Financial changes: ಡಿಸೆಂಬರ್ 1ರಿಂದ ಜಾರಿ ಆಗಬಹುದಾದ ಪ್ರಮುಖ ಹಣಕಾಸು ವಿಚಾರದ ಬದಲಾವಣೆಗಳಿವು
2021ರ ಡಿಸೆಂಬರ್ 1ರಿಂದ ನಿರೀಕ್ಷೆ ಮಾಡಬಹುದಾದದ ಬದಲಾವಣೆಗಳು ಇಲ್ಲಿವೆ. ಎಲ್ಪಿಜಿ ಸಿಲಿಂಡರ್ ಸೇರಿದಂತೆ ಇತರ ಬದಲಾವಣೆಗಳ ಬಗ್ಗೆ ಮಾಹಿತಿ ವಿವರಿಸಲಾಗಿದೆ.
ಪ್ರತಿ ತಿಂಗಳ ಮೊದಲ ದಿನದಂದು ಕೆಲವು ಹೊಸ ನಿಯಮಗಳು ಜಾರಿ ಆಗುತ್ತವೆ. ಅಥವಾ ಹಳೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ನವೆಂಬರ್ ತಿಂಗಳು ಮುಗಿಯಲಿದ್ದು, ಹೊಸ ತಿಂಗಳು ಆರಂಭವಾಗಲಿದೆ. ಡಿಸೆಂಬರ್ 1ರಂದು ಕೆಲವು ಹೊಸ ನಿಯಮಗಳು ಅನ್ವಯವಾಗುತ್ತವೆ. ಇವುಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.
ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಒಂದನೇ ತಾರೀಕಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಲಾಗುತ್ತದೆ. ಅದರ ನಂತರ ಹೊಸ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್‌ಗಳಿಗೆ ಪ್ರತಿ ತಿಂಗಳ 1ರಂದು ಹೊಸ ದರಗಳನ್ನು ನಿಗದಿ ಮಾಡಲಾಗುತ್ತದೆ. ಪರಿಶೀಲನೆ ಬಳಿಕ ಸಿಲಿಂಡರ್ ಬೆಲೆ ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ಬಾರಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಸಹ ಇರುವುದಿಲ್ಲ.
ಮನೆ ಸಾಲದ ಕೊಡುಗೆ ಬಹುತೇಕ ಬ್ಯಾಂಕ್‌ಗಳು ಹಬ್ಬದ ಸಮಯದಲ್ಲಿ ವಿವಿಧ ಗೃಹ ಸಾಲದ ಕೊಡುಗೆಗಳನ್ನು ನೀಡುತ್ತಿದ್ದವು. ಇವುಗಳಲ್ಲಿ ಹಲವು ಕಡಿಮೆ ಬಡ್ಡಿದರಗಳು ಮತ್ತು ಜೀರೋ ಪ್ರೊಸೆಸಿಂಗ್ ಶುಲ್ಕಗಳನ್ನು ಒಳಗೊಂಡಿದ್ದವು. ಹೆಚ್ಚಿನ ಬ್ಯಾಂಕ್‌ಗಳ ಈ ಕೊಡುಗೆಗಳು ಡಿಸೆಂಬರ್ 31, 2021ರಂದು ಕೊನೆಗೊಳ್ಳುತ್ತವೆ. ಆದರೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನ ಆಫರ್ ನವೆಂಬರ್ 30ರಂದು ಕೊನೆಗೊಳ್ಳುತ್ತದೆ.
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಡಿಸೆಂಬರ್ 1ರಿಂದ ಆ ಕ್ರೆಡಿಟ್ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಶಾಪಿಂಗ್ ಮಾಡುವುದು ದುಬಾರಿ ಆಗಲಿದೆ. ಸದ್ಯಕ್ಕೆ, ಎಸ್‌ಬಿಐ ಕಾರ್ಡ್ ಬಳಸಲು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ, ಆದರೆ ಡಿಸೆಂಬರ್ 1ರಿಂದ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ.
ಯುಎಎನ್-ಆಧಾರ್ ಜೋಡಣೆ ನೀವು ಉದ್ಯೋಗದಲ್ಲಿದ್ದರೆ ಮತ್ತು ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿದ್ದರೆ, ನವೆಂಬರ್ 30ರೊಳಗೆ ಅದನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಿ. ಡಿಸೆಂಬರ್ 1, 2021ರಿಂದ UAN ಮತ್ತು ಆಧಾರ್ ಜೋಡಣೆ ಮಾಡಿರುವುದನ್ನು ಪರಿಶೀಲಿಸಿರುವ ಉದ್ಯೋಗಿಗಳಿಗೆ ಮಾತ್ರ ECR (ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್) ಅನ್ನು ಸಲ್ಲಿಸಲು ಕಂಪೆನಿಗಳನ್ನು ಕೇಳಲಾಗಿದೆ. ಇದರರ್ಥ ಉದ್ಯೋಗಿಯ UAN ಅನ್ನು ಆಧಾರ್ ವ್ಯಾಲಿಡೇಟ್ ಮಾಡದಿದ್ದಲ್ಲಿ ನಂತರ ECR ಅನ್ನು ಸಲ್ಲಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪಿಎಫ್ನಲ್ಲಿ ಉದ್ಯೋಗದಾತರಿಂದ ಪಡೆದ ಕೊಡುಗೆಯನ್ನು ನಿಲ್ಲಿಸಬಹುದು.
ಇದನ್ನೂ ಓದಿ: Life Certificate: ಈ ತಿಂಗಳೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿಂದ ಪಿಂಚಣಿ ಬರಲ್ಲ