ತಮಿಳುನಾಡು: ಹಲೋ ಹಲೋ ಕ್ಷೌರವೇಷ ಇದೇನಿದು ಹೊಸ ವೇಷ

|

Updated on: Apr 05, 2024 | 8:51 AM

 ಚುನಾವಣೆ ಹತ್ತಿರ ಬಂದ ತಕ್ಷಣ ಅಭ್ಯರ್ಥಿಗಳು ಸಾರ್ವಜನಿಕರನ್ನು ಓಲೈಸಲು ನಾನಾ ತಂತ್ರಗಳನ್ನು ಹೆಣೆಯುತ್ತಾರೆ. ಕೆಲವರು ಜನಪರವಾದ ಭರವಸೆಗಳನ್ನು ನೀಡಿದರೆ ಇಲ್ಲೊಬ್ಬ ಸ್ವತಂತ್ರ ಅಭ್ಯರ್ಥಿ ಒಂದು ದಿನದ ಮಟ್ಟಿಗೆ ಕ್ಷೌರಿಕನಾಗಿದ್ದಾರೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಈ ಘಟನೆ ನಡೆದಿದೆ. ಅಭ್ಯರ್ಥಿಯೊಬ್ಬರು ಸಲೂನ್​ನಲ್ಲಿ ಕ್ಷೌರ ಮಾಡುತ್ತಿರುವುದು ಕಂಡುಬಂದಿದೆ.

ತಮಿಳುನಾಡು: ಹಲೋ ಹಲೋ ಕ್ಷೌರವೇಷ ಇದೇನಿದು ಹೊಸ ವೇಷ
ಪಾರಿರಾಜನ್
Follow us on

ಚುನಾವಣೆ ಹತ್ತಿರ ಬಂದ ತಕ್ಷಣ ಅಭ್ಯರ್ಥಿಗಳು ಸಾರ್ವಜನಿಕರನ್ನು ಓಲೈಸಲು ನಾನಾ ತಂತ್ರಗಳನ್ನು ಹೆಣೆಯುತ್ತಾರೆ. ಕೆಲವರು ಜನಪರವಾದ ಭರವಸೆಗಳನ್ನು ನೀಡಿದರೆ ಇಲ್ಲೊಬ್ಬ ಸ್ವತಂತ್ರ ಅಭ್ಯರ್ಥಿ ಒಂದು ದಿನದ ಮಟ್ಟಿಗೆ ಕ್ಷೌರಿಕನಾಗಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ಈ ಘಟನೆ ನಡೆದಿದೆ. ಅಭ್ಯರ್ಥಿಯೊಬ್ಬರು ಸಲೂನ್​ನಲ್ಲಿ ಕ್ಷೌರ ಮಾಡುತ್ತಿರುವುದು ಕಂಡುಬಂದಿದೆ.

ಎಎನ್​ಐ ವಿಡಿಯೋವನ್ನು ಹಂಚಿಕೊಂಡಿದೆ, ಇದರಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿರುವ ಅಭ್ಯರ್ಥಿ ಕ್ಷೌರಿಕ ಕೆಲಸವನ್ನು ಮಾಡುತ್ತಿರುವುದನ್ನು ಕಾಣಬಹುದು. ಸ್ವತಂತ್ರ ಅಭ್ಯರ್ಥಿ ಪಾರಿರಾಜನ್ ಚುನಾವಣಾ ಪ್ರಚಾರದ ಸಮಯದಲ್ಲಿ ಒಂದು ದಿನ ಕ್ಷೌರಿಕನಾಗಿ ಕೆಲಸ ಮಾಡಿದ್ದಾರೆ.

ಈ ವಿಡಿಯೋವನ್ನು 28 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ವಿಡಿಯೋಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಸಾರ್ವಜನಿಕರ ಸೇವಕರಾಗಲು ಪ್ರಯತ್ನಿಸುತ್ತಿದ್ದಾರೆ ಗೆದ್ದ ನಂತರ ಈ ಕಡೆಗೆ ತಿರುಗಿಯೂ ನೋಡುವುದಿಲ್ಲ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಕಾಂಗ್ರೆಸ್, ಡಿಎಂಕೆ ಮೈತ್ರಿ: 9 ಕ್ಷೇತ್ರದಲ್ಲಿ ಕಾಂಗ್ರೆಸ್​ ಸ್ಪರ್ಧೆ

ನನ್ನನ್ನು ಜನರು ಜನಸಾಮಾನ್ಯನಂತೆ ಕಾಣಬೇಕು ಎನ್ನುವುದು ನನ್ನ ಆಶಯ ಎಂದು ಪಾರಿರಾಜನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಗೋರಖ್ ಪುರದಲ್ಲಿ ಅಭ್ಯರ್ಥಿ ರವಿ ಕಿಶನ್ ಟೀ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ರವಿ ಕಿಶನ್ ಗೋರಖ್ ಪುರದಲ್ಲಿ ಜನಸಂಪರ್ಕ ಅಭಿಯಾನ ನಡೆಸುತ್ತಿದ್ದರು.ಪ್ರಚಾರದ ವೇಳೆ ಟೀ ಅಂಗಡಿಯೊಂದರಲ್ಲಿ ನಿಲ್ಲಿಸಿ ನಂತರ ಶುಂಠಿ ಪುಡಿ ಮಾಡಿ ಟೀ ಮಾಡಿದ್ದರು.

ಲೋಕಸಭೆ ಚುನಾವಣೆಯ ಉತ್ಸಾಹ ಈಗ ತೀವ್ರವಾಗಿದೆ, ಚುನಾವಣಾ ಪ್ರಚಾರಕ್ಕಾಗಿ ಚುನಾವಣಾ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ.

ಪಾರಿರಾಜನ್ ವಿಡಿಯೋ 

ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿವೆ. ಇದಲ್ಲದೇ ಎಲ್ಲ ಅರ್ಹ ಮತದಾರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ತಿದ್ದುಪಡಿ ತರುತ್ತಿದೆ. ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಸಾಕಷ್ಟು ಮುಂಚಿತವಾಗಿ ಬಿಡುಗಡೆ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:50 am, Fri, 5 April 24