್ನು ಸಂಬಂಧಿಕರಿಗೆ ಒಪ್ಪಿಸಲಾಗುತ್ತದೆ. ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಕಟ ಸಂಬಂಧಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಸಿಬ್ಬಂದಿಯ ಸೂಕ್ತ ಮಿಲಿಟರಿ ವಿಧಿಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಸೇನೆಯನ್ನು ಉಲ್ಲೇಖಿಸಿ ಎಎನ್‌ಐ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಸಂಜೆ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 11 ಸಿಬ್ಬಂದಿಗೆ ಗೌರವ ಸಲ್ಲಿಸುವ ನಿರೀಕ್ಷೆಯಿದೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: Army Chopper Crash: ಜನರಲ್‌ ಬಿಪಿನ್ ರಾವತ್ ನನಗೆ ನೀರು ಕೇಳಿದ್ದರು -ಪ್ರತ್ಯಕ್ಷದರ್ಶಿ