ಕಳೆದ ಎರಡು ವಾರಗಳಲ್ಲಿ 187 ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣ ಇಳಿಮುಖ: ಕೇಂದ್ರ ಆರೋಗ್ಯ ಸಚಿವಾಲಯ

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಒಟ್ಟಾರೆಯಾಗಿ ದೇಶದಲ್ಲಿ ಕಳೆದ ಒಂದು ವಾರದಲ್ಲಿ ಪಾಸಿಟಿವಿಟಿ ದರ ಶೇ 21.95ರಿಂದ 21.01ಕ್ಕೆ ಇಳಿಕೆ ಆಗಿದೆ  ಎಂದಿದ್ದಾರೆ.

ಕಳೆದ ಎರಡು ವಾರಗಳಲ್ಲಿ 187 ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣ ಇಳಿಮುಖ: ಕೇಂದ್ರ ಆರೋಗ್ಯ ಸಚಿವಾಲಯ
ವಿ.ಕೆ. ಪೌಲ್
Follow us
ರಶ್ಮಿ ಕಲ್ಲಕಟ್ಟ
|

Updated on:May 13, 2021 | 5:33 PM

ದೆಹಲಿ: ಮೇ 3 ರಿಂದ ದೇಶದಲ್ಲಿ ಚೇತರಿಕೆ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕಳೆದ 2 ವಾರಗಳಿಂದ 187 ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣಗಳು ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಒಟ್ಟಾರೆಯಾಗಿ ದೇಶದಲ್ಲಿ ಕಳೆದ ಒಂದು ವಾರದಲ್ಲಿ ಪಾಸಿಟಿವಿಟಿ ದರ ಶೇ 21.95ರಿಂದ 21.01ಕ್ಕೆ ಇಳಿಕೆ ಆಗಿದೆ  ಎಂದಿದ್ದಾರೆ. ಕಳೆದ 3 ದಿನಗಳಿಂದ ಸಾವಿನ ಪ್ರಕರಣಗಳಲ್ಲಿ ಏರಿಳಿಕೆಯೇನೂ ಕಂಡುಬಂದಿಲ್ಲ. 12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಇಲ್ಲಿಯವರೆಗೆ 17.72 ಕೋಟಿ ಕೊವಿಡ್ ಲಸಿಕೆ ಡೋಸ್ ವಿತರಣೆಯಾಗಿದೆ. ನಾಗಪುರ,ಅಹಮದಾಬಾದ್,ನಾಸಿಕ್,ವಾರಣಾಸಿ,ಲಕ್ನೋ ದಲ್ಲಿ ಕಡಿಮೆ ಆಗುತ್ತಿದೆ ಚೆನ್ನೈ,ಎರ್ನಾಕುಲಂ,ಮಲಪ್ಪುರಂ,ಕೊಲ್ಕತ್ತಾ,ಜೈಪುರ,ಡೆಹರಡೂನ್,ತುಮಕೂರು ಜಿಲ್ಲೆಗಳಲ್ಲಿ ಪ್ರಕರಣ  ಹೆಚ್ಚಾಗುತ್ತಿದೆ.

ವೈರಸ್ ಸರಪಳಿಯನ್ನು ಮುರಿಯಲು ಕಟ್ಟುನಿಟ್ಟಾದ ನಿಯಂತ್ರಣವು ಪ್ರಮುಖವಾದುದು ಎಂದು ಹೇಳಿದ ಲವ್ ಅಗರವಾಲ್ ,ಛತ್ತೀಸಗಡದ ರಾಯ್‌ಪುರದ ಉದಾಹರಣೆಯನ್ನು ನೀಡಿದರು. ಅಲ್ಲಿ ಪಾಸಿಟಿವಿಟಿ ದರ ಮೊದಲು ಶೇಕಡಾ 54.6 ಕ್ಕೆ ತಲುಪಿತ್ತು ಆದರೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳ ನಂತರ ಈಗ ಪಾಸಿಟಿವಿಟಿದರ ಶೇ19ಕ್ಕೆ ಇಳಿಕೆಯಾಗಿದೆ.

ಭಾರತದಲ್ಲಿ ಕೊವಿಡ್ ಲಸಿಕೆಯ ಸುಮಾರು 18 ಕೋಟಿ ಡೋಸ್ ನೀಡಲಾಗಿದೆ. ಅಮೆರಿಕದಲ್ಲಿ ಸುಮಾರು 26 ಕೋಟಿಗಳಷ್ಟು ಕೊವಿಡ್ ಲಸಿಕೆ ನೀಡಲಾಗಿದೆ. ಆದ್ದರಿಂದ, ಚೀನಾ ನಂತರ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯ ಮುಖ್ಯಾಂಶಗಳು

ಉತ್ಪಾದನೆಗಾಗಿ ಕೊವಾಕ್ಸಿನ್ ಅನ್ನು ಇತರ ಕಂಪನಿಗಳಿಗೆ ನೀಡಬೇಕೆಂದು ಜನರು ಹೇಳುತ್ತಾರೆ. ಕೊವಾಕ್ಸಿನ್ ಉತ್ಪಾದನಾ ಕಂಪನಿ (ಭಾರತ್ ಬಯೋಟೆಕ್) ನಾವು ಅವರೊಂದಿಗೆ ಚರ್ಚಿಸಿದಾಗ ಇದನ್ನು ಸ್ವಾಗತಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ಲಸಿಕೆ ಅಡಿಯಲ್ಲಿ ಲೈವ್ ವೈರಸ್ ನಿಷ್ಕ್ರಿಯಗೊಂಡಿದೆ ಮತ್ತು ಇದನ್ನು ಬಿಎಸ್ಎಲ್ 3 ಲ್ಯಾಬ್‌ಗಳಲ್ಲಿ ಮಾತ್ರ ಮಾಡಲಾಗುತ್ತದೆ.

ಪ್ರತಿಯೊಂದು ಕಂಪನಿಯು ಇದನ್ನು ಹೊಂದಿಲ್ಲ. ಇದನ್ನು ಮಾಡಲು ಬಯಸುವ ಕಂಪನಿಗಳಿಗೆ ನಾವು ಮುಕ್ತ ಆಹ್ವಾನವನ್ನು ನೀಡುತ್ತೇವೆ. ಕೊವಾಕ್ಸಿನ್ ತಯಾರಿಸಲು ಬಯಸುವ ಕಂಪನಿಗಳು ಇದನ್ನು ಒಟ್ಟಾಗಿ ಮಾಡಬೇಕು. ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ, ಆಗಸ್ಟ್-ಡಿಸೆಂಬರ್ ನಡುವೆ ಭಾರತದಲ್ಲಿ ಮತ್ತು ಭಾರತೀಯರಿಗಾಗಿ 216 ಕೋಟಿ ಡೋಸ್ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆ ಎಲ್ಲರಿಗೂ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬಂದಿದೆ. ಮುಂದಿನ ವಾರ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿ ಎಂದು ನಾವು ಆಶಿಸುತ್ತೇವೆ. ಅಲ್ಲಿಂದ (ರಷ್ಯಾ) ಬಂದಿರುವ ಸೀಮಿತ ಪೂರೈಕೆಯ ಮಾರಾಟ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ಆಶಿಸಿದ್ದೇವೆ.

ಹೆಚ್ಚಿನ ಪೂರೈಕೆಯೂ ಆಗಲಿದೆ. ಇದರ ಉತ್ಪಾದನೆಯು ಜುಲೈನಲ್ಲಿ ಪ್ರಾರಂಭವಾಗಲಿದೆ ಮತ್ತು ಆ ಅವಧಿಯಲ್ಲಿ 15.6 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಾಗುವುದು ಎಂದು ಅಂದಾಜಿಸಲಾಗಿದೆ. ಜೈವಿಕ ತಂತ್ರಜ್ಞಾನ ವಿಭಾಗ, ಸಂಬಂಧಪಟ್ಟ ಇತರ ಇಲಾಖೆಗಳು, ಎಂಇಎ ಮೊದಲಿನಿಂದಲೂ ಫೈಜರ್, ಮಾಡರ್ನಾ, ಜಾನ್ಸನ್ ಆಂಡ್ ಜಾನ್ಸನ್‌ರೊಂದಿಗೆ ಸಂಪರ್ಕದಲ್ಲಿದೆ. ಅವರು ಭಾರತಕ್ಕೆ ಡೋಸ್ ಕಳುಹಿಸಲು ಅಥವಾ ತಯಾರಿಸಲು ಬಯಸುತ್ತೀರಾ ಎಂದು ಅವರನ್ನು ಅಧಿಕೃತವಾಗಿ ಕೇಳಲಾಯಿತು, ನಾವು ಪಾಲುದಾರರನ್ನು ಹುಡುಕುತ್ತೇವೆ ಮತ್ತು ಸಹಾಯ ಮಾಡುತ್ತೇವೆ:

ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಕ್ಯೂ 3 ನಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾತನಾಡುತ್ತೇವೆ ಎಂದು ಅವರು ಹೇಳಿದ್ದರು. ನಾವು ಅವರೊಂದಿಗೆ ಸಂಪರ್ಕ ಹೊಂದಿದ್ದೇವೆ. ಭಾರತದಲ್ಲಿ ಲಭ್ಯತೆಯನ್ನು ಹೆಚ್ಚಿಸಲು ಅವರು ಮುಂದೆ ಹೆಜ್ಜೆ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ

ನಮ್ಮ ಕಂಪನಿಗಳೊಂದಿಗೆ ಇಲ್ಲಿ ತಯಾರಿಸಲು ನಾವು ಅವರನ್ನು ಆಹ್ವಾನಿಸುತ್ತೇವೆ. ಜಾನ್ಸನ್ ಆಂಡ್ ಜಾನ್ಸನ್ ಉತ್ತಮ ಕೆಲಸ ಮಾಡಿದರು, ಅವರು ಕ್ವಾಡ್ ಅಡಿಯಲ್ಲಿ ಈ ಪ್ರಸ್ತಾಪವನ್ನು ಸ್ವೀಕರಿಸಿದರು

ಎಫ್‌ಡಿಎ, ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಯಾವುದೇ ಲಸಿಕೆ ಭಾರತಕ್ಕೆ ಬರಬಹುದು. 1-2 ದಿನಗಳಲ್ಲಿ ಆಮದು ಪರವಾನಗಿ ನೀಡಲಾಗುವುದು. ಯಾವುದೇ ಆಮದು ಪರವಾನಗಿ ಬಾಕಿ ಉಳಿದಿಲ್ಲ.

45 ಮತ್ತು ಅದಕ್ಕಿಂತ ಹೆಚ್ಚಿನದರಲ್ಲಿ 1/3 ಭಾಗವನ್ನು ರಕ್ಷಿಸಲಾಗಿದೆ ಎಂದು ವರದಿ ಮಾಡಲು ನಮಗೆ ಸಂತೋಷವಾಗಿದೆ. 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಶೇ 88ರಷ್ಟು ಸಾವುಗಳಿಗೆ ಕಾರಣರಾಗಿದ್ದಾರೆ. ಆದ್ದರಿಂದ ಈ ಜನಸಂಖ್ಯೆಯ ಸಾವಿನ ಅಪಾಯವನ್ನು ಕಡಿಮೆ ಮಾಡಲು ಅದು ಎಷ್ಟು ಸಹಕಾರಿ ಎಂಬುದನ್ನು ನೀವು ಅಂದಾಜಿಸಬಹುದು

ಕೊವಿಡ್ ಲಸಿಕೆಯ 17.72 ಕೋಟಿ ಡೋಸ್‌ಗಳನ್ನು ಈವರೆಗೆ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್

ಭಾರತದಲ್ಲಿ 83.26 ರಿಕವರಿ ರೇಟ್ ಇದೆ. ಕಳೆದ ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದು 20%ಕ್ಕೂ ಕಡಿಮೆ ಪಾಸಿಟಿವಿಟಿ ರೇಟ್ ಇದೆ.  ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳು 12 ರಾಜ್ಯದಲ್ಲಿದೆ ಕರ್ನಾಟಕ ಸಕ್ರಿಯ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ.  15% ಹೆಚ್ಚು ಪಾಸಿಟಿವಿ ರೇಟ್ 24 ರಾಜ್ಯಗಳಲ್ಲಿದೆ 5ರಿಂದ 15ರ ವರೆಗೆ ಪಾಸಿಟಿವಿಟಿ ರೇಟ್ 8 ರಾಜ್ಯಗಳಲ್ಲಿದೆ. ಪಾಸಿಟಿವಿಟ್ ರೇಟ್ ನಲ್ಲಿ ಕರ್ನಾಟಕ ನಾಲ್ಕನೇ‌ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಗೋವಾದ ಪಾಸಿಟಿವಿಟಿ ದರ 48.1%.

ಇದನ್ನೂ ಓದಿ: Jugaad Ambulance: ಕೊವಿಡ್ ರೋಗಿಗಳಿಗೆ ಸಹಾಯ: ಪುಣೆ ಆಟೊ ಚಾಲಕರಿಂದ ಜುಗಾಡ್ ಆಂಬುಲೆನ್ಸ್ ಸೇವೆ

Published On - 5:03 pm, Thu, 13 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್