ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ(Rahul Gandhi) ಮತ್ತು ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್(Akhilesh Yadav) ಸಭೆಯಲ್ಲಿ ಗದ್ದಲ ಉಂಟಾಯಿತು. ಸಭೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಒಳಗೆ ಪ್ರವೇಶಿಸಿದರು. ಹಲವು ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ಪಡಿಲ ಮಹಾದೇವ್ ಫಾಫಮೌನಲ್ಲಿ ಆಯೋಜಿಸಲಾದ ಇಂಡಿಯಾ ಒಕ್ಕೂಟದ ರ್ಯಾಲಿಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿಧಾನಸಭೆ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ನೋಡಲು ಜನಸಾಗರವೇ ನೆರೆದಿತ್ತು.
ಬ್ಯಾರಿಕೇಡ್‌ಗಳನ್ನು ಮುರಿದು ಒಳಗೆ ಪ್ರವೇಶಿಸಿದರು. ಕೆಲವು ಕಾರ್ಯಕರ್ತರು ವೇದಿಕೆ ಏರಿದರು. ಇದಾದ ನಂತರ ರಾಹುಲ್ ಮತ್ತು ಅಖಿಲೇಶ್ ಕೋಪಗೊಂಡರು. ಕಾರ್ಯಕರ್ತರ ಅನುಚಿತ ವರ್ತನೆಯಿಂದ ಕುಪಿತಗೊಂಡ ಇಬ್ಬರೂ ನಾಯಕರು ಏನೂ ಮಾತನಾಡಲಿಲ್ಲ. ಇಬ್ಬರೂ ನಾಯಕರು ವೇದಿಕೆಯಿಂದ ನಿರ್ಗಮಿಸಿದರು. ಇಬ್ಬರೂ ನಾಯಕರು ಇಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದರು.
ಮತ್ತಷ್ಟು ಓದಿ:ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿರುವೆ: ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಸೋನಿಯಾ ಪ್ರಚಾರ
ಗಲಾಟೆ ಎಷ್ಟು ದೊಡ್ಡದಾಗಿದೆ ಎಂದರೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಯಾವುದೇ ಭಾಷಣ ಮಾಡದೆ ಸ್ಥಳದಿಂದ ನಿರ್ಗಮಿಸಿದರು. ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಮತ್ತು ಅಖಿಲೇಶ್ ಜಂಟಿ ಸಾರ್ವಜನಿಕ ಸಭೆ ನಡೆಯಬೇಕಿತ್ತು.
ಮಾಧ್ಯಮದವರ ಕ್ಯಾಮೆರಾ ಸ್ಟ್ಯಾಂಡ್‌ಗಳನ್ನೂ ಮುರಿದಿದ್ದಾರೆ, ಇದಕ್ಕೂ ಮೊದಲು, ರಾಂಚಿಯ ಇಂಡಿಯಾ ಬ್ಲಾಕ್‌ನ ಸಭೆಯಲ್ಲಿ ಗಲಾಟೆ ನಡೆದಿತ್ತು, ಎರಡು ಗುಂಪುಗಳ ಕಾರ್ಯಕರ್ತರು ಪರಸ್ಪರ ಘರ್ಷಣೆ ಮತ್ತು ತೀವ್ರ ಮಾರಾಮಾರಿ ನಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ