ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡನೇ ಹಂತಕ್ಕೆ ಎಲ್ಲೆಡೆ ತಯಾರಿ ನಡೆದಿದೆ. ಆದರೆ ಉತ್ತರ ಪ್ರದೇಶದ ಅಮೇಥಿ(Amethi)ಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ(Rahul Gandhi) ಹಾಗೂ ರಾಬರ್ಟ್ ವಾದ್ರಾ(Robert Vadra) ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ವಾಗ್ದಾಳಿ ನಡೆಸಿದ್ದಾರೆ. ‘ಜೀಜಾಜೀ ಕಾ ನಜರ್ ಹೈ, ಸಾಲೆ ಸಾಹಬ್ ಕ್ಯಾ ಕರೇಂಗೆ’ ಅಂದರೆ ಸ್ಥಾನದ ಮೇಲೆ ಬಾವ ಕಣ್ಣಿಟ್ಟಿದ್ದಾರೆ ರಾಹುಲ್ ಗಾಂಧಿ ಏನು ಮಾಡ್ತಾರೆ ಎನ್ನುವ ಅರ್ಥವನ್ನು ನೀಡುವಂತೆ ಸ್ಮೃತಿ ಹೇಳಿದ್ದಾರೆ.
ಬಸ್ಗಳಲ್ಲಿ ಪ್ರಯಾಣಿಸುವ ಮುನ್ನ ಕರವಸ್ತ್ರವನ್ನು ಹಾಕಿ ಸೀಟು ಹಿಡಿಯುವ ಕಾಲವೊಂದಿತ್ತು. ಈಗ ರಾಬರ್ಟ್ ವಾದ್ರಾ ಆ ಸೀಟಿನ ಮೇಲೆ ಕಣ್ಣೀಟ್ಟಿರುವ ಕಾರಣ ಆ ಆಸನದ ಮೇಲೆ ಯಾರಿಗೂ ಕೂರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಬರ್ಟ್ ವಾದ್ರಾ 2019ರಲ್ಲಿ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎನ್ನುವ ಊಹಾಪೋಹಗಳು ಹರಿದಾಡುತ್ತಿರುವ ಸಂದರ್ಭದಲ್ಲಿ ಸ್ಮೃತಿ ಈ ಹೇಳಿಕೆ ನೀಡಿದ್ದಾರೆ. ಮೇ 20ರಂದು ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಅಮೇಥಿಯಲ್ಲಿ ಮತದಾನ ನಡೆಯಲಿದೆ.
ಮತ್ತಷ್ಟು ಓದಿ: ಅಮೇಠಿ ರೈತರನ್ನು ಲೂಟಿ ಮಾಡಿದ ಗಾಂಧಿ ಕುಟುಂಬ, 600 ರೂ.ಗೆ 30 ಎಕರೆ ಭೂಮಿ ತೆಗೆದುಕೊಂಡರು: ಸ್ಮೃತಿ ಇರಾನಿ ಕಿಡಿಕಿಡಿ
ಚುನಾವಣೆಗೆ ಕೇವಲ 27 ದಿನಗಳು ಉಳಿದಿವೆ, ಆದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಐದು ವರ್ಷಗಳಲ್ಲಿ ಏನು ಮಾಡಬಲ್ಲೆ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಕೂಡ ಅವರಿಗೆ ಕಷ್ಟವಾಗುತ್ತಿರುವಂತಿದೆ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸುವ ಮೊದಲು ಮೂರು ಬಾರಿ ಸತತವಾಗಿ ಅವರು ಅಮೇಥಿಯನ್ನು ಪ್ರತಿನಿಧಿಸಿದ್ದರು. ಸೋನಿಯಾಗಾಂದಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇದನ್ನು ಕಾಂಗ್ರೆಸ್ನ ಭದ್ರಕೋಟೆ ಎಂದು ಕರೆಯಲಾಗುತ್ತಿತ್ತು.
ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಮೇಥಿಯಿಂದಲೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು, ಆಗ ಪ್ರತಿಕ್ರಿಯಿಸಿದ್ದ ರಾಹುಲ್ ಪಕ್ಷ ಏನು ಹೇಳುತ್ತದೋ ಹಾಗೆ ಕೇಳುತ್ತೇನೆ ಎಂದಿದ್ದರು.
ವಯನಾಡಿನಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಅದಾದ ಬಳಿಕ ಬೇರೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬುದರ ಬಗ್ಗೆ ತಿಳಿಸಬಹುದು ಎನ್ನುವ ಊಹಾಪೋಹಗಳು ಶುರುವಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ