ಬಿಹಾರದಲ್ಲಿ ಕೊವಿಡ್ ಲಾಕ್​ಡೌನ್ ಮೇ 25ರ ವರೆಗೆ ವಿಸ್ತರಣೆ: ನಿತೀಶ್ ಕುಮಾರ್

Bihar Lockdown : ಲಾಕ್‌ಡೌನ್ ಸಕಾರಾತ್ಮಕ ಪರಿಣಾಮ ಬೀರುತ್ತಿರುವುದನ್ನು ನಾವು ನೋಡಬಹುದು. ಆದ್ದರಿಂದ, 2021 ರ ಮೇ 16-25 ರಿಂದ ರಾಜ್ಯಕ್ಕೆ ಲಾಕ್‌ಡೌನ್ ಅನ್ನು 10 ದಿನಗಳವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಬಿಹಾರದಲ್ಲಿ ಕೊವಿಡ್ ಲಾಕ್​ಡೌನ್ ಮೇ 25ರ ವರೆಗೆ ವಿಸ್ತರಣೆ: ನಿತೀಶ್ ಕುಮಾರ್
ನಿತೀಶ್ ಕುಮಾರ್

Updated on: May 13, 2021 | 3:23 PM

ಪಟನಾ: ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಬಿಹಾರದಲ್ಲಿ ಲಾಕ್​ಡೌನ್ ಮೇ 25ರ ವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಈಗಿರುವ ಲಾಕ್​ಡೌನ್ ಗಿಂತ ಹೆಚ್ಚುವರಿ 10 ದಿನ ಲಾಕ್​ಡೌನ್ ಮುಂದುವರಿಸಿದ್ದು ಮೇ 16ರಿಂದ 25ರವೆರೆಗೆ ಲಾಕ್​ಡೌನ್ ವಿಸ್ತರಣೆ ಆಗಿದೆ.  ಬಿಹಾರದಲ್ಲಿ ಈಗಿರುವ ಲಾಕ್‌ಡೌನ್ ಅನ್ನು ಸಚಿವಾಲಯದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗಿದೆ.

ಲಾಕ್‌ಡೌನ್ ಸಕಾರಾತ್ಮಕ ಪರಿಣಾಮ ಬೀರುತ್ತಿರುವುದನ್ನು ನಾವು ನೋಡಬಹುದು. ಆದ್ದರಿಂದ, 2021 ರ ಮೇ 16-25 ರಿಂದ ರಾಜ್ಯಕ್ಕೆ ಲಾಕ್‌ಡೌನ್ ಅನ್ನು 10 ದಿನಗಳವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.


ಮೇ 4 ರಂದು ದೈನಂದಿನ ಕೊವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಬಿಹಾರ ಸರ್ಕಾರದ ಬಿಕ್ಕಟ್ಟು ನಿರ್ವಹಣೆ ತಂಡವು ಮೇ 5-15 ರಿಂದ ರಾಜ್ಯದಲ್ಲಿ 10 ದಿನಗಳ ಲಾಕ್​ಡೌನ್ ವಿಧಿಸಲು ನಿರ್ಧರಿಸಿತ್ತು. ಇದಾದ ಮರುದಿನ ಮುಖ್ಯ ಕಾರ್ಯದರ್ಶಿ ತಿರುಪುರಾರಿ ಶರಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರ ಕೈಗೊಂಡ ನಿರ್ಧಾರವು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಪಟನಾ ಹೈಕೋರ್ಟ್ ಟೀಕೆ ಮಾಡಿತ್ತು.


ಲಾಕ್‌ಡೌನ್‌ನ ಮೊದಲ ಹಂತದಲ್ಲಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚುವಂತೆ ನಿರ್ದೇಶಿಸಲಾಯಿತು. ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಆಂಬ್ಯುಲೆನ್ಸ್ ಸೇವೆಗಳು ಮತ್ತು ಅಗತ್ಯ ಸೇವೆಗಳಾದ ನಾಗರಿಕ ರಕ್ಷಣಾ, ವಿದ್ಯುತ್ ಸರಬರಾಜು, ನೀರು ಸರಬರಾಜು, ಅಗ್ನಿಶಾಮಕ ಸೇವೆಗಳು, ಪಶುವೈದ್ಯಕೀಯ ಕೆಲಸ, ಅಂಚೆ ಮತ್ತು ದೂರಸಂಪರ್ಕ ಇತ್ಯಾದಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ: ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ

ಕೊವಿಡ್ ಪರಿಹಾರ ನಿಧಿಗೆ ಸಚಿವರ 1 ವರ್ಷದ ವೇತನ ನೀಡುವಂತೆ ಸಿಎಂ ಸೂಚನೆ