2021ರಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಟ್ವೀಟ್ಗಳಲ್ಲಿ ಹೆಚ್ಚು ಮರುಟ್ವೀಟ್ ಆಗಿದ್ದು ಮೋದಿ ಕೊವಿಡ್ ಲಸಿಕೆ ಪಡೆಯುತ್ತಿರುವ ಚಿತ್ರ
ಸರ್ಕಾರದ ಉನ್ನತ ಟ್ವೀಟ್‌ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಕೊವಿಡ್ 19 ಲಸಿಕೆ ಪಡೆಯುವ ಚಿತ್ರವನ್ನು ಹಂಚಿಕೊಂಡಿರುವ ಟ್ವೀಟ್ ವರ್ಷದ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಎಂದು ಟ್ವಿಟರ್ ಹೇಳಿದೆ
ಭಾರತದಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚರ್ಚಿಸಲಾದ 2021ಟಾಪ್ ಸಂಭಾಷಣೆಗಳು, ಟ್ರೆಂಡ್ಸ್ ಮತ್ತು ಕ್ಷಣಗಳನ್ನು ಟ್ವಿಟರ್ (Twitter) ಗುರುವಾರ ಬಹಿರಂಗಪಡಿಸಿದೆ. ಇತರ ಟ್ರೆಂಡ್‌ಗಳಲ್ಲಿ ಭಾರತದಲ್ಲಿ ಕೊವಿಡ್ ಪರಿಹಾರಕ್ಕೆ ನೀಡಿದ ದೇಣಿಗೆ ಕುರಿತು ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮಿನ್ಸ್ (Pat Cummins) ಅವರ ಸಂದೇಶವು 2021 ರಲ್ಲಿ ದೇಶದಲ್ಲಿ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಆಗಿದೆ ಎಂದು ಟ್ವಿಟರ್ ಹೇಳಿದೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಅವರ ಮಗಳ ಜನನದ ಘೋಷಣೆಯು ಹೆಚ್ಚು ಮೆಚ್ಚುಗೆ ಗಳಿಸಿದ ಟ್ವೀಟ್ ಆಗಿದೆ. #COVID19, #FarmersProtest ಮತ್ತು #TeamIndia ಎಂಬ ಹ್ಯಾಶ್‌ಟ್ಯಾಗ್‌ಗಳು 2021 ರಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ರೀಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಸೇರಿವೆ. 2021 ರ ಆರಂಭಿಕ ತಿಂಗಳುಗಳಲ್ಲಿ ಭಾರತವು COVID-19 ರ ಎರಡನೇ ತರಂಗದಿಂದ ತತ್ತರಿಸಿದ್ದರಿಂದ, ಹೆಚ್ಚಿನ ಸಂಖ್ಯೆಯ ಜನರು ಸಂಪನ್ಮೂಲಗಳನ್ನು ಹುಡುಕಲು ಮತ್ತು ವೇದಿಕೆಯಲ್ಲಿ ಇತರರಿಗೆ ಸಹಾಯ ಮಾಡಲು #COVID19 ಹ್ಯಾಶ್‌ಟ್ಯಾಗ್ ಅನ್ನು ಬಳಸಿದರು. ಇದು ಹ್ಯಾಶ್‌ಟ್ಯಾಗ್ ಈ ವರ್ಷ ಅತಿ ಹೆಚ್ಚು ರೀಟ್ವೀಟ್ ಆಗಿದ್ದು ನಂತರ ಹೆಚ್ಚು ರೀಟ್ವೀಟ್ ಆಗಿದ್ದು #FarmersProtest. ಇದನ್ನು ವಿವಿಧ ರಾಜಕಾರಣಿಗಳು, ಸೆಲೆಬ್ರಿಟಿಗಳು, ನಾಗರಿಕರು ಮತ್ತು ಪ್ರತಿಭಟನಾ ನಿರತ ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ವಿನಿಮಯ ಮಾಡಿಕೊಳ್ಳಲು ಬಳಸಿಕೊಂಡರು. ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ T20 ವಿಶ್ವಕಪ್ ಮತ್ತು ಟೋಕಿಯೊ ಒಲಿಂಪಿಕ್ಸ್‌ವರೆಗಿನ ಕ್ರೀಡಾ ಪಂದ್ಯಗಳ ಪಟ್ಟಿಯನ್ನು ದೇಶವು ನೋಡಿದ್ದರಿಂದ #TeamIndia ಎಂಬ ಹ್ಯಾಶ್‌ಟ್ಯಾಗ್ ವರ್ಷದ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ.
2021ರ ಅತಿ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್ ಭಾರತದಲ್ಲಿ ಕೊವಿಡ್-19 ಎರಡನೇ ತರಂಗದ ಸಮಯದಲ್ಲಿ ಟ್ವಿಟರ್ ಅಗತ್ಯ ಸಂಪನ್ಮೂಲಗಳನ್ನು ಹುಡುಕುವ ಮೂಲವಾಗಿದ್ದರಿಂದ, ಹೆಚ್ಚಿನ ಸಂಖ್ಯೆಯ ಜನರು ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ವೇದಿಕೆಯನ್ನು ತೆಗೆದುಕೊಂಡರು. ಅವರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮಿನ್ಸ್ ಏಪ್ರಿಲ್‌ನಲ್ಲಿ ಭಾರತದಲ್ಲಿ ಕೊವಿಡ್ ಪರಿಹಾರಕ್ಕಾಗಿ ತಮ್ಮ ದೇಣಿಗೆಯನ್ನು ಘೋಷಿಸಲು ಟ್ವೀಟ್ ಮಾಡಿದ್ದಾರೆ. ಅವರ ಸಂದೇಶವು 2021 ರಲ್ಲಿ ಭಾರತದಲ್ಲಿ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇಲ್ಲಿಯವರೆಗೆ 114,000 ಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ. ಕಮಿನ್ಸ್ ಅವರ ಟ್ವೀಟ್ ಈ ವರ್ಷ ಅತಿ ಹೆಚ್ಚು ಉಲ್ಲೇಖವಾದ ಟ್ಟೀಟ್ ಆಗಿದ್ದು 21,900 ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟಿದೆ.
2021 ರಲ್ಲಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಈ ವರ್ಷ ಮಗಳು ಹುಟ್ಟಿದ್ದಾಳೆ ಎಂದು ಘೋಷಿಸಲು ಟ್ವಿಟರ್ ಬಳಸಿದ್ದಾರೆ. ಆ ಟ್ವೀಟ್ ಇದುವರೆಗೆ 538,200 ಲೈಕ್‌ಗಳೊಂದಿಗೆ ವರ್ಷದ ಅತಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಆಗಿದೆ. ಕುತೂಹಲದ ಸಂಗತಿ ಎಂದರೆ ಕಳೆದ ವರ್ಷ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿ ಎಂದು ಘೋಷಿಸಿದ ಟ್ವೀಟ್ 2020 ರಲ್ಲಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಆಗಿದೆ.
2021 ರಲ್ಲಿ ಹೆಚ್ಚು ಮರುಟ್ವೀಟ್ ಮಾಡಿದ ಸರ್ಕಾರದ ಸಂಬಂಧಿ ಟ್ವೀಟ್ ಸರ್ಕಾರದ ಉನ್ನತ ಟ್ವೀಟ್‌ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಕೊವಿಡ್ 19 ಲಸಿಕೆ ಪಡೆಯುವ ಚಿತ್ರವನ್ನು ಹಂಚಿಕೊಂಡಿರುವ ಟ್ವೀಟ್ ವರ್ಷದ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಎಂದು ಟ್ವಿಟರ್ ಹೇಳಿದೆ. ಈ ಟ್ವೀಟ್ ಇಲ್ಲಿಯವರೆಗೆ 45,100 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ.
Took my first dose of the COVID-19 vaccine at AIIMS.
Remarkable how our doctors and scientists have worked in quick time to strengthen the global fight against COVID-19.
I appeal to all those who are eligible to take the vaccine. Together, let us make India COVID-19 free! pic.twitter.com/5z5cvAoMrv
— Narendra Modi (@narendramodi) March 1, 2021
ಸರ್ಕಾರಕ್ಕೆ ಸಂಬಂಧಿಸಿದಂತೆ 2021 ರಲ್ಲಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಗಬ್ಬಾದಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಗೆಲುವಿಗಾಗಿ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿ ಪ್ರಧಾನಿ ಮೋದಿ ಮಾಡಿದ ಟ್ವೀಟ್ ಅತಿ ಹೆಚ್ಚು ಲೈಕ್ ಪಡೆದ ಟ್ವೀಟ್ ಆಗಿದೆ. ಟ್ವೀಟ್ ಇದುವರೆಗೆ 298,000 ಲೈಕ್‌ಗಳನ್ನು ಪಡೆದಿದೆ.
ಹೆಚ್ಚು ಟ್ವೀಟ್ ಮಾಡಿದ ಪ್ರಚಲಿತ ವಿದ್ಯಮಾನಗಳ ಹ್ಯಾಶ್‌ಟ್ಯಾಗ್‌ಗಳು #COVID19 ಈ ವರ್ಷ ಪ್ರಚಲಿತ ವ್ಯವಹಾರಗಳ ವಿಭಾಗದಲ್ಲಿ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್ ಆಗಿದ್ದರೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಾಗ #Afghanistan ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಹೆಚ್ಚು ಬಳಕೆಯಾಯಿತ. ಪ್ರಸ್ತುತ ವಿದ್ಯಮಾನಗಳಲ್ಲಿ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಇದು ಒಂದು.
ಇದನ್ನೂ ಓದಿ: Parag Agrawal Controversy: ಟ್ವಿಟರ್ ಸಿಇಒ ಆಗಿ ನೇಮಕಗೊಂಡ ಮೊದಲ ದಿನವೇ ಪರಾಗ್ ವಿವಾದ
Published On - 4:33 pm, Thu, 9 December 21