Parag Agrawal Controversy: ಟ್ವಿಟರ್​ ಸಿಇಒ ಆಗಿ ನೇಮಕಗೊಂಡ ಮೊದಲ ದಿನವೇ ಪರಾಗ್ ವಿವಾದ

TV9 Digital Desk

| Edited By: Srinivas Mata

Updated on: Nov 30, 2021 | 5:41 PM

ಟ್ವಿಟರ್​ಗೆ ಹೊಸದಾಗಿ ಸಿಇಒ ಆಗಿ ನೇಮಕ ಆದ ಪರಾಗ್ ಅಗರವಾಲ್ ಮೊದಲ ದಿನವೇ ವಿವಾದಕ್ಕೀಡಾಗಿದ್ದಾರೆ. ಇದಕ್ಕೆ ಕಾರಣ ಆದ ಸಂಗತಿ ಏನು ಎಂಬ ವಿವರ ಇಲ್ಲಿದೆ.

Parag Agrawal Controversy: ಟ್ವಿಟರ್​ ಸಿಇಒ ಆಗಿ ನೇಮಕಗೊಂಡ ಮೊದಲ ದಿನವೇ ಪರಾಗ್ ವಿವಾದ
ಪರಾಗ್​ ಅಗರ್​ವಾಲ್​

Follow us on

ಟ್ವಿಟರ್​ಗೆ ಹೊಸದಾಗಿ ಸಿಇಒ ಆಗಿ ನೇಮಕ ಆಗಿರುವ ಭಾರತೀಯ-ಅಮೆರಿಕನ್ ಪರಾಗ್ ಅಗರವಾಲ್ ಅವರು ಮೊದಲ ದಿನವೇ ವಿವಾದವನ್ನು ಎದುರಿಸಿದ್ದಾರೆ. ಅಗರವಾಲ್ ಬಹಳ ಹಿಂದೆ ಮಾಡಿದ್ದ ಟ್ವೀಟ್​ವೊಂದನ್ನು ಬಹಿರಂಗಪಡಿಸಲಾಗಿದೆ. ಬಲಪಂಥೀಯ ಟ್ರೋಲ್‌ಗಳು ಮತ್ತು ಮಾಧ್ಯಮಗಳು ದಶಕದ ಹಳೆಯ ಟ್ವೀಟ್ ಅನ್ನು ಈಗ ಬಹಿರಂಗಪಡಿಸಲಾಗಿದೆ. ಎಲ್ಲ ಬಿಳಿಯರು ಜನಾಂಗೀಯವಾದಿಗಳು ಎಂದು ತಾವು ನಂಬುವುದಾಗಿ ಅವರು ಹಿಂದೊಮ್ಮೆ ಟ್ವೀಟ್ ಮಾಡಿದ್ದರು. ಅಕ್ಟೋಬರ್ 26, 2010ರಂದು ಪೋಸ್ಟ್​ ಮಾಡಿದ್ದ ಟ್ವೀಟ್ ಅದು. ಆ ಸಂದರ್ಭದಲ್ಲಿ ಅಗರವಾಲ್ ಇನ್ನೂ ಟ್ವಿಟರ್‌ಗೆ ಸೇರ್ಪಡೆ ಆಗಿರಲಿಲ್ಲ. “ಮುಸ್ಲಿಮರು ಮತ್ತು ಉಗ್ರಗಾಮಿಗಳ ನಡುವೆ ಅವರು ವ್ಯತ್ಯಾಸವನ್ನು ಮಾಡದಿದ್ದರೆ, ಬಿಳಿಯರು ಮತ್ತು ಜನಾಂಗೀಯವಾದಿಗಳ ಮಧ್ಯೆ ಏಕೆ ವ್ಯತ್ಯಾಸವನ್ನು ತೋರಿಸಬೇಕು?” ಎಂದು ಪೋಸ್ಟ್​ ಮಾಡಿದ್ದರು. ಆದರೆ, ಇದು ಡೈಲಿ ಶೋನಲ್ಲಿ ಹೇಳಿದ ಹಾಸ್ಯನಟ ಆಸಿಫ್ ಮಾಂಡವಿ ಸಾಲುಗಳನ್ನು ಮಾತ್ರ ಉಲ್ಲೇಖಿಸುತ್ತಿದ್ದೇನೆ ಎಂದು ಅಗರವಾಲ್ ಸ್ವತಃ ಸ್ಪಷ್ಟಪಡಿಸಿದ್ದಾರೆ.

ಅದೇನೇ ಇದ್ದರೂ ಟ್ವಿಟರ್ ತಮ್ಮನ್ನು ಸೆನ್ಸಾರ್ ಮಾಡುತ್ತಿದೆ ಎಂದು ಸತತವಾಗಿ ಬಲಪಂಥೀಯ ಟ್ರೋಲ್‌ಗಳು ಸತತವಾಗಿ ಆರೋಪಿಸುತ್ತಿದ್ದಾರೆ ಮತ್ತು ಅಗರ್‌ವಾಲ್ ಅವರನ್ನು ಡೋರ್ಸಿಯ ತತ್ವ- ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಹೋಗುವವರಂತೆ ನೋಡುತ್ತಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ತಮ್ಮ ಮೇಲೆ ಇನ್ನಷ್ಟು ಕಠಿಣ ಆಗಬಹುದೇ ಎನ್ನುತ್ತಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ ನಿರ್ಬಂಧಿಸಿದ ನಂತರ ಅನೇಕ ಬಲಪಂಥೀಯ ಅನುಯಾಯಿಗಳು ಮೈಕ್ರೋಬ್ಲಾಗಿಂಗ್​ ಸೈಟ್​ “ಪಾರ್ಲರ್‌” ಬಳಕೆ ಶುರು ಮಾಡಿದ್ದಾರೆ.

ಆದರೂ ಸಿಲಿಕಾನ್ ವ್ಯಾಲಿ ಟೆಕ್ ಇಕೋ-ಸಿಸ್ಟಮ್‌ನಲ್ಲಿ ಅಗರವಾಲ್‌ನ ಪದೋನ್ನತಿಗೆ ಟೆಕಿ ಸಮುದಾಯವು ಆಶ್ಚರ್ಯಚಕಿತವಾಗಿದೆ. ಅಲ್ಲಿ ಅವರು ಕೇವಲ 11 ವರ್ಷಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ನಿಂದ ಸಿಇಒ ಆಗಿ ಮೇಲಕ್ಕೆ ಏರಿದ್ದಾರೆ. ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಇದನ್ನು ಗಮನಿಸಿದ್ದಾರೆ. ಮಾರ್ಗದರ್ಶನ ಮತ್ತು ಸಲಹೆಗಾಗಿ ಡೋರ್ಸೆಗೆ ಅಗರವಾಲ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. “10 ವರ್ಷಗಳ ಹಿಂದೆ 1,000ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದಾಗ ನಾನು ಈ ಕಂಪನಿಗೆ ಸೇರಿದೆ. ಇದು ಒಂದು ದಶಕದ ಹಿಂದೆ ಇದ್ದಾಗ, ಆ ದಿನಗಳು ನನಗೆ ನಿನ್ನೆಯಂತೆ ಭಾಸವಾಗುತ್ತಿದೆ” ಎಂದು ಅವರು ಬರೆದಿದ್ದಾರೆ. “ನಾನು ನಿಮ್ಮ ಬೂಟುಗಳಲ್ಲಿ ನಡೆದಿದ್ದೇನೆ, ಏಳುಬೀಳುಗಳು, ಸವಾಲುಗಳು ಮತ್ತು ಅಡೆತಡೆಗಳು, ಗೆಲುವುಗಳು ಮತ್ತು ತಪ್ಪುಗಳನ್ನು ನೋಡಿದ್ದೇನೆ. ಆದರೆ ಆಗಿಗೂ ಈಗಿಗೂ ಟ್ವಿಟರ್​ನಿಂದ ನಂಬಲಸಾಧ್ಯವಾದ ಪ್ರಭಾವ ನೋಡುತ್ತಿದ್ದೇನೆ. ನಮ್ಮ ಮುಂದುವರಿದ ಪ್ರಗತಿ ಮತ್ತು ಮುಂದಿರುವ ಉತ್ತಮ ಅವಕಾಶಗಳನ್ನು ನಾನು ನೋಡುತ್ತೇನೆ, ” ಎಂದು ಡೋರ್ಸೆಗೆ ಹೇಳಿದ್ದಾರೆ.

ಇದನ್ನೂ ಓದಿ: Parag Agrawal Salary: ಟ್ವಿಟರ್​ ಸಿಇಒ ಪರಾಗ್​ ಅಗರ್​ವಾಲ್​ ವಾರ್ಷಿಕ ವೇತನದ ಲೆಕ್ಕ ಇಲ್ಲಿದೆ

Parag Agrawal: ಟ್ವಿಟರ್​ ಹೊಸ ಸಿಇಒ ಪರಾಗ್​ ಅಗರವಾಲ್ ಬಗ್ಗೆ ನಿಮಗೆಷ್ಟು ಗೊತ್ತು? ​

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada