AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ಬೈಕ್​ ಮೇಲೆ ಡ್ಯಾನ್ಸ್ ಮಾಡಿದ ಯುವಕ; ಅದಾದ ಮೇಲೆ 9000 ರೂ.ಖರ್ಚು ಮಾಡಬೇಕಾಯ್ತು !

ಯುವಕನನ್ನು ಖಲೀದ್​ ಅಹ್ಮದ್​ ಎಂದು ಹೇಳಲಾಗಿದೆ. ಕಾನ್ಪುರದ ಕಲ್ಯಾಣಪುರ ಏರಿಯಾದ ಮಸ್ವಾನ್​​ಪುರದ ನಿವಾಸಿ. ಸುಮಾರು ಒಂದು ವಾರದ ಹಿಂದೆ ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ.

ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ಬೈಕ್​ ಮೇಲೆ ಡ್ಯಾನ್ಸ್ ಮಾಡಿದ ಯುವಕ; ಅದಾದ ಮೇಲೆ 9000 ರೂ.ಖರ್ಚು ಮಾಡಬೇಕಾಯ್ತು !
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on: Dec 09, 2021 | 4:57 PM

Share

ಯುವಜನರು ಎಂಥೆಂಥದ್ದೋ ಕ್ರೇಜ್​ಗೆ ಬಿದ್ದು ತಮ್ಮ ಭವಿಷ್ಯ ಹಾಳುಮಾಡಿಕೊಂಡ ಸುದ್ದಿಗಳನ್ನು ಈಗಾಗಲೇ ಹಲವು ಬಾರಿ ಓದಿದ್ದೇವೆ. ಹಾಗೇ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಬ್ಬ ಯುವಕ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳು ಹೋಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈತನಿಗೆ ಆರಕ್ಷಕರು ದಂಡವನ್ನೂ ವಿಧಿಸಿದ್ದಾರೆ. ಯುವಕ ಬಾಲಿವುಡ್​ ಸಿನಿಮಾಗಳಲ್ಲಿ ತೋರಿಸುವಂತೆ ಸ್ಟಂಟ್ ಮಾಡಲು ಹೋಗಿದ್ದೇ ಇದಕ್ಕೆಲ್ಲ ಕಾರಣ. ಈತ ಹೆಲ್ಮೆಟ್ ಧರಿಸದೆ ಬೈಕ್​ ಮೇಲೆ ನಿಂತು ಡ್ಯಾನ್ಸ್​ ಮಾಡಿದ್ದ ವಿಡಿಯೋ ನೋಡಿದ ಪೊಲೀಸರು ಇವನಿಗೆ ದಂಡ ವಿಧಿಸಿದ್ದಾರೆ. 

ಈ ಯುವಕನನ್ನು ಖಲೀದ್​ ಅಹ್ಮದ್​ ಎಂದು ಹೇಳಲಾಗಿದೆ. ಕಾನ್ಪುರದ ಕಲ್ಯಾಣಪುರ ಏರಿಯಾದ ಮಸ್ವಾನ್​​ಪುರದ ನಿವಾಸಿ. ಸುಮಾರು ಒಂದು ವಾರದ ಹಿಂದೆ ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ. ಅದರಲ್ಲಿ ಯುವಕ ನಟ ಗೋವಿಂದ್ ಅಭಿನಯದ ಏಕ್​ ಲಡಕೀ ಚಾಹಿಯೇ ಖಾಸ್​ ಖಾಸ್​ ಹಾಡಿಗೆ ಮೋಟಾರ್ ಸೈಕಲ್​ ಮೇಲೆ ನಿಂತು ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಆತ ಈ ಸ್ಟಂಟ್ ಮಾಡುವಾಗ ಹೆಲ್ಮೆಟ್​ ಕೂಡ ಧರಿಸಿರಲಿಲ್ಲ.   ವಿಡಿಯೋ ನೋಡಿದ ಟ್ರಾಫಿಕ್​ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಖಲೀದ್​​ನಿಗೆ 9000 ರೂಪಾಯಿ ದಂಡ ವಿಧಿಸಿದ್ದಾರೆ. ಖಲೀದ್​​ ಹಿಂದೆ ಬ್ರೇಕ್​ ಟ್ರಾಫಿಕ್​ ರೂಲ್ಸ್​​​ಗಳನ್ನೆಲ್ಲ ಬ್ರೇಕ್​ ಮಾಡಿದ್ದನ್ನು ಸೇರಿಸಿ ಇದೀಗ ಒಮ್ಮೆಲೇ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅನಧಿಕೃತ ಕಟ್ಟಡ ನಿರ್ಮಿಸಿದ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ; ಬಿಬಿಎಂಪಿಗೆ ಹೈಕೋರ್ಟ್​ ಸೂಚನೆ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?