Jugaad Ambulance: ಕೊವಿಡ್ ರೋಗಿಗಳಿಗೆ ಸಹಾಯ: ಪುಣೆ ಆಟೊ ಚಾಲಕರಿಂದ ‘ಜುಗಾಡ್ ಆಂಬುಲೆನ್ಸ್’ ಸೇವೆ
Jugaad Ambulance Service: ಕೇಶವ್ ಕ್ಷೀರ್‌ಸಾಗರ್ ಎಂಬ ವ್ಯಕ್ತಿ ಜುಗಾಡ್ ಆಂಬುಲೆನ್ಸ್ ಆರಂಭಿಸಿದ್ದು ಮೂರು ಆಟೊಗಳಲ್ಲಿ ಆಕ್ಸಿಜನ್ ಸೌಲಭ್ಯವಿರಿಸಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕಷ್ಟಪಡುವವರಿಗೆ ಈ ಜುಗಾಡ್ ಆಟೊಗಳು ನೆರವಿಗೆ ಬರುತ್ತವೆ.ಈ ಆಮ್ಲಜನಕ ಸಿಲಿಂಡರ್‌ಗಳು 6-7 ಗಂಟೆಗಳವರೆಗೆ ಇರುತ್ತವೆ.
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಕೊವಿಡ್ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದಿರುವ ಆಟೋ ಚಾಲಕರ ಗುಂಪೊಂದು ಜುಗಾಡ್ ಆಂಬುಲೆನ್ಸ್ ಸೇವೆ ಆರಂಭಿಸಿದೆ. ಪುಮೆ ನಗರದಲ್ಲಿ ಕೊವಿಡ್ ರೋಗಿಗಳನ್ನು ಕರೆದೊಯ್ಯಲು ಆಟೊಗಳನ್ನೇ ಇವರು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಕೇಶವ್ ಕ್ಷೀರ್‌ಸಾಗರ್ ಎಂಬ ವ್ಯಕ್ತಿ ಜುಗಾಡ್ ಆಂಬುಲೆನ್ಸ್ ಆರಂಭಿಸಿದ್ದು ಮೂರು ಆಟೊಗಳಲ್ಲಿ ಆಕ್ಸಿಜನ್ ಸೌಲಭ್ಯವಿರಿಸಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕಷ್ಟಪಡುವವರಿಗೆ ಈ ಜುಗಾಡ್ ಆಟೊಗಳು ನೆರವಿಗೆ ಬರುತ್ತವೆ. ಈ ಆಮ್ಲಜನಕ ಸಿಲಿಂಡರ್‌ಗಳು 6-7 ಗಂಟೆಗಳವರೆಗೆ ಇರುತ್ತವೆ. ರೋಗಿಗಳು ನಮ್ಮನ್ನು ಸಂಪರ್ಕಿಸುವ ಸಹಾಯವಾಣಿ ಸಂಖ್ಯೆ ನಮ್ಮಲ್ಲಿದೆ. ರೋಗಿಗಳಿಗೆ ಆಮ್ಲಜನಕವನ್ನು ಹೇಗೆ ನೀಡಬೇಕೆಂದು ನಾವು ನಮ್ಮ ಚಾಲಕರಿಗೆ ತರಬೇತಿ ನೀಡಿದ್ದೇವೆ ಮತ್ತು ಅವರು ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ವೈದ್ಯರ ತಂಡವೂ ಇದೆ ಅಂತಾರೆ ಕ್ಷೀರ್‌ಸಾಗರ್.
ಕೊವಿಡ್ -19 ನಿಂದ ಬಳಲುತ್ತಿರುವ ಜನರು ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯುವುದು ಕಷ್ಟಕರವಾಗಿತ್ತು, ಆದ್ದರಿಂದ ನಾವು ಅವರಿಗೆ ಸಹಾಯ ಮಾಡಲು ಮೂರು ಆಟೋಗಳಲ್ಲಿ ಆಮ್ಲಜನಕದ ಸಪೋರ್ಟ್ ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.
Maharashtra | A group of auto drivers in Pune started an initiative ‘Jugaad Ambulance’ to ferry #COVID19 patients in city
“People were finding it difficult to get a bed so we installed oxygen support in 3 autos,” says Dr Keshav Kshirsagar, initiative leader pic.twitter.com/JCLShVzWO5
— ANI (@ANI) May 13, 2021
Pune | These oxygen cylinders can last up to 6-7 hrs. We have a helpline number through which patients contact us. We’ve trained our drivers how to give oxygen to patients & they also take full precautions. We also have a doctors team: Dr Keshav Kshirsagar pic.twitter.com/RdvRwrNsRu
— ANI (@ANI) May 13, 2021
ಟ್ವಿಟರ್ನಲ್ಲಿ ಟ್ವೀಟಿಗರು ಈ ಆಟೊ ಚಾಲಕರನ್ನು ಶ್ಲಾಘಿಸಿದ್ದು ಇವರೇ ನಿಜವಾದ ಕೊವಿಡ್ ವಾರಿಯರ್ಸ್ ಎಂದಿದ್ದಾರೆ.
We should salute our real soldiers who don’t have political background otherwise otherwise it becomes state vs central. You are our Real Heros @SonuSood
— Parikshit (@pariksh95167182) May 13, 2021
Shame on the govt. Agencies and people in power. Humanity at its bloom… Salute.
— Biswa (@biswabhusan_m) May 13, 2021
ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 46,781 ಹೊಸ ಪ್ರಕರಣಗಳು ಮತ್ತು 816 ಹೆಚ್ಚಿನ ಸಾವು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳ ದೈನಂದಿನ ಸಂಖ್ಯೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ವರದಿಗಳು ತಿಳಿಸಿವೆ.
ಬುಧವಾರ 58,805 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಸಂಖ್ಯೆ 4.6 ದಶಲಕ್ಷ ದಾಟಿದೆ. ಚೇತರಿಕೆ ದರವು ಪ್ರಸ್ತುತ ಶೇಕಡಾ 88.01 ರಷ್ಟಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್ಡೌನ್ ವಿಸ್ತರಣೆ; ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಕೊವಿಡ್ ಪರಿಹಾರ ನಿಧಿಗೆ ಸಚಿವರ 1 ವರ್ಷದ ವೇತನ ನೀಡುವಂತೆ ಸಿಎಂ ಸೂಚನೆ
(Maharashtra’s Pune Auto Drivers Start Jugaad Ambulance Service to Help COVID19 Patients)
Published On - 4:00 pm, Thu, 13 May 21