Parag Agrawal: ಟ್ವಿಟರ್ ಹೊಸ ಸಿಇಒ ಪರಾಗ್ ಅಗರವಾಲ್ ಬಗ್ಗೆ ನಿಮಗೆಷ್ಟು ಗೊತ್ತು?
ಟ್ವಿಟರ್ನ ಹೊಸ ಸಿಇಒ ಆಗಿ ಪರಾಗ್ ಅಗರವಾಲ್ ನೇಮಕ ಆಗಿದ್ದಾರೆ. ಜಾಕ್ ಡೋರ್ಸೆ ತಮ್ಮ ಹುದ್ದೆಯಿಂದ ಕೆಳಗೆ ಇಳಿದಿದ್ದು, ಆ ಸ್ಥಾನಕ್ಕೆ ಪರಾಗ್ ಆಯ್ಕೆ ಆಗಿದ್ದಾರೆ.
ಪರಾಗ್ ಅಗರವಾಲ್ ಅವರಿಗೆ ನವೆಂಬರ್ 29ರಂದು ಟ್ವಿಟರ್ ಸಿಇಒ ಆಗಿ ಪದೋನ್ನತಿ ಪಡೆದಿದ್ದಾರೆ. ಕಂಪೆನಿಯ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಅವರು ಪಾತ್ರದಿಂದ ಕೆಳಗಿಳಿದಿದ್ದಾರೆ. ಅಗರವಾಲ್ ಅವರು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಗೂಗಲ್‌ನ ಸುಂದರ್ ಪಿಚೈ, ಐಬಿಎಂನ ಅರವಿಂದ್ ಕೃಷ್ಣ, ಅಡೋಬ್‌ನ ಶಂತನು ನಾರಾಯಣ್ ಮತ್ತು ವಿಎಂವೇರ್‌ನ ರಘುರಾಮ್‌ನಂತಹ ಭಾರತದ ಜಾಗತಿಕ ಟೆಕ್ ಸಿಇಒಗಳ ಗಣ್ಯ ಪಟ್ಟಿಗೆ ಸೇರಿದ್ದಾರೆ. 2011ರಲ್ಲಿ ಕಂಪೆನಿಗೆ ಸೇರಿದ ಅಗರವಾಲ್, 2017ರ ಅಕ್ಟೋಬರ್ನಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (CTO) ಸೇವೆ ಸಲ್ಲಿಸಿದ್ದಾರೆ. ಈ ಹುದ್ದೆಯಲ್ಲಿ ಅವರು ಕಂಪೆನಿಯ ತಾಂತ್ರಿಕ ಕಾರ್ಯತಂತ್ರ ಮತ್ತು ಅಭಿವೃದ್ಧಿ ವೇಗವನ್ನು ಸುಧಾರಿಸಲು ಅದರ ಪ್ರಯತ್ನಗಳಿಗೆ ಜವಾಬ್ದಾರರಾಗಿದ್ದರು. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಡೋರ್ಸೆ, “ಕಂಪೆನಿ ಮತ್ತು ಅದರ ಅಗತ್ಯಗಳನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಸ್ವಲ್ಪ ಸಮಯದವರೆಗೆ ಗಮನಿಸಿ ಅವರು (ಅಗರವಾಲ್) ನನ್ನ ಆಯ್ಕೆ ಆಗಿದ್ದಾರೆ. ಈ ಕಂಪೆನಿಯನ್ನು ಏಳ್ಗೆಗೆ ಸಹಾಯ ಮಾಡಿದ ಪ್ರತಿಯೊಂದು ನಿರ್ಣಾಯಕ ನಿರ್ಧಾರದ ಹಿಂದೆ ಪರಾಗ್ ಇದ್ದಾರೆ.”
ಅಗರವಾಲ್ ಪ್ರತಿಕ್ರಿಯೆಯಾಗಿ, “ಜಾಕ್ ಮತ್ತು ನಮ್ಮ ಇಡೀ ತಂಡಕ್ಕೆ ತುಂಬು ಕೃತಜ್ಞತೆ ಮತ್ತು ಭವಿಷ್ಯದ ಬಗ್ಗೆ ತುಂಬಾ ಉತ್ಸಾಹದಿಂದ್ದೇನೆ. ನಾನು ಕಂಪನಿಗೆ ಕಳುಹಿಸಿದ ಟಿಪ್ಪಣಿ ಇಲ್ಲಿದೆ. ನಿಮ್ಮ ನಂಬಿಕೆ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು.” ಎಂದಿದ್ದಾರೆ.
ಯಾರಿದು ಪರಾಗ್ ಅಗರವಾಲ್ ಪರಾಗ್ ಅಗರವಾಲ್ ಅವರು ಐಐಟಿ-ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್.ಡಿ., ಪಡೆದಿದ್ದಾರೆ. 2011ರಲ್ಲಿ ಟ್ವಿಟರ್ಗೆ ಸೇರುವ ಮೊದಲು, ಅಗರವಾಲ್ ಮೈಕ್ರೋಸಾಫ್ಟ್ ರೀಸರ್ಚ್, ಯಾಹೂನಂತಹ ಸಂಸ್ಥೆಗಳಲ್ಲಿ, AT&T ಪ್ರಯೋಗಾಲಯಗಳಲ್ಲಿ ಡೇಟಾ ನಿರ್ವಹಣೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಸಂಶೋಧನೆ, ಮತ್ತು AT&T ಲ್ಯಾಬ್ಸ್. 2019ರ ಡಿಸೆಂಬರ್ನಲ್ಲಿ ಡೋರ್ಸೆ ಅವರು ಸಂಸ್ಥೆಯ ವಿಕೇಂದ್ರೀಕೃತ ಸಾಮಾಜಿಕ ನೆಟ್‌ವರ್ಕಿಂಗ್ ಪ್ರಯತ್ನಗಳಾದ ಪ್ರಾಜೆಕ್ಟ್ ಬ್ಲೂಸ್ಕಿಯ ಉಸ್ತುವಾರಿಯನ್ನು ಅಗರವಾಲ್‌ಗೆ ವಹಿಸಿದರು. 2021ರ ಆಗಸ್ಟ್ನಲ್ಲಿ ಜೇ ಗ್ರಾಬರ್ ಅವರನ್ನು ಬ್ಲೂಸ್ಕಿಯ ನೇತೃತ್ವಕ್ಕೆ ನೇಮಿಸಲಾಯಿತು.
ಬಳಕೆದಾರರ ಟೈಮ್‌ಲೈನ್‌ಗಳಲ್ಲಿ ಟ್ವೀಟ್‌ಗಳ ಪ್ರಸ್ತುತತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುವಲ್ಲಿ ಕಂಪೆನಿಯ ಪ್ರಯತ್ನಗಳನ್ನು ಮುನ್ನಡೆಸುವುದು ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ.
ಟ್ವಿಟರ್ ಮತ್ತು ಭಾರತಕ್ಕೆ ಈ ನೇಮಕದ ಹಿಂದಿನ ಅರ್ಥವೇನು? ಅಗರವಾಲ್ ಒಬ್ಬ ಟೆಕ್ಕಿ ಆಗಿರುವುದರಿಂದ ಇದು ಹೆಚ್ಚಿನ ಉತ್ಪನ್ನದ ಆವಿಷ್ಕಾರಕ್ಕೆ ಕಾರಣವಾಗಬಹುದು ಎಂಬ ಭರವಸೆ ಇದೆ. ವಾಂಟೇಜ್ ಪಾಯಿಂಟ್ ವೆಂಚರ್ ಪಾರ್ಟ್‌ನರ್ಸ್‌ನ ಮಾಜಿ ಪಾಲುದಾರ ಕಲ್ ಪಟೇಲ್, ಟ್ವಿಟರ್ ಸ್ಪೇಸ್‌ಗಳ ಸೆಷನ್ನಲ್ಲಿ ಭಾರತೀಯ ಮೂಲದ ಸಿಇಒ ಹೊಂದಿರುವ ಕಂಪೆನಿಯು ಭಾರತ ಸರ್ಕಾರದೊಂದಿಗೆ ಹೊಂದಿರುವ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಹೊಸ CEO ಪ್ಲಾಟ್‌ಫಾರ್ಮ್‌ನಲ್ಲಿ ಮಾಡರೇಶನ್‌ನಲ್ಲಿ ತರಬಹುದಾದ ಬದಲಾವಣೆಗಳನ್ನು ನೋಡಲು ಆಸಕ್ತಿದಾಯಕವಾಗಿದೆ.