Horoscope: ನಿಮ್ಮ ನಿರ್ಧಾರಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು
29 ಡಿಸೆಂಬರ್ 2024: ಭಾನುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಜಂಟಿಯಾಗಿ ನಿರ್ವಹಣೆ ಮಾಡುವುದು ಕಾರ್ಯದಲ್ಲಿ ಕಷ್ಟವಾಗುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಹಾಗಾದರೆ ಡಿಸೆಂಬರ್ 29ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಗಂಡ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಸಂಜೆ 04:48 ರಿಂದ 06:12ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 01:59 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:24 ರಿಂದ 04:48 ರವರೆಗೆ.
ತುಲಾ ರಾಶಿ: ಬೆಲೆ ಇರುವಲ್ಲಿ ಮಾತ್ರ ಬೆಲೆಕೊಡಿ. ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ದೇಹ ಪೀಡೆಯು ಅಧಿಕವಾಗಿ ಕಾಣಿಸಿಕೊಳ್ಳುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಬಹುದು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ, ಅದಕ್ಕೆ ಕಾರಣ ಸುಖವಿದೆ ಎಂಬುಸ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಸಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ನಿಮ್ಮ ನಿರ್ಧಾರಗಳಿಂದ ನಿಮಗೇ ಅಸಮಾಧಾನ.
ವೃಶ್ಚಿಕ ರಾಶಿ: ಹಿರಿಯರಿಂದ ಬದುಕಿಗೆ ಕಿವಿಮಾತು ಸಿಗುವುದು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸದ ಕನಸು ಬಂಧುಗಳ ಸಹಕಾರದಿಂದ ಆಗಲಿದೆ. ಧಾರ್ಮಿಕ ಸ್ಥಳಗಳ ಭೇಟಿಯೂ ಆಗಲಿದೆ. ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಂಡು ಸಮಾಧಾನವಾಗುವುದು. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡುವಿರಿ. ಉತ್ತಮ ಭೋಜನವನ್ನು ಇಂದು ಲಭ್ಯವಿದೆ. ಪಕ್ಷಪಾತ ಮಕ್ಕಳ ವಿಚಾರದಲ್ಲಿ ಮಾಡುವುದು ಬೇಡ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.
ಧನು ರಾಶಿ: ನಿಮ್ಮ ಬದುಕಿಗೆ ಏನಾದರೂ ಹೊಸತು ಬೇಕು ಎನಿಸಬಹುದು. ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಹೊಂದಾಣಿಕೆಯ ಮನೋಭಾವವು ನಿಮ್ಮಲ್ಲಿ ಇರದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರವು ಸಿಗದು. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ. ಪ್ರಯಾಣದಲ್ಲಿ ನಿಮಗೆ ಜಾಗರೂಕತೆ ಇರಲಿ. ಅವಕಾಶವನ್ನು ಬಳಸಿಕೊಂಡು ಏನಾದರೂ ಸಾಧಿಸುವ ಛಲ ಬರುವುದು.
ಮಕರ ರಾಶಿ: ಪ್ರೀತಿಸುವ ಜನರನ್ನು ನೀವು ಉಳಿಸಿಕೊಳ್ಳಲಾಗದು. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮಕ್ಕಳ ಬಗ್ಗೆ ಕನಿಕರ ಬರಬಹುದು. ಹೊರಗಿನ ಆಹಾರದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳುವಿರಿ. ನಿಮ್ಮ ಚೌಕಟ್ಟಿನಲ್ಲಿ ಕೆಲಸವನ್ನು ಮಾಡಿ. ಮರೆತ ವಿಷಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ. ಕೆಲಸವು ಅಪೂರ್ಣವಾಗಿ ನೀವು ಆದಷ್ಟು ಬೇಗ ಮುಗಿಸುವ ತವಕದಲ್ಲಿ ಇರುವಿರಿ. ದಾಂಪತ್ಯದ ವಿರಸವು ಬಗೆ ಹರಿಸಿಕೊಳ್ಳುವಿರಿ.
ಕುಂಭ ರಾಶಿ: ಜನಇಂದು ನಿಮ್ಮವರ ಅವಶ್ಯಕತೆ ತಿಳಿಯುವುದು. ಮನೆಯ ಕೆಲಸದಿಂದ ನಿಮಗೆ ಆಯಾಸವಾಗುವುದು. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ಯಾರಾದರೂ ನಿಮಗೆ ಬೇಜಾರು ಮಾಡಿಸುವರು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ. ಇಬ್ಬಗೆಯ ಮಾನಸಿಕತೆಯು ಬೇಡ. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ಸ್ವಲ್ಪ ನೆಮ್ಮದಿ ಸಿಗಲಿದೆ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಕಾರ್ಯದಿಂದ ಪರಿಣತಿಯನ್ನು ಪಡೆಯುವಿರಿ.
ಮೀನ ರಾಶಿ; ಜಂಟಿಯಾಗಿ ನಿರ್ವಹಣೆ ಮಾಡುವುದು ಕಾರ್ಯದಲ್ಲಿ ಕಷ್ಟವಾಗುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ. ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಹೂಡಿಕೆ ಯಾರಾದರೂ ಒತ್ತಾಯ ಮಾಡಬಹುದು. ಇಂದು ನಿಮಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡಿ. ಬೇರೆಯವರ ಬಗ್ಗೆ ಚಿಂತೆ ಬೇಡ. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವು ಇರುವದು.