ಮುಂಬರಲಿರುವ ಲೋಕಸಭಾ ಚುನಾವಣೆ(Lok Sabha Election)ಗೆ ಸಮಾಜವಾದಿ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಕಾಪಾಡುವುದು, ಮಾಧ್ಯಮ ಸ್ವಾತಂತ್ರ್ಯ ಇತ್ಯಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ.
2025ರಲ್ಲಿ ಜಾತಿ ಗಣತಿ ಹಾಗೂ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸಲಾಗುವುದು, ಹಾಲು ಸೇರಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್ಪಿ ಕಲ್ಪಿಸಲಾಗುವುದು, ಕಾನೂನಿನ ಭರವಸೆ ಸೇರಿದಂತೆ ರೈತರಿಗೆ ಉಚಿತ ನೀರಾವರಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಹಾಗೂ ಉಚಿತ ಶಿಕ್ಷಣ ನೀಡಲಾಗುವುದು, ಜಿಡಿಪಿಯನ್ನು ಮೂರರಿಂದ ಆರಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.
-ವರ್ಷಾಂತ್ಯದೊಳಗೆ ರೈತರ ಸಾಲ ಮನ್ನಾ
-ರೈತ ಆಯೋಗ ರಚನೆ
-ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ
-ಪ್ರತಿ 10 ಕಿ.ಮೀಗೆ ಕೃಷಿ ಮಾರುಕಟ್ಟೆ ನಿರ್ಮಾಣ
-ಯುವಕರಿಗೆ ಲ್ಯಾಪ್ಟಾಪ್, ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವಿಕೆ
-ಉಚಿತ ಪಡಿತರದಲ್ಲಿ ಗೋಧಿ ಹಿಟ್ಟಿನ ಬದಲಿಗೆ ಹಿಟ್ಟು ನೀಡಲಾಗುವುದು
-ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ 500 ರೂ. ಉಚಿತ ಮೊಬೈಲ್ ಡೇಟಾ.
-ಬಡ ಮಹಿಳೆಯರಿಗೆ ಮಾಸಿಕ 3000 ರೂ. ಪಿಂಚಣಿ
-ಪಿಜಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ