Lok Sabha Elections 2024: ಬಿಜೆಪಿ ವಿಷಪೂರಿತ ಹಾವಿಗಿಂತ ಕೆಟ್ಟದ್ದು ಎಂದ ಮಮತಾ ಬ್ಯಾನರ್ಜಿ
ಬಿಜೆಪಿ ವಿಷಪೂರಿತ ಹಾವಿಗಿಂತ ಕೆಟ್ಟದ್ದು, ಹಾವನ್ನಾದರೂ ನಂಬಬಹುದು ಆದರೆ ಬಿಜೆಪಿಯ ನಂಬಲಾಗದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಹೇಳಿದ್ದಾರೆ. ಗುರುವಾರ ಪಶ್ಚಿಮ ಬಂಗಾಳದ ಕೂಚ್ ಬಿಹಾರದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದರು.

2024 ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಬಿಜೆಪಿ ಚುನಾವಣಾ ನೀತಿ ಸಂಹಿತೆ ಪಾಲಿಸುತ್ತಿಲ್ಲ. ಶಿತಾಲ್ಕುಚಿಯಲ್ಲಿ ಗುಂಡಿಕ್ಕಿ ಕೊಂದವರು ಈಗ ಬಿರ್ಭೂಮ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ 3 ವರ್ಷಗಳಿಂದ ವಸತಿ ಯೋಜನೆಗೆ ಹಣ ನೀಡುತ್ತಿಲ್ಲ, ರಸ್ತೆ ಹಣ ನೀಡುತ್ತಿಲ್ಲ, ಬಂಗಾಳ ಉಳಿದರೆ ದೇಶ ಉಳಿಯುತ್ತದೆ. ಕೇಂದ್ರ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಮತ್ತಷ್ಟು ಓದಿ: ತೃಣಮೂಲ ಸಂಸ್ಥಾಪನಾ ದಿನ; ಜನರ ಹಕ್ಕುಗಳನ್ನು ಕಾಪಾಡುವ ಹೋರಾಟ ಮುಂದುವರಿಸುವೆ: ಮಮತಾ ಬ್ಯಾನರ್ಜಿ
ಬಿಜೆಪಿ ಒಂದು ರಾಷ್ಟ್ರ, ಒಂದು ಪಕ್ಷ ಸಿದ್ಧಾಂತವನ್ನು ಅನುಸರಿಸುತ್ತಿದೆ, ಕೇಂದ್ರೀಯ ತನಿಖಾ ಸಂಸ್ಥೆಗಳ ಮುಂದೆ ತನ್ನ ಪಕ್ಷ ಟಿಎಂಸಿ ತಲೆ ಬಾಗದು, ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್‌ಎಫ್ ಸ್ಥಳೀಯರಿಗೆ ಕಿರುಕುಳ ನೀಡುವ ಘಟನೆಗಳು ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಹೇಳಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ತರಲು ನಾವು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ