Life Certificate: ಈ ತಿಂಗಳೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿಂದ ಪಿಂಚಣಿ ಬರಲ್ಲ
ಪಿಂಚಣಿದಾರರು ಒಂದು ವೇಳೆ ಈ ತಿಂಗಳೊಳಗೆ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡದಿದ್ದರೆ ಮುಂದಿನ ತಿಂಗಳಿಂದ ಪೆನ್ಷನ್ ಬರುವುದಿಲ್ಲ.
ಭಾರತದಲ್ಲಿ ಪಿಂಚಣಿ ಪಡೆಯುವವರಿಗೆ ಜೀವಿತ ಪ್ರಮಾಣಪತ್ರವು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಉದ್ಯೋಗದಲ್ಲಿದ್ದು, ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ತಡೆಯಿಲ್ಲದೆ ಪಡೆಯುವುದನ್ನು ಮುಂದುವರಿಸಲು ವಾರ್ಷಿಕವಾಗಿ ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಪಿಂಚಣಿದಾರರಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸಲು ಈ ವರ್ಷ ನವೆಂಬರ್ 30 ಕೊನೆಯ ದಿನಾಂಕ ಆಗಿದ್ದು, ಇನ್ನು ಕೇವಲ ಏಳು ದಿನಗಳು ಬಾಕಿ ಇವೆ. ಇದು ವಿಫಲವಾದರೆ ಪಿಂಚಣಿ ಹಣವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಪಿಂಚಣಿದಾರರು ತಮ್ಮ ಬಾಕಿ ಹಣವನ್ನು ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ಇತರವುಗಳು ಇಂಥ ಪಿಂಚಣಿ ವಿತರಣಾ ಪ್ರಾಧಿಕಾರಗಳಿಂದ (ಪಿಡಿಎ) ಪಡೆಯುತ್ತಾರೆ.
ಜೀವಿತ ಪ್ರಮಾಣಪತ್ರ ಎಂದರೇನು? ಜೀವಿತ ಪ್ರಮಾಣಪತ್ರವು ಪಿಂಚಣಿದಾರರಿಗೆ ಅಸ್ತಿತ್ವದ ಅತ್ಯಗತ್ಯ ದಾಖಲೆಯಾಗಿದ್ದು, ಪಿಂಚಣಿದಾರರು ಜೀವಂತವಾಗಿ ಇದ್ದಾರೆ ಎಂಬುದಕ್ಕೆ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಅಧಿಕೃತ ಪಿಂಚಣಿ ವಿತರಕರು ಅಥವಾ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಂತಹ ಏಜೆನ್ಸಿಯ ಮುಂದೆ ಹಾಜರುಪಡಿಸಬೇಕು. ಮತ್ತು ಪಿಂಚಣಿದಾರರ ಕೆಲಸದ ಸ್ಥಳವು ಆ ವ್ಯಕ್ತಿಯ ಮರಣದ ನಂತರ ಪಾವತಿಗಳನ್ನು ಮುಂದುವರಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಪಿಂಚಣಿ ನೀಡುವ ಮೊದಲು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಅಗತ್ಯ ಇರುವ ಈ ಪ್ರಮಾಣಪತ್ರವನ್ನು ನೀಡಲು ಸರ್ಕಾರ ಮತ್ತು ವಿಮಾ ಕಂಪೆನಿಗಳು ಸಲಹೆ ನೀಡುತ್ತವೆ.
ಸಾಮಾನ್ಯವಾಗಿ ಪಿಂಚಣಿ ಪಡೆಯುವ ವ್ಯಕ್ತಿಯು ಜೀವಿತ ಪ್ರಮಾಣಪತ್ರವನ್ನು ನೀಡಲು ವಿತರಣೆ ಏಜೆನ್ಸಿಯ ಮುಂದೆ ಭೌತಿಕವಾಗಿ – ಹಾಜರಿರಬೇಕು. ಆದರೆ ಕೊವಿಡ್ ಅಪಾಯ ತಪ್ಪಿಸಲು ಕೇಂದ್ರವು ಡಿಜಿಟಲ್ ಜೀವಿತ ಪ್ರಮಾಣಪತ್ರದೊಂದಿಗೆ (ಡಿಎಲ್‌ಸಿ) ಬಂದಿದೆ/ ಇದು ಪಿಂಚಣಿ ವಿತರಣೆಗೆ ಸಾಕಷ್ಟು ಪುರಾವೆ ಎಂದು ಪರಿಗಣಿಸಲಾಗಿದೆ. DLC ಅನ್ನು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಆದರೆ ಕೊವಿಡ್ ಸಮಯದಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ.
ಪಿಂಚಣಿದಾರರು ಆನ್‌ಲೈನ್‌ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಹೇಗೆ? ಜೀವನ್ ಪ್ರಮಾಣ್ ವೆಬ್‌ಸೈಟ್ (https://jeevanpramaan.gov.in/) ಅಥವಾ ಅಪ್ಲಿಕೇಷನ್ ಮೂಲಕ ಜೀವನ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ, ಪಿಂಚಣಿದಾರರು ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪಿಂಚಣಿ ಸಂಬಂಧಿತ ಇತರ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಮನೆಯಲ್ಲಿಯೇ ಪ್ರಕ್ರಿಯೆಯನ್ನು ಡಿಜಿಟಲ್ ಮೂಲಕ ಪೂರ್ಣಗೊಳಿಸಬಹುದು. ಪೋರ್ಟಲ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಆಧಾರ್ ಪ್ಲಾಟ್‌ಫಾರ್ಮ್ ಅನ್ನು ಸಹ ಬಳಸುತ್ತದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸೇರಿದೆ. ಒಮ್ಮೆ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಹತ್ತಿರದ ಬ್ಯಾಂಕ್/ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ, ಜೀವಿತ ಪ್ರಮಾಣಪತ್ರವನ್ನು ಡಿಜಿಟಲ್ ಆಗಿ ಸಲ್ಲಿಸಬಹುದು.
ಜೀವನ್ ಪ್ರಮಾಣ ಪತ್ರ ಆನ್‌ಲೈನ್‌ನಲ್ಲಿ ಜನರೇಟ್ ಆಗಲು ಪೂರ್ವಾಪೇಕ್ಷಿತಗಳಿವು ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಥವಾ ಜೀವನ್ ಪ್ರಮಾಣ ಪತ್ರವನ್ನು ಜನರೇಟದ ಮಾಡಲು ಕೆಲವು ಪೂರ್ವ ಅವಶ್ಯಕತೆಗಳಿವೆ. ಪಿಂಚಣಿದಾರರು ಮಾನ್ಯವಾದ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು ಎಂಬುದು ಒಂದು. ಎರಡನೆಯದಾಗಿ, ಆನ್‌ಲೈನ್ ಪ್ರಮಾಣಪತ್ರವನ್ನು ಜನರೇಟ್ ಮಾಡಲು ಬಯಸುವ ಪಿಂಚಣಿದಾರರು ಕಾರ್ಯ ನಿರ್ವಹಿಸುವ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಪ್ರಾರಂಭಿಸುವ ಮೊದಲು, ಬಳಕೆದಾರರು ಸರ್ಕಾರದ ಜೀವನ್ ಪ್ರಮಾಣ್ ಪೋರ್ಟಲ್‌ನಲ್ಲಿ ಸ್ವತಃ ನೋಂದಾಯಿಸಿಕೊಳ್ಳಬೇಕು.
ಜೀವನ್ ಪ್ರಮಾಣ್ ಆ್ಯಪ್ನಲ್ಲಿ ನೋಂದಾಯಿಸುವ ಹಂತಗಳು ಇದಕ್ಕಾಗಿ, ಪಿಂಚಣಿದಾರರು ಮೊದಲು ಸರ್ಕಾರದ ಜೀವನ್ ಪ್ರಮಾಣ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಬೇಕು. ಇಲ್ಲಿಂದ, ಹೊಸ ಬಳಕೆದಾರರಾಗಿ ನೋಂದಾಯಿಸಲು ಆಯ್ಕೆಯನ್ನು ಕಂಡುಕೊಳ್ಳಬೇಕು. ಪ್ರಕ್ರಿಯೆಯನ್ನು ಮುಂದುವರಿಸಲು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇದರ ನಂತರ, ಪಿಂಚಣಿದಾರರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಹೆಸರು, ಮೊಬೈಲ್ ಸಂಖ್ಯೆ, ಪಿಂಚಣಿ ಪಾವತಿ ಆದೇಶವನ್ನು (PPO) ಸಲ್ಲಿಸಬೇಕು. ಇದೆಲ್ಲವನ್ನೂ ಮಾಡಿದ ನಂತರ, ಬಳಕೆದಾರರು OTP ಕಳುಹಿಸಲು ಅಪ್ಲಿಕೇಷನ್ನಲ್ಲಿ ಇರುವ ಆಯ್ಕೆಯನ್ನು ಕಂಡುಹಿಡಿಯಬೇಕು. ಆ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಕೋಡ್ ಸ್ವೀಕರಿಸಿದ ನಂತರ, ಪಿಂಚಣಿದಾರರು ಅದನ್ನು ನಮೂದಿಸಬೇಕು. ಇದನ್ನು ಆಧಾರ್ ಬಳಸಿ ದೃಢೀಕರಿಸಬೇಕು. ಈಗ, ಬಳಕೆದಾರರು Submit (ಸಲ್ಲಿಸು) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅದರ ವ್ಯಾಲಿಡೇಷನ್ ನಂತರ ಪ್ರಮಾಣ್ ಐಡಿಯನ್ನು ಜನರೇಟ್ ಮಾಡಲಾಗುತ್ತದೆ.
ಜೀವಿತ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಜನರೇಟ್ ಮಾಡುವ ಹಂತಗಳು ಪ್ರಮಾಣ್ ಐಡಿಯನ್ನು ರಚಿಸಿದ ನಂತರ, ಪಿಂಚಣಿದಾರರು ಅದನ್ನು ಮತ್ತು ಇನ್ನೊಂದು OTP ಬಳಸಿಕೊಂಡು ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡಬಹುದು. ಅದರ ನಂತರ, ‘ಜೀವನ್ ಪ್ರಮಾಣ’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಆಧಾರ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬಹುದು. ಈಗ, ಬಳಕೆದಾರರು OTP ಅನ್ನು ಜನರೇಟ್ ಮಾಡಿ, ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಮೂದಿಸಬೇಕು. ಇದರ ನಂತರ, PPO ಸಂಖ್ಯೆ, ಹೆಸರು, ವಿತರಣೆ ಏಜೆನ್ಸಿಯ ಹೆಸರನ್ನು ನಮೂದಿಸಬೇಕು. ಆಧಾರ್ ಡೇಟಾವನ್ನು ಬಳಸಿಕೊಂಡು, ಬಳಕೆದಾರರ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ದೃಢೀಕರಿಸಬೇಕು.
ಇದೆಲ್ಲವನ್ನೂ ಮಾಡಿದ ನಂತರ, ಜೀವಿತ ಪ್ರಮಾಣವು ವಿಂಡೋದಲ್ಲಿ ಪ್ರದರ್ಶಿಸಲ್ಪಡುತ್ತದೆ ಮತ್ತು ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ.
ಇದನ್ನೂ ಓದಿ: SBI Pensioners Facility: ಪೆನ್ಷನ್ದಾರರಿಗೆ ಎಸ್ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ